ವಿಲನ್ ಪಾತ್ರಕ್ಕೆ ಬಣ್ಣ ಹಚ್ಚುತ್ತಾರಾ ರಾಘವೇಂದ್ರ ರಾಜ್’ಕುಮಾರ್?

Will Actor Raghavendra Rajkumar play a Villain role in Chilam Movie
Highlights

ಚಂದ್ರಕಲಾ ನಿರ್ದೇಶನದ, ಮನೋರಂಜನ್  ಅಭಿನಯದ ‘ಚಿಲಂ’ ಚಿತ್ರ ಸ್ಯಾಂಡಲ್‌ವುಡ್‌ನಲ್ಲಿ ಹಲವು ಕಾರಣಕ್ಕೆ ಸದ್ದು ಮಾಡಿದೆ. ಬಿಗ್ ಸ್ಟಾರ್‌ಗಳೇ ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆನ್ನಲಾಗಿದೆ. ಆ ಸ್ಟಾರ್‌ಗಳ ಪೈಕಿ ರಾಘವೇಂದ್ರ ರಾಜ್‌ಕುಮಾರ್ ವಿಲನ್ ಪಾತ್ರಕ್ಕೆ ಬಣ್ಣ ಹಚ್ಚುತ್ತಿರುವುದು ಭಾರಿ ಸುದ್ದಿ ಆಗಿತ್ತು. ಈ ಬಗ್ಗೆ ಸ್ವತಃ ರಾಘವೇಂದ್ರ ರಾಜ್’ಕುಮಾರ್ ಮಾತನಾಡಿದ್ದಾರೆ. ಏನ್ ಹೇಳಿದ್ದಾರೆ ನೋಡಿ. 

ಬೆಂಗಳೂರು (ಜು. 16): ಚಂದ್ರಕಲಾ ನಿರ್ದೇಶನದ, ಮನೋರಂಜನ್  ಅಭಿನಯದ ‘ಚಿಲಂ’ ಚಿತ್ರ ಸ್ಯಾಂಡಲ್‌ವುಡ್‌ನಲ್ಲಿ ಹಲವು ಕಾರಣಕ್ಕೆ ಸದ್ದು ಮಾಡಿದೆ. ಬಿಗ್ ಸ್ಟಾರ್‌ಗಳೇ ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆನ್ನಲಾಗಿದೆ.

ಆ ಸ್ಟಾರ್‌ಗಳ ಪೈಕಿ ರಾಘವೇಂದ್ರ ರಾಜ್‌ಕುಮಾರ್ ವಿಲನ್ ಪಾತ್ರಕ್ಕೆ ಬಣ್ಣ  ಹಚ್ಚುತ್ತಿರುವುದು ಭಾರಿ ಸುದ್ದಿ ಆಗಿತ್ತು. ಆದ್ರೆ ಈಗ  ಮತ್ತೆ ಅಚ್ಚರಿಯ ಸುದ್ದಿ  ಬಂದಿದೆ. ರಾಘವೇಂದ್ರ ರಾಜ್‌ಕುಮಾರ್  ‘ಚಿಲಂ’ನಲ್ಲಿ ಅಭಿನಯಿಸುವುದು ಬಹುತೇಕ ಡೌಟು. ಈ ಅನುಮಾನ ವ್ಯಕ್ತಪಡಿಸಿರುವುದು ಬೇರೆ ಯಾರೂ ಅಲ್ಲ, ಖುದ್ದು ರಾಘವೇಂದ್ರ ರಾಜ್‌ಕುಮಾರ್.

‘ಚಿತ್ರರಂಗಕ್ಕೆ ತಾವು ಹೀರೋ ಆಗಿ ಬಂದವರು. ಇಷ್ಟು ವರ್ಷ  ಹೀರೋ ಆಗಿಯೇ ಕಾಣಿಸಿಕೊಂಡವರು. ಈಗ ವಿಲನ್ ಪಾತ್ರಕ್ಕೆ  ತಾವು ಬಣ್ಣ ಹಚ್ಚುವುದು ಸರಿಯಲ್ಲ. ಪಾಸಿಟಿವ್ ಪಾತ್ರಗಳಲ್ಲೇ ಅಭಿನಯಿಸಿ’ ಅಂತ ಅಭಿಮಾನಿಗಳು ಸೇರಿದಂತೆ ಹಲವು ಅವರ ಆಪ್ತರು ಸಲಹೆ ಕೊಟ್ಟಿದ್ದಾರಂತೆ. ಹಾಗಾಗಿ ‘ಚಿಲಂ’ನಲ್ಲಿ ಅಭಿನಯಿಸಬೇಕೇ,ಬೇಡವೇ ಅನ್ನೋ ಗೊಂದಲದಲ್ಲಿ ಸಿಲುಕಿದ್ದಾರೆ ನಟ, ನಿರ್ಮಾಪಕ ರಾಘವೇಂದ್ರ ರಾಜ್‌ಕುಮಾರ್.

ಉಳಿದಂತೆ ಅವರು ಈಗಾಗಲೇ ಒಪ್ಪಿಕೊಂಡಿರುವ ಚಿತ್ರಗಳ ಪೈಕಿ ನಿಖಿಲ್ ಮಂಜು ನಿರ್ದೇಶನದ ‘ಅಮ್ಮನ ಮನೆ’ ಚಿತ್ರದಲ್ಲಿ  ಅಭಿನಯಿಸುವುದು ಗ್ಯಾರಂಟಿ. ಆಗಸ್ಟ್ 15 ರಂದು ಅವರ ಹುಟ್ಟು ಹಬ್ಬದ ದಿನವೇ ಚಿತ್ರಕ್ಕೆ ಮುಹೂರ್ತ. 

loader