ಸಪ್ನಾ ಚೌಧರಿ ಹಾಡಿಗೆ ಮಹಿಳಾ ಪೊಲೀಸ್ ಅಧಿಕಾರಿಗಳ ಭರ್ಜರಿ ಸ್ಟೆಪ್ಸ್. ವೈರಲ್ ಆಯ್ತು ವಿಡಿಯೋ

ನವದೆಹಲಿ[ಏ.01]: ಹಿಂದಿ ಬಿಗ್ ಬಾಸ್ ಸ್ಪರ್ಧಿ ಸಪ್ನಾ ಚೌಧರಿ ಹರ್ಯಾಣದಲ್ಲಷ್ಟೇ ಅಲ್ಲದೇ ಭೋಜ್ ಪುರಿ, ಪಂಜಾಬಿ ಹಾಗೂ ಬಾಲಿವುಡ್ ನ್ಲಲೂ ತಮ್ಮ ಹಾಡು ಹಾಗೂ ಡಾನ್ಸ್ಗೆ ಬಹಳ ಫೇಮಸ್ ಆಗಿದ್ದಾರೆ. ಇವರ 'ತೇರಿ ಅಖಿಯಾಂ ಕಾ ಯೋ ಕಾಜಲ್' ಎಂಬ ಹಾಡು ಕೇಳಿದರೆ ಜನರು ತಾವಾಗೇ ಸ್ಟೆಪ್ಸ್ ಹಾಕಲಾರಂಭಿಸುತ್ತಾರೆ. ಇಂತಹುದೇ ಘಟನೆಯೊಂದು ದೆಹಲಿಯ ಮಹಿಳಾ IPS ಅಧಿಕಾರಿಗಳ ಕಾರ್ಯಕ್ರಮದಲ್ಲೂ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮಾರ್ಚ್ 20ರಂದು ನೈರುತ್ಯ ದೆಹಲಿಯಲ್ಲಿ ವಿಭಿನ್ನ ಘಟನೆ ನಡೆದಿದೆ. ಇಲ್ಲಿ ಎಲ್ಲಾ ವರ್ಗದ ಮಹಿಳೆಯರಿಗಾಗಿ 'ಸುನೋ ಸಹೇಲಿ[ಕೇಳು ಸಖೀ]' ಎಂಬ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಕಾರ್ಯಕ್ರಮಕ್ಕೆ ಹಾಕಜರಾಗಿದ್ದ ಮಹಿಳಾ IPS ಅಧಿಕಾರಿಗಳು ವೇದಿಕೆ ಮೇಲೇರಿ ಸಪ್ನಾ ಚೌಧರಿ ಹಾಡಿಗೆ ಭರ್ಜರಿಯಾಗಿ ಕುಣಿದಿದ್ದಾರೆ. ಸಪ್ನಾರ 'ತೇರಿ ಅಖಿಯಾಂ ಕಾ ಯೋ ಕಾಜಲ್' ಹಾಡು ಬಹಳಷ್ಟು ಫೇಮಸ್ ಆಗಿದೆ. ಕಾರ್ಯಕ್ರಮದಲ್ಲಿ ಈ ಹಾಡು ಹಾಕುತ್ತಿದ್ದಂತೆಯೇ ಡಾನ್ಸ್ ಮಾಡಲಾರಂಭಿಸಿದ ಪೊಲೀಸ್ ಅಧಿಕಾರಿಗಳು ಬಳಿಕ ನಿಧಾನವಾಗಿ ವೇದಿಕೆ ಏರಿದ್ದಾರೆ. ಇದನ್ನು ನೋಡಿದ ಇತರ ಮಹಿಳೆಯರೂ ಡಾನ್ಸ್ ಮಾಡಲು ಜೊತೆಯಾಗಿದ್ದಾರೆ. ಈ ಕಾರ್ಯಕ್ರಮ ಮಹಿಳೆಯರನ್ನು ಪ್ರೋತ್ಸಾಹಿಸುವ ಸಲುವಾಗಿ ಆಯೋಜಿಸಲಾಗಿತ್ತು.

Scroll to load tweet…

ಕೆಲ ದಿನಗಳ ಹಿಂದಷ್ಟೇ ಸಪ್ನಾ ಚೌಧರಿ ರಾಜಕೀಯಕ್ಕೆ ಎಂಟ್ರಿ ನೀಡುತ್ತಾರೆಂಬ ವದಂತಿಗಳು ಹಬ್ಬಿದ್ದವು. ಆದರೆ ಈ ಸುದ್ದಿ ಜೋತರಾಗುತ್ತಿದ್ದಂತೆಯೇ ತಾನು ರಾಜಕೀಯ ಕ್ಷೇತ್ರಕ್ಕೆ ಕಾಲಿಡುವುದಿಲ್ಲ ಎಂದು ಖುದ್ದು ಸಪ್ನಾ ಚೌಧರಿಯೆ ಸ್ಪಷ್ಟನೆ ನೀಡಿದ್ದರು.