ಕನ್ನಡದ ಮೋಸ್ಟ್ ಟ್ಯಾಲೆಂಟೆಡ್ ಡೈರೆಕ್ಟರ್ ಕಿರಿಕ್ ಪಾರ್ಟಿ ಖ್ಯಾತಿಯ ರಿಷಬ್ ಶೆಟ್ಟಿ ಗೃಹಸ್ಥಾಶ್ರಮಕ್ಕೆ ಕಾಲಿಟ್ಟಿದ್ದಾರೆ. ಕರಾವಳಿಯ ಬಂಟರ ಹುಡುಗ ಕಿರಿಕ್ ಪಾರ್ಟಿ ಸಿನಿಮಾ ಯಶಸ್ಸಿನ ಜೊತೆಗೆ ಮದುವೆ ಸಂಭ್ರಮವನ್ನು ಬೋನಸ್ ಆಗಿ ಪಡೆದಿದ್ದಾರೆ.
ಮಂಗಳೂರು(ಫೆ.10): ಕನ್ನಡದ ಮೋಸ್ಟ್ ಟ್ಯಾಲೆಂಟೆಡ್ ಡೈರೆಕ್ಟರ್ ಕಿರಿಕ್ ಪಾರ್ಟಿ ಖ್ಯಾತಿಯ ರಿಷಬ್ ಶೆಟ್ಟಿ ಗೃಹಸ್ಥಾಶ್ರಮಕ್ಕೆ ಕಾಲಿಟ್ಟಿದ್ದಾರೆ. ಕರಾವಳಿಯ ಬಂಟರ ಹುಡುಗ ಕಿರಿಕ್ ಪಾರ್ಟಿ ಸಿನಿಮಾ ಯಶಸ್ಸಿನ ಜೊತೆಗೆ ಮದುವೆ ಸಂಭ್ರಮವನ್ನು ಬೋನಸ್ ಆಗಿ ಪಡೆದಿದ್ದಾರೆ.
ತೀರ್ಥಹಳ್ಳಿಯ ಹುಡುಗಿ ಪ್ರಗತಿಯ ಜೊತೆಗೆ ತವರೂರಲ್ಲೇ ಹಸೆಮಣೆಗೆ ಏರಿದ್ದಾರೆ. ಸಹನಾ ಕನ್ವೆನ್ಶಲ್ ಹಾಲ್'ನಲ್ಲಿ ಬಂಟರ ಸಾಂಪ್ರದಾಯಿಕ ರೀತಿಯಲ್ಲಿ ರಿಷಬ್ ಹಸೆಮಣೆ ಏರಿದರು. ಸರಳ ಹೋಮ, ಸಪ್ತಪದಿ ಹಿರಿಯರ ಆಶೀರ್ವಾದಕ್ಕಷ್ಟೇ ಈ ಮದುವೆ ಮೀಸಲಾಗಿತ್ತು. ಕರಾವಳಿಯ ಕೊಂಬು ಕಹಳೆಯ ನಾದ ವೈಭವದ ಜೊತೆಗೆ ಕಿರಿಕ್ ಪಾರ್ಟಿ ತಂಡದ ಉಸ್ತುವಾರಿಯಲ್ಲಿ ಮದುವೆ ನಡೆಯಿತು.
ರಿಷಬ್ ಮನದನ್ನೆ ಪ್ರಗತಿ ತೀರ್ಥಹಳ್ಳಿ ಮೂಲದ ಬಂಟರ ಹುಡುಗಿ. IBM ಕಂಪನಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್. ಕಿರಿಕ್ ತಂಡದ ಕಲರವದ ಜೊತೆಗೆ ಅಭಿನಯ ಚಕ್ರವರ್ತಿ ಸುದೀಪ್ ಹಠಾತ್ತಾಗಿ ಮದುವೆಗೆ ಬೇಟಿಕೊಟ್ಟು ಅಚ್ಚರಿ ಮೂಡಿಸಿದ್ದಾರೆ. ಹಲವಾರು ನಟ, ನಟಿಯರು ಗಣ್ಯರು ಮದುವೆಯಲ್ಲಿ ಭಾಗವಹಿಸಿ ನವದಂಪತಿಗೆ ಶುಭ ಕೋರಿದರು.
