ಯಾರೇ ನೋಡಿದ್ರೂ 'ಯಾಕಣ್ಣ' ಎಂದು ಹೇಳಿ ಹಾಸ್ಯ ಮಾಡುವ ಕಾಲವಿದು. ಆದರೆ, ಈ ಪದ ಬಳಕೆ ಹೆಚ್ಚಲು ರಾತ್ರೋರಾತ್ರಿ ವೈರಲ್ ಆದ ಮಹಿಳೆಯೊಬ್ಬಳ ವಿಡಿಯೋ ಕಾರಣ. ಇದೇ ಮೊದಲು ಈ ಪದ ಕೇಳುತ್ತಿರುವುದು ಎಂದಾದರೇ ಬ್ಯಾಕ್ ಗ್ರೌಂಡ್ ಸ್ಟೋರಿ ಇಲ್ಲಿದೆ ಓದಿ....

ಗಂಡನೊಂದಿಗೆ ಬಾತ್ರೂಮಲ್ಲಿ ನೋಡಬಾರದ ಸ್ಥಿತಿಯಲ್ಲಿದ್ದ ಮಹಿಳೆಯೊಬ್ಬಳ ಖಾಸಗೀ ವಿಡಿಯೋವೊಂದನ್ನು ಹುಡುಗನೊಬ್ಬ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದೇ ಮಾಡಿದ್ದು, ಅಂದಿನಿಂದ ವೈರಲ್ ಆಗಲು ಶುರುವಾದ ಪದವೇ 'ಯಾಕಣ್ಣ?'. ಮುಗ್ಧ ಮಹಿಳೆಯೊಬ್ಬಳು ಯಾವ ಮುಚ್ಚು ಮರೆಯೂ ಇಲ್ಲದೆ ತನ್ನ ಊರು ಹೆಸರು,ತನ್ನೊಂದಿಗೆ ಇದ್ದ ವ್ಯಕ್ತಿಯಾರು, ಓಪನ್ ಬಾತ್ ರೂಮಿನಲ್ಲೇಕೆ ಸೆಕ್ಸ್‌ ಮಾಡುತ್ತಿರುವುದು ಎಂದು ಮನ ಬಿಚ್ಚಿ ಹೇಳಿಕೊಂಡಿದ್ದಾಳೆ. ಆದರದು ಎಷ್ಟರ ಮಟ್ಟಿಗೆ ವೈರಲ್ ಆಯ್ತೆಂದರೆ Whatsappನಲ್ಲೂ ಆಕೆ ಸ್ಟಿಕ್ಕರ್ ಕ್ರೀಯೆಟ್ ಆಗಿದೆ. ಇದಾದ ಮೇಲೆ ಆಕೆಗೆ ಎಣ್ಣೆ ಕುಡಿಸಿ ರಸ್ತೆಯಲ್ಲಿ ಕನ್ನಡ ಚಿತ್ರದ ಹಾಡೊಂದಕ್ಕೆ ಡ್ಯಾನ್ಸ್‌ ಮಾಡಿರುವ ವಿಡಿಯೋ ಅಪ್ಲೊಡ್ ಮಾಡಿ 'ಯಾಕಣ್ಣ ಸೀಸನ್ ಬ್ಯಾಕ್' ಎಂದು ಮತ್ತೆ ಟ್ರೋಲ್ ಮಾಡಿದ್ದಾರೆ ದುರುಳರು.

 

 
 
 
 
 
 
 
 
 
 
 
 
 

Follow 👉👉@troll_dude_official #yakkanna #trolldudeofficial #trollkannada #trollkarnataka

A post shared by Troll Dude (@troll_dude_official) on Jul 23, 2019 at 6:57am PDT

ಏಕೋ ಏನೋ ಗೊತ್ತಿಲ್ಲ, ಆಕೆಗೆ ಸಾಮಾಜದಲ್ಲಿ ತನ್ನ ಬಗ್ಗೆ ಆಗುತ್ತಿರುವ ಅವಮಾನದ ಬಗ್ಗೆ ಅರಿವಾಗಿದೆ. ತನಗೆ ಜೀವನವೇ ಸಾಕೆನ್ನುಷ್ಟರ ಮಟ್ಟಕ್ಕೆ ಕಣ್ಣೀರಿಟ್ಟು, ಆತ್ಮಹತ್ಯೆ ಮಾಡಿಕೊಳ್ಳುವೆ ಎಂದು ಮತ್ತೊಂದು ವಿಡಿಯೋರಲ್ಲಿ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಅವಳು ಡೋರ್ ಲಾಕ್ ಮಾಡುವುದನ್ನು ಮರೆತು ಇಂಥದ್ದೊಂದು ವೀಡಿಯೋ ಚಿತ್ರೀಕರಿಸಿ, ಆಗಬಾರದ್ದು ಆಗಿ ಹೋಯಿತು ಎಂದು ನೊಂದು ಮಾತನಾಡುತ್ತಾಳೆ.

ಈ ವಿಡಿಯೋ ಸೆರೆ ಹಿಡಿದ ಆ ವ್ಯಕ್ತಿಯ ಮನಸ್ಥಿತಿ ಎಂಥದ್ದಿರಬಹುದು? ಮತ್ತೊಬ್ಬರ ವೈಯಕ್ತಿಕ ಜೀವನದಲ್ಲಿ ಮೂಗು ತೂರಿಸಿ, ನೋಡಬಾರದ್ದನ್ನು ಕದ್ದು ನೋಡಿದ್ದೇ ಮಹಾ ಅಪರಾಧ. ಅಲ್ಲದೇ, ವಿಡಿಯೋ ಸೆರೆ ಹಿಡಿದಿದ್ದಲ್ಲದೇ, ಜಗಜ್ಜಾಹಿರವಾಗುವಂತೆ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿರುವ ಕೊಳಕು ಮನಸ್ಥಿತಿಗೇನು ಹೇಳಬೇಕು?

ಈ ಮಹಿಳೆ ಯಾರು? ಇವಳ ಹಿನ್ನೆಲೆ ಏನೋ ಯಾರಿಗೂ ಗೊತ್ತಿಲ್ಲ. ಈಕೆಯನ್ನು ಫೇಮಸ್ ಮಾಡಿ, ಅವಳ ಬದುಕನ್ನು ಉದ್ಧಾರ ಮಾಡುವ ಮನಸ್ಸು ಯಾರಿಗೂ ಇರಲಿಲ್ಲ. ಆದರೆ, ಬೇಡದ್ದನ್ನು ಪೋಸ್ಟ್ ಮಾಡಿ, ಒಂದು ಹೆಣ್ಣಿಗೆ ಕಳಂಕ ತಂದಿದ್ದು ಮಾತ್ರ, ಇಡೀ ನಾಗರಿಕ ಸಮಾಜವೇ ತಲೆ ತಗ್ಗಿಸುವಂತೆ ಮಾಡಿದೆ. ಆಕೆ ಒಂದು ಹೆಣ್ಣೆಂಬುವುದೂ ನಿಮ್ಮ ಮನಸ್ಸಿಗೆ ಆಗ ಗೊತ್ತಾಗಲಿಲ್ಲವೇ? ಮತ್ತೊಬ್ಬರ ವೈಯಕ್ತಿಕ ಜೀವನದಲ್ಲಿ ಇಣುಕುವ ಹಕ್ಕು ನಿಮಗ್ಯಾರು ಕೊಟ್ಟಿದ್ದು? ಇಂಥ ಅಪರಾಧಕ್ಕೆ ಎಂಥ ಶಿಕ್ಷೆಗೆ ಬೇಕಾದರೂ ನೀವು ಅರ್ಹರು?

ಇದೀಗ ಇದೇ ಹೆಣ್ಣು 'ಆತ್ಮಹತ್ಯೆ' ಮಾಡಿಕೊಳ್ಳುವುದಾಗಿ ಹೇಳಿರುವ ಮತ್ತೊಂದು ವೀಡಿಯೋ ವೈರಲ್ ಆಗುತ್ತಿದೆ. ಅಕಸ್ಮಾತ್ ಅಂಥ ಕಾರ್ಯಕ್ಕೆ ಕೈ ಹಾಕಿದಲ್ಲಿ, ಇದಕ್ಕಾರು ಹೊಣೆ? ಎಲ್ಲಿಯೋ ಕೂಲಿ ನಾರಿ ಮಾಡಿಕೊಂಡು, ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ಒಂದು ಹೆಣ್ಣಿನ ಬಾಳು ಹಾಳಾಗಿದ್ದಕ್ಕೆ ಯಾರು ಹೊಣೆ? ಇದಕ್ಕೆ ಉತ್ತರ ನಿಮ್ಮ ಆತ್ಮಸಾಕ್ಷಿಗೆ ಸಿಕ್ಕರೆ ಸಾಕು!