ಚಾಲೆಂಜಿಂಗ್ ಸ್ಟಾರ್ ದರ್ಶನ್ 50 ನೇ ಚಿತ್ರ 'ಕುರುಕ್ಷೇತ್ರ'ದಲ್ಲಿ ಕೌರವಾಧಿಪತಿ ಧುರ್ಯೋದನ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಚಿತ್ರೀಕರಣದ ಆರಂಭದಿಂದಲೂ ಭರ್ಜರಿ ಸೌಂಡ್‌ ಮಾಡುತ್ತಿದ್ದು ಒಂದಾದ ಮೇಲೊಂದು ವಿವಾದಕ್ಕೆ ಗುರಿಯಾಗುತ್ತಿದೆ.

 

ಕುರುಕ್ಷೇತ್ರ ಪ್ರೆಸ್‌ ಮೀಟ್‌ನಲ್ಲಿ ಚಿತ್ರದ ಬಗ್ಗೆ ಮಾತನಾಡುವಾಗ 'ಕುರುಕ್ಷೇತ್ರ ನಡೆದಿರೋದು ಬೇರೆ, ನಾವೆಲ್ಲಾ ನೋಡಿ ತಿಳಿದುಕೊಂಡಿದ್ದು ಬೇರೆ, ಕೇಳಿ, ಓದು ತಿಳಿದುಕೊಂಡಿರುವುದು ಬೇರೆ. ಗಧಾಯುದ್ಧನೇ ಒಂದು ಭಾಗ ಇದೆ. ಕುರುಕ್ಷೇತ್ರಕ್ಕೆ ಬೇರೆ ಬೇರೆ ಆಯಾಮಗಳಿವೆ. ವಾಲ್ಮೀಕಿ ಬರೆದಿರೋದೆ ಒಂದು ರೀತಿ. ಹಾಗಾಗಿ ಮಹಾಭಾರತ ಕಥೆಯನ್ನು ಆಯ್ಕೆ ಮಾಡಿಕೊಳ್ಳುವಾಗ ತುಂಬಾ ಎಚ್ಚರ ವಹಿಸಬೇಕು' ಎಂದು ಹೇಳಿದರು. ದರ್ಶನ್ ಈ ಹೇಳಿಕೆ ಟ್ರೋಲ್ ಹೈಕಳಿಗೆ ಆಹಾರವಾಗಿದೆ.

ಕಿಚ್ಚನ ಬಗ್ಗೆ ಕೇಳಿದ್ದಕ್ಕೆ ಮಾಧ್ಯಮದವರ ಮೇಲೆ ದರ್ಶನ್ ಗರಂ!

ರಾಮಾಯಣ ಬರೆದಿರೋದು ವಾಲ್ಮೀಕಿ. ಮಹಾಭಾರತ ಬರೆದಿರುವುದು ವ್ಯಾಸ. ಆದರೆ ದರ್ಶನ್ ಮಹಾಭಾರತ ಬರೆದಿರುವುದು ವಾಲ್ಮೀಕಿ ಎಂದು ಮಾತಿನ ಭರದಲ್ಲಿ ಹೇಳಿದ್ದೇ ಹೇಳಿದ್ದು ಟ್ರೋಲ್ ಆಗುತ್ತಿದೆ. ಕೆಲವೊಮ್ಮೆ ಸ್ಟಾರ್ ನಟರು ತಪ್ಪು ಮಾಡೋದು ಸಹಜ ಬಿಡಿ!