ಅಲಿಯಾ ಭಟ್, ರಣಬೀರ್ ಕಪೂರ್ ಮದುವೆಯಾವಾಗ ಎಂದು ಅಭಿಮಾನಿಗಳು ತಲೆಕೆಡಿಸಿಕೊಂಡಿರುವಾಗ ಸದ್ಯದಲ್ಲೇ ಗುಡ್‌ನ್ಯೂಸ್ ಹೊರ ಬೀಳುವ ಸಾಧ್ಯತೆ ಇದೆ. ಈ ಬಗ್ಗೆ ಅಲಿಯಾ, ರಣಬೀರ್ ಹೇಳುವುದೇನು? 

ಮುಂಬೈ (ಆ. 06): ಅಲಿಯಾ ಭಟ್, ರಣಬೀರ್ ಕಪೂರ್ ಡೇಟಿಂಗ್ ಮುಗಿಸಿ ದಾಂಪತ್ಯ ಜೀವನಕ್ಕೆ ಕಾಲಿಡುವ ಸಮಯ ಹತ್ತಿರ ಬಂದಿದೆ. 

ಸದ್ಯ ಈ ಲವ್ ಬರ್ಡ್ಸ್ ಗಳು ಬಲ್ಗಾರಿಯಾದಲ್ಲಿ ಶೂಟಿಂಗ್ ನಲ್ಲಿ ಬ್ಯುಸಿ ಇದ್ದಾರೆ. ಅಲ್ಲಿಂದ ವಾಪಸ್ಸಾದ ಬಳಿಕ ಇಬ್ಬರ ಮನೆಯಲ್ಲೂ ಮದುವೆ ಪ್ರಸ್ತಾಪ ನಡೆಯಲಿದೆ ಎನ್ನಲಾಗಿದೆ. 

ರಣಬೀರ್-ಅಲಿಯಾ ಪರಸ್ಪರ ಪ್ರೀತಿಸುತ್ತಿದ್ದಾರೆ. ಸದ್ಯ ಅಲಿಯಾ ಉತ್ತುಂಗದಲ್ಲಿದ್ದಾರೆ. ಇವರಿಬ್ಬರೂ ಖಂಡಿತಾ ಮದುವೆಯಾಗಲಿದ್ದಾರೆ. ಆದರೆ 2020 ರೊಳಗೆ ದಾಂಪತ್ಯಕ್ಕೆ ಕಾಲಿಡುವುದಿಲ್ಲ ಎಂದು ಬಲ್ಲ ಮೂಲಗಳು ತಿಳಿಸಿವೆ. 

ಮದುವೆಯಾದ ಬಳಿಕ ನಟನೆಯಿಂದ ದೂರ ಉಳಿಯುತ್ತೀರಾ ಎಂಬ ಅಭಿಮಾನಿಗಳ ಪ್ರಶ್ನೆಗೆ ಅಲಿಯಾ ಉತ್ತರಿಸಿದ್ದಾರೆ. ನಟನೆಯಿಂದ ದೂರ ಉಳಿಯುವ ಅಗತ್ಯವಿಲ್ಲ. ನನಗೆ ಎಲ್ಲಿಯವರೆಗೆ ಸಾಧ್ಯವೋ ಅಲ್ಲಿಯವರೆಗೆ ನಟಿಸುತ್ತೇನೆ ಎಂದು ಹೇಳಿದ್ದಾರೆ.