ಕನ್ನಡದಲ್ಲಿ ಡಾ.ರಾಜ್, ವಿಷ್ಣು ,ಶಂಕರ್ನಾಗ್ ಶ್ರೀನಾಥ್ ಸೇರಿದಂತೆ ಎಲ್ಲಾ ಸ್ಟಾರ್ ನಟರ ಜೊತೆ ನಟಿಸಿದ ನಟಿಸಿದ್ದ ಚಲುವೆ . ಚಿರಂಜೀವಿ, ಬಾಲಕೃಷ್ಣ, ಕಮಲ್ ಹಾಸನ್ ಸೇರಿದಂತೆ ತೆಲುಗು ತಮಿಳಲ್ಲೂ ಸ್ಟಾರ್ ಆಗಿ ಮಿಂಚಿದಾಕೆ. ಅವತ್ತಿಗೇ ಸ್ವಿಮ್ ಸೂಟಲ್ಲಿ ಹವಾ ಸೃಷ್ಟಿಸಿದ ಬೆಡಗಿ.
ಬೆಂಗಳೂರು(ಅ.19): ಮಾಧವಿ ಸಿನಿಮಾ ರಂಗದಲ್ಲಿ ಬಹು ಬೇಡಿಕೆಯಾಗಿ ಮಿಂಚಿಂದ ಚೆಲುವೆ. ಕನ್ನಡ,ತೆಲುಗು, ತಮಿಳು, ಮಲಯಾಳಂ, ಬೆಂಗಾಲಿ, ಮರಾಠಿ, ಹಿಂದಿ ಸೇರಿದಂತೆ ಹಲವಾರು ಭಾರತೀಯ ಭಾಷೆಗಳಲ್ಲಿ ಸೂಪರ್ ಸ್ಟಾರ್'ಗಳ'ಜೊತೆ ನಟಿಸಿದವರು ಇವರು. ಕೆಲ ವರ್ಷಗಳ ಹಿಂದೆ ಇದ್ದಕ್ಕಿಂದಂತೆ ನಾಪತ್ತೆಯಾಗಿಬಿಟ್ಟಿದ್ದರು. ಅವರು ಎಲ್ಲಿ ಹೋದರು ಎನ್ನುವುದು ಕೂಡ ಹಲವಾರು ಅಭಿಮಾನಿಗಳು ತಲೆ ಕೆಡಿಸಿಕೊಂಡಿದ್ದರು.
ಕನ್ನಡದಲ್ಲಿ ಡಾ.ರಾಜ್, ವಿಷ್ಣು ,ಶಂಕರ್ನಾಗ್ ಶ್ರೀನಾಥ್ ಸೇರಿದಂತೆ ಎಲ್ಲಾ ಸ್ಟಾರ್ ನಟರ ಜೊತೆ ನಟಿಸಿದ ನಟಿಸಿದ್ದ ಚಲುವೆ . ಚಿರಂಜೀವಿ, ಬಾಲಕೃಷ್ಣ, ಕಮಲ್ ಹಾಸನ್ ಸೇರಿದಂತೆ ತೆಲುಗು ತಮಿಳಲ್ಲೂ ಸ್ಟಾರ್ ಆಗಿ ಮಿಂಚಿದಾಕೆ. ಅವತ್ತಿಗೇ ಸ್ವಿಮ್ ಸೂಟಲ್ಲಿ ಹವಾ ಸೃಷ್ಟಿಸಿದ ಬೆಡಗಿ. ಹಾವಿನ ನೃತ್ಯವೆಂದರೆ ಅದಕ್ಕೆ ಮಾಧವಿಯರೆ ಆಗಬೇಕು ಎನ್ನುವವರಿದ್ದರು. ಡಾನ್ಸ್'ನಲ್ಲಿ ಅಷ್ಟೊಂದು ಪರ್ಫೆಕ್ಟ್ . ಅಣ್ಣಾವ್ರ ಆಕಸ್ಮಿಕ,ಜೀವನ ಚೈತ್ರ ,ಒಡಹುಟ್ಟಿದವರು ಚಿತ್ರಗಳಿಗೆ ಇನ್ನಷ್ಟು ಜೀವ ತುಂಬಿದಾಕೆ. ಈಗ ಎಲ್ಲಿದ್ದಾರೆ ಏನ್ಮಾಡ್ತಿದ್ದಾರೆ ಅಂತೀರಾ.
ಉದ್ಯಮಿಯ ಜೊತೆ ಮದುವೆ
1996ರಲ್ಲಿ ಭಾರತೀಯ ಮತ್ತು ಜರ್ಮನ್ ಹೆಸರಿನ ಔಷಧೀಯ ಉದ್ಯಮಿಯಾದ ರಾಲ್ಫ್ ಶರ್ಮಾ ಅವರನ್ನ ಮಾಧವಿ ಮದುವೆಯಾದರು. ಮದುವೆಯಾದ ಸ್ವಲ್ಪ ದಿನಗಳಲ್ಲೇ ಮಾಧವಿ ಗಂಡನ ಜೊತೆ ಅಮೆರಿಕಾಗೆ ಪ್ರಯಣ ಬೆಳೆಸಿದರು.
ಗಂಡನ ಮೆಡಿಕಲ್ ಫಾರ್ಮಸಿಯ ಕಂಪನಿಗೆ ಮಾಧವಿ ಸಿಇಓ ಆಗ್ತಾರೆ. ಗಂಡನ ಕಂಪನಿಯಲ್ಲಿ ಕೆಲಸಗಳಲ್ಲಿ ಮಾಧವಿ ಭಾಗಿಯಾಗ್ತಾರೆ. ಇವರಿಬ್ಬರ ಸುಖ ದಾಪಂತ್ಯಕ್ಕೆ ಮೂರು ಜನ ಹೆಣ್ಣು ಮಕ್ಕಳು ಜನಿಸಿದ್ದಾರೆ. ಟಿಫಾನಿ ಶರ್ಮಾ, ಎವೆಲಿನ್ ಶರ್ಮಾ, ಪ್ರಿಸ್ಸಿಲಾ ಶರ್ಮಾ ಅಂತಾ ಮುದ್ದಾದ ಹೆಣ್ಣು ಮಕ್ಕಳಿದ್ದಾರೆ. ಸಿಲ್ವರ್ ಸ್ಕ್ರೀನ್ ಸೂಪರ್ ಸ್ಟಾರ್ ಗಳ ಜೊತೆ ಆಕ್ಟ್ ಮಾಡಿ ಸೈ ಎನ್ನಿಸಿಕೊಂಡ ಮಾಧವಿ ಈಗ ಅಮೆರಿಕಾದಲ್ಲಿ ಸುಖ ಜೀವನ ಮಾಡುತ್ತಿದ್ದಾರೆ.
ನಟಿಯಾಗಿದ್ದ ಸಂದರ್ಭದಲ್ಲಿ ಸರಿಯಾಗಿ ಊಟ, ನಿದ್ದೆ ಇಲ್ಲದೆ ತುಂಬಾನೇ ಬ್ಯುಸಿಯಾಗಿದ್ದೆ.ಆದರೆ ಈಗ ಮಕ್ಕಳು ಗಂಡನ ಜೊತೆ ಮಾಧವಿ ಸುಖ ಜೀವನ ಮಾಡುತ್ತಿದ್ದೀನಿ ಅಂತಾ ಮಾಧವಿ ಹೇಳಿದ್ದಾರೆ.
ಸೌತ್ ಚಿತ್ರರಂಗದ ಟಾಪ್ ಮೋಸ್ಟ್ ಹೀರೋಯಿನ್ ಆಗಿದ್ದ ಮಾಧವಿ ಬರೋಬ್ಬರಿ 20 ವರ್ಷಗಳ ನಂತರ ಖಾಸಗಿ ಚಾನಲ್ ವೊಂದಕ್ಕೆ ಮಾಧವಿ ಸಂದರ್ಶನದಲ್ಲಿ ಮಾತನಾಡಿದ್ದಾರೆ.ಸದ್ಯ ಅಮೆರಿಕಾದಲ್ಲಿ ವಾಸಿಸುತ್ತಿರುವ ಮಾಧವಿ ತಮ್ಮ ಸಿನಿಮಾಗಳು ಹಾಗು ಸ್ಟಾರ್ ನಟರ ಜೊತೆ ಅಭಿನಯಿಸಿದ ಆ ದಿನಗಳನ್ನು ಮೆಲುಕು ಹಾಕಿದ್ದು ಮಾತ್ರ ಇಂಟ್ರಸ್ಟ್ರಿಂಗ್.
