ಜೀ ಕನ್ನಡ ವಾಹಿನಿಯ ಸೆಲೆಬ್ರಿಟಿ ಕಾರ್ಯಕ್ರಮ ‘ವೀಕೆಂಡ್ ವಿತ್ ರಮೇಶ್’ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದು ಮುಂಬರುವ ಸೀಸನ್ ನಲ್ಲಿ ಯಾರೆಲ್ಲಾ ಬರುತ್ತಾರೆ ಎಂಬುದರ ಬಗ್ಗೆ ಎಲ್ಲೂ ರಿವೀಲ್ ಆಗಿಲ್ಲ. ವೀಕೆಂಡ್ ವಿತ್ ರಮೇಶ್ ಮೊದಲ ಅತಿಥಿಯಾಗಿ ವೀರೆಂದ್ರ ಹೆಗ್ಗಡೆ ಬರುವುದು ಖಚಿತವಾಗಿದೆ.

ಮತ್ತೊಂದು ಕಡೆ ಸ್ಟಾರ್ ಸುವರ್ಣ ಮನರಂಜನೆ ವಾಹಿನಿಯಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಡೆಸುವ ಕಾಮನ್ ಮ್ಯಾನ್ ರಿಯಾಲಿಟಿ ಶೋ ‘ಕನ್ನಡದ ಕೋಟ್ಯಾಧಿಪತಿ’ ಶುರುವಾಗುತ್ತಿದೆ.

ಎರಡೂ ಕಾರ್ಯಕ್ರಮಗಳು ಒಟ್ಟಾಗಿ ನಾಲ್ಕನೇ ಸೀಸನ್ ಗೆ ಕಾಲಿಡುತ್ತಿದೆ. ಬೇರೆ ಬೇರೆ ವಾಹಿನಿ ಆದ ಕಾರಣ ಪೈಪೋಟಿ ಹೆಚ್ಚಿರುತ್ತದೆ ಎಂಬ ಮಾತಿದೆ. ಕನ್ನಡ ಕೋಟ್ಯಾಧಿಪತಿ ಸೋಮವಾರದಿಂದ ಶುಕ್ರವಾರದವರೆಗೂ ಪ್ರಸಾರವಾಗುತ್ತಿದ್ದು ವೀಕೆಂಡ್ ಕಾರ್ಯಕ್ರಮ ಶನಿವಾರ ಹಾಗೂ ಭಾನುವಾರ ಪ್ರಸಾರವಾಗುತ್ತದೆ. ಈ ಎರಡು ಕಾರ್ಯಕ್ರಮ ಪ್ರಸಾರವಾಗುವ ದಿನಾಂಕ ಇನ್ನೂ ನಿಗದಿ ಆಗಿಲ್ಲ.

’ವೀಕೆಂಡ್ ವಿತ್ ರಮೇಶ್’ ಮೊದಲ ಗೆಸ್ಟ್ ಯಾರು ಗೊತ್ತಾ?