ಒಂದು ಆಕರ್ಷಕ ಬ್ಯಾಗ್‌ ಬೆಲೆ ಅಬ್ಬಬ್ಬಾ ಅಂದರೆ ಎಷ್ಟಿರಬಹುದು?. ಬಹುಷಃ ಗರಿಷ್ಠ 10,000 ಇರಬಹುದು ಎಂಬ ಯೋಚನೆ ನಮ್ಮ-ನಿಮ್ಮ ತಲೆಗೆ ತಕ್ಷಣಕ್ಕೆ ಹೊಳೆಯಬಹುದು. ಆದರೆ, ಬಾಲಿವುಡ್‌ ನಟಿ ಪ್ರಿಯಾಂಕಾ ಚೋಪ್ರಾ ಬ್ಯಾಗ್‌ ಒಂದರ ಬೆಲೆ ಕೇಳಿದರೆ ಖಂಡಿತವಾಗಿಯೂ ಅಚ್ಚರಿಗೊಳಗಾಗುತ್ತೀರಿ. 

ವಾಷಿಂಗ್ಟನ್‌: ಒಂದು ಆಕರ್ಷಕ ಬ್ಯಾಗ್‌ ಬೆಲೆ ಅಬ್ಬಬ್ಬಾ ಅಂದರೆ ಎಷ್ಟಿರಬಹುದು?. ಬಹುಷಃ ಗರಿಷ್ಠ 10,000 ಇರಬಹುದು ಎಂಬ ಯೋಚನೆ ನಮ್ಮ-ನಿಮ್ಮ ತಲೆಗೆ ತಕ್ಷಣಕ್ಕೆ ಹೊಳೆಯಬಹುದು. ಆದರೆ, ಬಾಲಿವುಡ್‌ ನಟಿ ಪ್ರಿಯಾಂಕಾ ಚೋಪ್ರಾ ಬ್ಯಾಗ್‌ ಒಂದರ ಬೆಲೆ ಕೇಳಿದರೆ ಖಂಡಿತವಾಗಿಯೂ ಅಚ್ಚರಿಗೊಳಗಾಗುತ್ತೀರಿ.

ಪ್ರಿಯಾಂಕಾ ಎರಡು ದಿನಗಳ ಹಿಂದೆ ಅಮೆರಿಕದಲ್ಲಿ ತಮ್ಮ ಗೆಳೆಯ ನಿಕ್‌ ಜಾನ್ಸನ್‌ ಜೊತೆ ತೆರಳುತ್ತಿದ್ದ ವೇಳೆ ಹಿಡಿದುಕೊಂಡಿದ್ದ ಬ್ಯಾಗ್‌ನ ಬೆಲೆಗೆ, ಭಾರತದಲ್ಲಿ ಒಂದು ಸಣ್ಣ ಕಾರನ್ನು ಖರೀದಿಸಬಹುದು!.

ಅಂದರೆ, ಪ್ರಿಯಾಂಕಾರ ಬಾಟ್ಟಿಗಾ ವೆನಿಟಾ ಬ್ಯಾಗ್‌ ಬೆಲೆ ಬರೋಬ್ಬರಿ 4.60 ಲಕ್ಷ ರು. ಭಾರತದಲ್ಲಿ ರೆನಾಲ್ಟ್‌ ಕ್ವಿಡ್‌ 3.9 ಲಕ್ಷ, ಟಾಟಾ ಟಿಯಾಗೊ 3.56 ಲಕ್ಷ, ಡಟ್ಸನ್‌ ರೆಡಿ ಗೋ 3.96 ಲಕ್ಷ, ಹುಂಡೈ ಇಯಾನ್‌ 3.63 ಲಕ್ಷ ರು.ಗೆ ದೊರೆಯುತ್ತವೆ.