ಸಿನಿಮಾ ಅಭಿಮಾನಿಗಳಿಗೆ ಒಂದು ವಿಚಿತ್ರ ಆಸೆ ಇರುತ್ತದೆ. ತಮ್ಮಿಷ್ಟದ ಇಬ್ಬರು ಹೀರೋಗಳು ಒಂದೇ ಸಿನಿಮಾಗಳು ಕಾಣಿಸಿಕೊಳ್ಳಬೇಕು ಅನ್ನುವ ಆಸೆ. ಹಾಗಾಗಿ ಅವರು ತಮ್ಮಿಷ್ಟದ ಸ್ಟಾರ್‌ಗಳು ಸಿಕ್ಕಾಗ ಅವರ ಜೊತೆ ನಟಿಸುತ್ತೀರಾ, ಇವರ ಜೊತೆ ನಟಿಸುತ್ತೀರಾ ಎಂದು ಕೇಳುತ್ತಲೇ ಇರುತ್ತಾರೆ.
ಸಿನಿಮಾ ಅಭಿಮಾನಿಗಳಿಗೆ ಒಂದು ವಿಚಿತ್ರ ಆಸೆ ಇರುತ್ತದೆ. ತಮ್ಮಿಷ್ಟದ ಇಬ್ಬರು ಹೀರೋಗಳು ಒಂದೇ ಸಿನಿಮಾಗಳು ಕಾಣಿಸಿಕೊಳ್ಳಬೇಕು ಅನ್ನುವ ಆಸೆ. ಹಾಗಾಗಿ ಅವರು ತಮ್ಮಿಷ್ಟದ ಸ್ಟಾರ್ಗಳು ಸಿಕ್ಕಾಗ ಅವರ ಜೊತೆ ನಟಿಸುತ್ತೀರಾ, ಇವರ ಜೊತೆ ನಟಿಸುತ್ತೀರಾ ಎಂದು ಕೇಳುತ್ತಲೇ ಇರುತ್ತಾರೆ.
ಸದ್ಯ ಆ ಪ್ರಶ್ನೆ ಎದುರಾಗಿದ್ದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ಗೆ. ಹಬ್ಬದ ದಿನ ಮೊದಲ ಬಾರಿಗೆ ಅವರು ಫೇಸ್ಬುಕ್ ಲೈವ್ ಬಂದಿದ್ದರು. ಸುಮಾರು ಹತ್ತು ನಿಮಿಷಗಳ ಕಾಲ ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸಿದರು. ಅಭಿಮಾನಿಗಳ ಪ್ರೀತಿಗೆ ಧನ್ಯವಾದ ಸಮರ್ಪಿಸಿದರು.
ಈ ಸಂದರ್ಭದಲ್ಲಿ ಎರಡು ಹೇಳಿದ ಮೂರು ಸಂಗತಿಗಳು.
1. ನನಗೂ ಎಲ್ಲರ ಜೊತೆ ನಟಿಸಬೇಕೆಂಬ ಆಸೆ ಇದೆ. ಒಳ್ಳೆಯ ಕತೆ ಇದ್ದರೆ ದರ್ಶನ್ ಅವರ ಜೊತೆ, ಕಿಚ್ಚ ಸುದೀಪ್ ಅವರ ಜೊತೆ ಆದಷ್ಟು ಬೇಗ ನಟಿಸುತ್ತೇನೆ.
2. ಕಲರ್ಸ್ ಕನ್ನಡ ವಾಹಿನಿಯಲ್ಲಿ ನನ್ನ ರಿಯಾಲಿಟಿ ಶೋ ‘ಫ್ಯಾಮಿಲಿ ಪವರ್’ ಮುಂದಿನ ತಿಂಗಳ ಕೊನೆಯ ವಾರ ಆರಂಭವಾಗಲಿದೆ.
ಅಂದಹಾಗೆ ಇದೇ ಹೊತ್ತಿಗೆ ಪುನೀತ್ ರಾಜ್ಕುಮಾರ್ ಅಭಿನಯದ ರಾಕ್ಲೈನ್ ವೆಂಕಟೇಶ್ ನಿರ್ಮಾಣದ ಚಿತ್ರದ ಚಿತ್ರೀಕರಣ ಆರಂಭವಾಗಬೇಕಿತ್ತು. ಆದರೆ ಆ ಸಿನಿಮಾ ಮುಂದೆ ಹೋಗಿದೆ ಎಂದು ಹೇಳಲಾಗುತ್ತಿದೆ.
