Asianet Suvarna News Asianet Suvarna News

ಎದೆಯಲ್ಲಿ ಕಲ್ಲಿದ್ದೋನಿಗೆ ಇದೆಲ್ಲ ಅಂಟೋಲ್ಲ..ಖಡಕ್ ಡೈಲಾಗ್ಸ್

ಶುಕ್ರವಾರ ಮಧ್ಯಾಹ್ನ ಕೆ.ಜಿ.ಎಫ್. ಟ್ರೈಲರ್ ಬಿಡುಗಡೆಯಾಗಿದೆ. ಕನ್ನಡ-ಮಲಯಾಳಂ ಟ್ರೈಲರ್ ಹೊಂಬಾಳೆ ಪ್ರೊಡಕ್ಷನ್ ಬಿಡುಗಡೆ ಮಾಡಿದರೆ, ವಿಶಾಲ್ ಫಿಲಂ ಫ್ಯಾಕ್ಟರಿಯಿಂದ ತಮಿಳು ಟ್ರೈಲರ್ ಲೋಕಾರ್ಪಣೆಯಾಗಿದೆ. ವರಾಹಿ ಪ್ರೊಡಕ್ಷನ್ ತೆಲುಗು A A ಫಿಲಂಸ್ ಹಿಂದಿ ಟ್ರೈಲರ್ ಅನ್ನ ಬಿಡುಗಡೆ ಮಾಡಿದೆ.

watch Yash and Srinidhi Shetty starrer KGF trailer Highlights
Author
Bengaluru, First Published Nov 9, 2018, 3:33 PM IST

ರಾಕಿಂಗ್ ಸ್ಟಾರ್ ಯಶ್ ಹವಾ ಸ್ಯಾಂಡಲ್ ವುಡ್ ನಲ್ಲಿ ಶುರುವಾಗಿದೆ. ಬಹು ನಿರೀಕ್ಷಿತ ಕೆಜಿಎಫ್ ಟ್ರೈಲರ್ ಬಿಡುಗಡೆಯಾಗಿದೆ. ಪಂಚ ಭಾಷೆಗಳಲ್ಲಿ ಏಕಕಾಲಕ್ಕೆ ಟ್ರೈಲರ್ ಲಾಂಚ್ ಆಗಿದೆ. ಬಿಡುಗಡೆಯಾಗಿ ಅರ್ಧ ಗಂಟೆಯಲ್ಲಿ ಪ್ರತಿಯೊಂದು ಭಾಷೆಯ ಟ್ರೈಲರ್ ಗಳು ಐವತ್ತು ಸಾವಿರಕ್ಕೂ ಅಧಿಕ ವೀವ್ ದಾಖಲಿಸಿದೆ.

ಕೆಜಿಎಫ್ ಟ್ರೈಲರ್ ಲಾಂಚ್.. ಅಭಿಮಾನಿಗಳಿಗೆ ಹಬ್ಬವೋ ಹಬ್ಬ

ಡಿಸೆಂಬರ್ 21 ಕ್ಕೆ ಚಿತ್ರ ತೆರೆಗೆ ಬರಲಿದ್ದು 2.44 ನಿಮಿಷ್ ಟ್ರೈಲರ್ ದಂಗುಬಡಿಸುವಂತೆ ಇದೆ. ಅಲ್ಲಲ್ಲಿ ಡೈಲಾಗ್ ಗಳು ರೋಮಾಂಚನ ಮಾಡುತ್ತವೆ. ಭಾವನೆಗಳಿಗೆ ಬೆಲೆ ಇಲ್ಲ, ಹೋಗ್ತಿದ್ದ ದಾರಿ ಬಗ್ಗೆ ಗೊತ್ತಿರಲಿಲ್ಲ... ಡೈಲಾಗ್ ಗಳು ಟ್ರೈಲರ್ ನಲ್ಲೇ ಸೆಳೆಯುತ್ತವೆ.

ಎಲ್ಲದಕ್ಕಿಂತ ಮುಖ್ಯವಾಗಿ ಎದೆಯಲ್ಲಿ ಕಲ್ಲಿದ್ದವನಿಗೆ ಇದೆಲ್ಲ ಅಂಟೋದೇ ಇಲ್ಲ.. ಎಂದು ಯಶ್ ಹೇಳುವ ಡೈಲಾಗ್ ರೋಮಾಂಚನ ಮಾಡುತ್ತದೆ.

 

 

 

Follow Us:
Download App:
  • android
  • ios