ಚೆನ್ನೈ(ಅ.06):ನಿರ್ದೇಶಕನ ಲೈಂಗಿಕ ಕಿರುಕುಳದಿಂದ ಬೇಸತ್ತ ಮಲೆಯಾಳಿ ನಟಿ ಅತಿಥಿ ಇತ್ತೀಚೆಗೆ ಆತ್ಮಹತ್ಯೆಗೆ ಯತ್ನಿಸಿದ್ದ ಪ್ರಕರಣ ಭಾರೀ ಸಂಚಲನಕ್ಕೆ ಕಾರಣವಾಗಿತ್ತು. ಚಿತ್ರೋದ್ಯಮದ ಹುಳುಕನ್ನ ಈ ಪ್ರಕರಣ ಮತ್ತೊಮ್ಮೆ ಸಾಬೀತುಪಡಿಸಿತ್ತು. ಅಂದಹಾಗೆ, ಕಿರುಕುಳಕ್ಕೊಳಗಾದ ನಟಿಗೆ ಅಷ್ಟಾಗಿ ಬೆಂಬಲ ಸಿಗಲಿಲ್ಲ ಎಂಬುದೂ ಕಟು ಸತ್ಯ. ಪ್ರಕರಣ ಕುರಿತಂತೆ ತಮಿಳು ಚಿತ್ರೋದ್ಯಮ ನಾಡಿಗರ್ ಸಂಗಂನ ಪ್ರಮುಖರಲ್ಲೊಬ್ಬರಾದ ನಟ ವಿಶಾಲ್ ಮಾತನಾಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

`ನಿರ್ದೇಶಕ ಸೆಲ್ವ ಕಣ್ಣನ್`ನಿಂದ ಲೈಂಗಿಕ ಕಿರುಕುಳವಾಗುತ್ತಿರುವ ಬಗ್ಗೆ ಅತಿಥಿ ನನ್ನ ಬಳಿ ಮೊದಲೇ ಹೇಳಿಕೊಂಡಿದ್ದರು. ನಮ್ಮ ಸಂಘಟನೆ ಮೂಲಕ ಆಕೆಗೆ ನೆರವು ನೀಡಲು ಸಾಧ್ಯವಾಗಲಿಲ್ಲ. ಸಹೋದರನ ಜೊತೆ ಕಚೇರಿಗೆ ಬಂದಿದ್ದ ಅತಿಥಿ ನಿರ್ದೇಶಕನ ಟಾರ್ಚರ್ ಬಗ್ಗೆ ಹೇಳಿಕೊಂಡಿದ್ದರು. ಅತಿಥಿ ಪೇಯಿಂಗ್ ಗೆಸ್ಟ್`ನಲ್ಲಿದ್ದುದರಿಂದ ಯಾವಾಗಲೂ ಜೊತೆಯಲ್ಲಿ ಯಾರಾದರೂ ಇರುತ್ತಿದ್ದರು. ಆದರೆ, ಆ ದಿನ ಒಂಟಿಯಾಗಿದ್ದರಿಂದ ಈ ಕಠಿಣ ನಿರ್ಧಾರಕ್ಕೆ ಬಂದಿದ್ದಾರೆ ಎಂದು ನಾಡಿಗರ್ ಸಂಗಂನ ಪ್ರಧಾನ ಕಾರ್ಯದರ್ಶಿಯೂ ಆಗಿರುವ ನಟ ವಿಶಾಲ್ ಹೇಳಿದ್ಧಾರೆ.

ಮುಂದಿನ ಕೆಲ ದಿನಗಳಲ್ಲಿ ನಿರ್ದೇಶಕನನ್ನೂ ಕರೆಸಿ ವಿವರಣೆ ಪಡೆಯುತ್ತೇವೆ. ಸಂಘಟನೆ ಹೊರಗಡೆಯಿಂದ ಆಕೆಗೆ ನೆರವು ನೀಡುವ ಬಗ್ಗೆ ಚಿಂತಿಸುತ್ತಿದ್ದೇನೆ ಎಂದು ವಿಶಾಲ್ ಹೇಳಿದ್ದಾರೆ.