ಮೂರರಲ್ಲಿ ಯಾವುದು ಮೊದಲು..? ಪುನೀತ್ ಮುಂದೆ ಇರುವ ಯಕ್ಷಪ್ರಶ್ನೆ..!

entertainment | Monday, January 15th, 2018
Suvarna Web Desk
Highlights

ಅಂಜನಿಪುತ್ರ’ ಯಶಸ್ವಿ 25ನೇ ದಿನ ಪೂರೈಸಿದೆ. ಸದ್ಯ ಪುನೀತ್ ರಾಜ್ ಕುಮಾರ್ ಮೂರು ಚಿತ್ರಗಳಿಗೆ ಬುಕ್ ಆಗಿದ್ದಾರೆ. ಆ ಚಿತ್ರಗಳಲ್ಲಿ ಮೊದಲು ಮುಹೂರ್ತ ಕಾಣಲಿರುವ ಸಿನಿಮಾ ಯಾವುದು?

ಬೆಂಗಳೂರು (ಜ.15): ‘ಅಂಜನಿಪುತ್ರ’ ಯಶಸ್ವಿ 25ನೇ ದಿನ ಪೂರೈಸಿದೆ. ಸದ್ಯ ಪುನೀತ್ ರಾಜ್ ಕುಮಾರ್ ಮೂರು ಚಿತ್ರಗಳಿಗೆ ಬುಕ್ ಆಗಿದ್ದಾರೆ. ಆ ಚಿತ್ರಗಳಲ್ಲಿ ಮೊದಲು ಮುಹೂರ್ತ ಕಾಣಲಿರುವ ಸಿನಿಮಾ ಯಾವುದು?

ಅದಕ್ಕೆ ಉತ್ತರ ಸಿಗಬೇಕಾದರೆ ಫೆಬ್ರವರಿ ಮೊದಲ ವಾರದ ತನಕ ಕಾಯಬೇಕಿದೆ. ಹಾಗಂತ ಪುನೀತ್ ರಾಜ್’ಕುಮಾರ್ ಅವರೇ ಹೇಳಿದ್ದಾರೆ. ಅಲ್ಲಿಯತನಕ ಯಾವುದು ಮೊದಲು ಅನ್ನೋದು ಅವರಿಗೂ ಗೊತ್ತಿಲ್ಲ ಎನ್ನುತ್ತಾರೆ. ಸದ್ಯ ಅವರ ಮುಂದೆ ಮೂರು ಚಿತ್ರಗಳಿವೆ.

ವಿಜಯ್ ಕಿರಗಂದೂರು ನಿರ್ಮಾಣದ ಸಂತೋಷ್ ಆನಂದ್‌ರಾಮ್ ನಿರ್ದೇಶನದ ಚಿತ್ರ. ಸ್ವತಃ ಪುನೀತ್ ನಿರ್ಮಾಣದ ಶಶಾಂಕ್ ನಿರ್ದೇಶನದ ಚಿತ್ರ.  ರಾಕ್‌ಲೈನ್ ವೆಂಕಟೇಶ್ ನಿರ್ಮಾಣದ ಪವನ್ ಒಡೆಯರ್ ನಿರ್ದೇಶನದ ಚಿತ್ರ. ಆದರೆ ಈ ಮೂರರಲ್ಲಿ ಮೊದಲು ಶುರುವಾಗುವುದು ಯಾವುದು ಎಂದು ಕೇಳಿದರೆ ಪುನೀತ್ ಬಳಿ ಸ್ಪಷ್ಟ ಉತ್ತರ ಸಿಗುವುದಿಲ್ಲ.

‘ಮೂರು ಸಿನಿಮಾಗಳಿಗೆ ಸಿದ್ಧತೆ ನಡೆದಿದೆ. ಆದರೆ ಮೊದಲು ಶುರುವಾಗುವುದು ಯಾವ ಪ್ರಾಜೆಕ್ಟ್ ಅನ್ನೋದು ನನಗೂ ಗೊತ್ತಿಲ್ಲ. ಆದರೆ ಯಾವುದೇ ಗೊಂದಲ ಇಲ್ಲದಂತೆ ಸಿನಿಮಾ ಶುರು ಮಾಡೋಣ ಅಂತ ನಾನು ಹೇಳಿದ್ದೇನೆ. ಯಾವುದು ಫಸ್ಟ್ ಅನ್ನೋದು ಫೆಬ್ರವರಿ ಮೊದಲ ವಾರ ಗೊತ್ತಾಗಲಿದೆ. ಅಲ್ಲಿಯ ತನಕ ನಾನೇನು ಹೇಳಲಾರೆ’ ಅಂತಾರೆ ಪುನೀತ್ ರಾಜ್‌ಕುಮಾರ್.

ಈ ಮೂರು ಚಿತ್ರಗಳೂ ಮಹತ್ವದ ಚಿತ್ರಗಳೇ ಆಗಿರುವುದರಿಂದ ಯಾವ ಸಿನಿಮಾ ಮೊದಲು ಆರಂಭವಾಗಲಿದೆ ಅನ್ನುವ ಕುತೂಹಲ ಪ್ರತಿಯೊಬ್ಬ ಸಿನಿಮಾ ಅಭಿಮಾನಿಗೂ ಇದೆ. ಈ ಕುತೂಹಲ ತಣಿಯಬೇಕಾದರೆ ಈ ತಿಂಗಳು ಪೂರ್ತಿ ಕಾಯಲೇಬೇಕು.

Comments 0
Add Comment

    ಮೈತ್ರಿ ಸರ್ಕಾರ ಹೆಚ್ಚು ದಿನ ಉಳಿಯೋದಿಲ್ಲ: ಜಗ್ಗೇಶ್ ಭವಿಷ್ಯ

    news | Tuesday, May 22nd, 2018