ಬೆಂಗಳೂರು(ಅ.04): ರಾಧಿಕಾಳನ್ನ ನಾನು ಮದುವೆಯಾಗಿಲ್ಲ, ಇದು ಸುಳ್ಳು ಸುದ್ದಿ. ನನಗೆ ಮದುವೆಯಾಗಿ ಎರಡು ಮಕ್ಕಳಿವೆ. ನನ್ನ ಪತ್ನಿಯ ಹೆಸರು ಅಮೃತಾ ಎಮದು ವಿವೇಕ್ ರಾಜ್ ಸ್ಪಷ್ಟನೆ ನೀಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸ್ಯಾಂಡಲ್ವುಡ್ ಮತ್ತು ಬಾಲಿವುಡ್`ನಲ್ಲಿ ನನಗೆ ಸ್ನೇಹಿತರಿದ್ದಾರೆ. ಒಂದು ಫೋಟೋ ಇಟ್ಟುಕೊಮಡು ಸುದ್ದಿ ಮಾಡುವುದು ಸರಿಯಲ್ಲ. ಕೆಮಣ್ಣುಗುಂಡಿಯಲ್ಲಿ ನಾವು ಕೃಷಿ ಮಾಡುತ್ತಿದ್ದೇವೆ. ಅಲ್ಲಿ 2 ವರ್ಷಗಳ ಹಿಂದೆ ತೆಗೆದ ಫೋಟೋಗಳಿವು. ಈ ಸುದ್ದಿ ಸುಳ್ಳು ಎಂದು ವಿವೇಕ್ ಹೇಳಿದ್ದಾರೆ. ರಾಧಿಕಾ ಸಹೋದರ ನನ್ನ ಸ್ನೇಹಿತ. ಹೀಗಾಗಿ, ಅವರ ಪರಿಚಯವಿದೆ. ಎಂದಿದ್ದಾರೆ.

ನಮ್ಮದು ದೊಡ್ಡ ಕಂಪನಿ, ನಮ್ಮ ವಿರೋಧಿಗಳು ಈ ರೀತಿ ಸುದ್ದಿ ಮಾಡಿರಬಹುದು ಎಂದು ವಿವೇಕ್ ರಾಜ್ ಹೇಳಿದ್ದಾರೆ.