ಮೊನ್ನೆಯಷ್ಟೆ ಸ್ಯಾಂಡಲ್ ವುಡ್ ಗೋಲ್ಡನ್ ಕ್ವೀನ್, ಚೆಲುವಿನ ಚಿತ್ತಾರದ ಚೆಲುವೆ ಅಮೂಲ್ಯ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ಆದಿಚುಂಚನಗಿರಿ ಸನ್ನಿದ್ಧಿಯಲ್ಲಿ ನಡೆದ ಮದುವೆಯಲ್ಲಿ ಸಿನಿರಂಗದ ಕೆಲವರು ಹಾಗೂ ಆಪ್ತರಷ್ಟೇ ಪಾಲ್ಗೊಂಡಿದರು. ಹೀಗಾಗಿ ನಿನ್ನೆ ಖಾಸಗಿ ಹೋಟಲ್'‌ನಲ್ಲಿ ವೆಡ್ಡಿಂಗ್ ಪಾರ್ಟಿ ಆಯೋಜಿಸಲಾಗಿತು. ಕಲರ್‌ಪುಲ್ ವೇದಿಕೆಯಲ್ಲಿ ಕೆಲವರು ಡ್ಯಾನ್ಸ್ ಮಾಡಿ ಸಂಭ್ರಮಿಸಿದರು.
ಬೆಂಗಳೂರು(ಮೇ.15): ಮೊನ್ನೆಯಷ್ಟೆ ಸ್ಯಾಂಡಲ್ ವುಡ್ ಗೋಲ್ಡನ್ ಕ್ವೀನ್, ಚೆಲುವಿನ ಚಿತ್ತಾರದ ಚೆಲುವೆ ಅಮೂಲ್ಯ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ಆದಿಚುಂಚನಗಿರಿ ಸನ್ನಿದ್ಧಿಯಲ್ಲಿ ನಡೆದ ಮದುವೆಯಲ್ಲಿ ಸಿನಿರಂಗದ ಕೆಲವರು ಹಾಗೂ ಆಪ್ತರಷ್ಟೇ ಪಾಲ್ಗೊಂಡಿದರು. ಹೀಗಾಗಿ ನಿನ್ನೆ ಖಾಸಗಿ ಹೋಟಲ್'ನಲ್ಲಿ ವೆಡ್ಡಿಂಗ್ ಪಾರ್ಟಿ ಆಯೋಜಿಸಲಾಗಿತು. ಕಲರ್ಪುಲ್ ವೇದಿಕೆಯಲ್ಲಿ ಕೆಲವರು ಡ್ಯಾನ್ಸ್ ಮಾಡಿ ಸಂಭ್ರಮಿಸಿದರು.
ಹಿರಿಯ ನಟ ಶಿವರಾಜ್ ಕುಮಾರ್, ಜಗ್ಗೇಶ್, ತಾರಾ, ಸುಧಾರಾಣಿ, ಭಾರತಿ, ಜಯಂತಿ ಪ್ರಿಯಾಂಕಾ ಉಪೇಂದ್ರ, ಪಾರೂಲ್ ಯಾದವ್ ಸೇರಿದಂತೆ ಸಿನಿರಂಗದ ತಾರೆಯರು ಆಗಮಿಸಿ, ಅಮೂಲ್ಯ- ಜಗದೀಶ್ ದಂಪತಿಗೆ ಶುಭಕೋರಿದರು. ಅಲ್ಲದೇ ಸಚಿವ ಕೆ.ಜೆ ಜಾರ್ಜ್, ಆರ್ ಅಶೋಕ್ ಸೇರಿದಂತೆ ರಾಜಕೀಯ ಗಣ್ಯರು ಕೂಡ ಆಗಮಿಸಿದರು.
ತಾರೆಯರು, ರಾಜಕಾರಣಿಗಳು ಆಗಮಿಸಿ, ಶುಭ ಹಾರೈಸಿದಕ್ಕೆ ನವದಂಪತಿ ಹರ್ಷ ವ್ಯಕ್ತಪಡಿಸಿದರು.ಇನ್ನೂ ನಾಳೆ ಬೆಂಗಳೂರಿನಲ್ಲಿ ಅದ್ದೂರಿಯಾಗಿ ಆರತಕ್ಷತೆ ನಡೆಯಲಿದ್ದು, ತಾರೆಯರು, ರಾಜಕಾರಣಿಗಳು, ಅಭಿಮಾನಿಗಳು ಆಗಮಿಸಲಿದ್ದಾರೆ.
