ರಮಾನಂದ ಸಾಗರ್ ಅವರ ರಾಮಾಯಣ ಧಾರಾವಾಹಿಯಲ್ಲಿ ವಿಭೀಷಣನ ಪಾತ್ರ ನಿರ್ವಹಿಸಿದ್ದ ಮುಖೇಶ್ ರಾವಲ್ ಅವರ ಕಥೆಯಿದು. ಮಗನ ಸಾವಿನ ನಂತರ ಕಾಡಿದ ಖಿನ್ನತೆ ಕೂಡ ಅವರ ಈ ಕತೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ.
ರಮಾನಂದ ಸಾಗರ್ ಅವರ ‘ರಾಮಾಯಣ’ ಟಿವಿ ಧಾರಾವಾಹಿ ಪ್ರಸಾರವಾಗಿ 38 ವರ್ಷಗಳು ಕಳೆದಿವೆ. ಆದರೆ ಪ್ರೇಕ್ಷಕರು ಇಂದಿಗೂ ಅದರ ಪ್ರತಿಯೊಂದು ಪಾತ್ರ ಮತ್ತು ಕಲಾವಿದರನ್ನು ಮರೆತಿಲ್ಲ. ಅವರು ಇನ್ನೂ ಅವರನ್ನು ಬಹಳ ತೀವ್ರವಾಗಿ ನೆನಪಿಸಿಕೊಳ್ಳುತ್ತಾರೆ. ಆದರೆ ಅದರ ಕೆಲವು ನಟನಟಿಯರು ಈ ಜಗತ್ತಿನಲ್ಲಿ ಈಗ ಇಲ್ಲ. ಅಂಥವರಲ್ಲಿ ಒಬ್ಬರು ಇದರ ವಿಭೀಷಣ ಪಾತ್ರಧಾರಿ. ನಾವೀಗ ಹೇಳಹೊರಟದ್ದು ಅವರ ಕಥೆ.
ಇದೊಂದು ವಿಚಿತ್ರ ದುರಂತ ಕಥೆ. ಶತ್ರು ಕೂಡ ಇಂತಹ ಸಾವನ್ನು ಕಾಣಲಿ ಎಂದು ಯಾರೂ ಬಯಸಲಾರರು. 9 ವರ್ಷಗಳ ಹಿಂದೆ ಇದು ನಡೆದದ್ದು. ಆದರೆ ʼರಾಮಾಯಣ’ ಟಿವಿ ಸೀರಿಯಲ್‌ನ ನಟನಟಿಯರು ಇಂದಿಗೂ ಆ ಘೋರಭೀಷಣ ಸಂಗತಿಯನ್ನು ನೆನಪಿಸಿಕೊಳ್ಳುತ್ತಾರೆ. ಅದು ಆ ಸೀರಿಯಲ್‌ನ ʼವಿಭೀಷಣʼ ಪಾತ್ರಧಾರಿ ರೈಲ್ವೆ ಹಳಿಯಲ್ಲಿ ಶವವಾಗಿ ಪತ್ತೆಯಾದದ್ದು. ಸಿಸಿಟಿವಿ ಇದಕ್ಕೆ ಸಂಬಂಧಿಸಿದ ಆಘಾತಕಾರಿ ಸತ್ಯವನ್ನು ಬಹಿರಂಗಪಡಿಸಿತ್ತು.
ವಿಭೀಷಣ ಪಾತ್ರದ ನಟ ಗುಜರಾತಿನವರಾದ ಮುಖೇಶ್ ರಾವಲ್. ಸಣ್ಣಪುಟ್ಟ ಪಾತ್ರಗಳನ್ನು ಮಾಡುತ್ತಿದ್ದ ಅವರು ರಾಮಾಯಣದಲ್ಲಿ ವಿಭೀಷಣ ಪಾತ್ರವನ್ನು ನಿರ್ವಹಿಸುವ ಮೂಲಕ ಪ್ರಸಿದ್ಧರಾದರು. ಗುಜರಾತಿ ನಟ ಮುಖೇಶ್ ರಾವಲ್ ನಿರ್ವಹಿಸಿದ್ದಾರೆ. ರಾವಣನ ಸಹೋದರ ವಿಭೀಷಣನ ಪಾತ್ರವನ್ನು ಮುಖೇಶ್ ರಾವಲ್ ತಮ್ಮ ನಟನೆಯಿಂದ ಅಮರನನ್ನಾಗಿ ಮಾಡಿದರು.
ವಿಭೀಷಣನು ಲಂಕೆಯ ರಾಜ ರಾವಣನ ಸಹೋದರ. ಆದರೆ ತಾನು ರಾಮನ ಮಹಾನ್ ಭಕ್ತನೆಂದು ಅವನು ಸಾಬೀತುಪಡಿಸಿದ. ಅವನ ಸಹಾಯದಿಂದಲೇ ಸೀತೆಯನ್ನು ಮರಳಿ ತರಲು ಭಗವಾನ್ ರಾಮನಿಂದ ಸಾಧ್ಯವಾಯಿತು. ವಿಭೀಷಣನ ಕಾರಣದಿಂದಾಗಿಯೇ ರಾಮನು ರಾವಣನನ್ನು ಕೊಲ್ಲುವಲ್ಲಿ ಯಶಸ್ವಿಯಾದ. ಮುಖೇಶ್ ರಾವಲ್ ಮಾಡಿದ ಈ ಪಾತ್ರವನ್ನು ಜನರು ಇಲ್ಲಿಯವರೆಗೆ ಮರೆತಿಲ್ಲ. ಮುಖೇಶ್ ರಾವಲ್ ಆ ಪಾತ್ರದಲ್ಲಿ ಎಲ್ಲರ ಹೃದಯಗಳನ್ನು ಗೆದ್ದಿದ್ದರು.
ರಮಾನಂದ ಸಾಗರ್ ಮುಖೇಶ್ ರಾವಲ್ ಅವರ ಜೀವನವನ್ನು ಬದಲಾಯಿಸಿದ್ದರು. ಮುಖೇಶ್ ರಾವಲ್ ಮೊದಲು ಪ್ರಸಿದ್ಧ ರಂಗಭೂಮಿ ತಾರೆಯಾಗಿದ್ದರು. ಅನೇಕ ನಾಟಕಗಳಲ್ಲಿ ನಟಿಸಿದ್ದರು. ಮುಖೇಶ್ ರಂಗಭೂಮಿಯಲ್ಲಿ ನಟಿಸುವುದನ್ನು ನೋಡಿದ ಅವರು ಆತನನ್ನು ವಿಭೀಷಣನನ್ನಾಗಿ ಮಾಡಲು ನಿರ್ಧರಿಸಿದರು. ಮೊದಲು, ಮುಖೇಶ್ ರಾವಲ್ ಮೇಘನಾದನ ಪಾತ್ರವನ್ನು ನಿರ್ವಹಿಸಲು ಬಯಸಿದ್ದರು. ರಮಾನಂದ ಸಾಗರ್ ಅವರನ್ನು ಮೇಘನಾದ ಜೊತೆಗೆ ವಿಭೀಷಣ ಎರಡೂ ಪಾತ್ರಕ್ಕಾಗಿ ಆಡಿಷನ್ ಮಾಡಿದರು. ಅವರಿಗೆ ವಿಭೀಷಣನ ಆಡಿಷನ್ ಹೆಚ್ಚು ಇಷ್ಟವಾಯಿತು. ಅದಕ್ಕೇ ಆಯ್ಕೆಯಾದರು.
ಇದರ ನಂತರ ಮುಖೇಶ್ ರಾವಲ್ ಹಿಂತಿರುಗಿ ನೋಡಲಿಲ್ಲ. ವಿಭೀಷಣನ ಪಾತ್ರದಲ್ಲಿ ಅವರನ್ನು ನೋಡಿದ ಎಲ್ಲರೂ ಅವರ ಅಭಿಮಾನಿಗಳಾದರು. ಆದರೆ 2016ರಲ್ಲಿ, ಎಲ್ಲರೂ ಬೆಚ್ಚಿ ಬೀಳುವ ರೀತಿಯಲ್ಲಿ ಮುಖೇಶ್ ಸಾವು ಕಂಡರು. ಮುಂಬೈನ ಕಾಂಡಿವಲಿ ಪ್ರದೇಶದಲ್ಲಿ ಮುಖೇಶ್ ರಾವಲ್ ಅವರ ಶವ ರೈಲ್ವೆ ಹಳಿಯಲ್ಲಿ ಪತ್ತೆಯಾಯಿತು.
Actor Childhood Photos: ಅಮೃತಧಾರೆ ಸೀರಿಯಲ್ ನಟನ ಬಾಲ್ಯದ ಅಪರೂಪ ಫೋಟೋಗಳು
ತನಿಖೆ ನಡೆಸಿದ ಪೊಲೀಸರು ಇದು ಅಪಘಾತವಲ್ಲ, ಆತ್ಮಹತ್ಯೆ ಪ್ರಕರಣ ಎಂದು ಹೇಳಿದರು. ರೈಲ್ವೆ ಹಳಿಯಲ್ಲಿ ರೈಲಿನ ಮುಂದೆ ಹಾರುತ್ತಿರುವ ವ್ಯಕ್ತಿಯ ಚಲನವಲನ ಸಿಸಿಟಿವಿ ದೃಶ್ಯಾವಳಿಯಲ್ಲಿ ಕಂಡುಬಂದಿತ್ತು. ಅವರೇ ಮುಖೇಶ್ ರಾವಲ್ ಎಂದು ತಿಳಿಸಲಾಯಿತು. ಕುಟುಮಂಬ ಅವರ ಶವವನ್ನು ಬಟ್ಟೆಗಳ ಆಧಾರದಲ್ಲಿ ಗುರುತಿಸಿತು. ‘ದೈನಿಕ್ ಭಾಸ್ಕರ್’ ವರದಿಯ ಪ್ರಕಾರ, ಮುಖೇಶ್ ರಾವಲ್ ಅವರ ಕುಟುಂಬ 2016ರ ನವೆಂಬರ್ 15ರ ಬೆಳಿಗ್ಗೆ ಬ್ಯಾಂಕಿನಿಂದ ಹಣ ಹಿಂಪಡೆಯಲು ಹೋಗಿದ್ದರು. ಅಲ್ಲಿಂದ ಅವರು ತಮ್ಮ ಕಾರ್ಯಕ್ರಮದ ಡಬ್ಬಿಂಗ್‌ಗೆ ಹೋಗುತ್ತಿದ್ದರು. ಆದರೆ ಅವರು ಅಲ್ಲಿಗೆ ತಲುಪಲಿಲ್ಲ ಮತ್ತು ಮನೆಗೂ ಹಿಂತಿರುಗಲಿಲ್ಲ.
ಇನ್ನೊಂದು ದುರಂತ ಎಂದರೆ, 2000ನೇ ಇಸವಿಯಲ್ಲಿ ಮುಖೇಶ್ ಅವರ ಪುತ್ರ ದ್ವಿಜ್, ರೈಲ್ವೆ ಅಪಘಾತವೊಂದರಲ್ಲಿ ತೀರಿಕೊಂಡಿದ್ದ. ಆತನನ್ನು ಕಳೆದುಕೊಂಡ ಬಳಿಕ ಮುಖೇಶ್ ಖಿನ್ನತೆಗೆ ಒಳಗಾಗಿದ್ದರು. ಸಾಯುವ ಹದಿನೈದು ದಿನಗಳ ಹಿಂದಿನಿಂದ ತೀವ್ರ ಖಿನ್ನತೆಯ ಲಕ್ಷಣಗಳನ್ನು ತೋರಿಸಿದ್ದರು. ಇದೇ ಕಾರಣಕ್ಕೆ ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಬಳಿಕ ಊಹಿಸಲಾಯಿತು.
Annayya Serial: ಜಿಮ್ ಸೀನಾಗೆ ಬಂದ ಪರಿಸ್ಥಿತಿ ಯಾರಿಗೂ ಬಾರದೇ ಇರ್ಲಿ ಅಂತಿದ್ದಾರಲ್ಲ ಜನ!


