ಅನುಷ್ಕಾ ಶರ್ಮಾ ಜೊತೆ ವಿರಾಟ್ ಕೊಹ್ಲಿ ಮದುವೆಯಾಗುವ ಮುನ್ನ ಕೊಹ್ಲಿ ಜೀವನದಲ್ಲಿ ಐವರು ನಟಿಮಣಿಗಳು ಎಂಟ್ರಿ ಕೊಟ್ಟಿದ್ರು! ಅವರು ಯಾರು ಗೊತ್ತಾ?
ಬೆಂಗಳೂರಿನಲ್ಲಿ ನಡೆದ ಆರ್ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ ನಡೆದ ಕಾಲ್ತುಳಿತದಿಂದ 11 ಮಂದಿ ಮೃತಪಟ್ಟ ಬಳಿಕ ವಿರಾಟ್ ಕೊಹ್ಲಿ ಅವರ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ತಮ್ಮನ್ನು ನೋಡಲು ಬಂದಿರುವ ಅಭಿಮಾನಿಗಳಿಗೆ ಹೀಗಾದರೂ ಒಂದು ಪೋಸ್ಟ್ ಹಾಕಿ, ಹೊರಟೇ ಹೋದರು, ವಿದೇಶದಲ್ಲಿ ಎಂಜಾಯ್ ಮಾಡುತ್ತಿದ್ದಾರೆ. ಇಂಥವರಿಗಾಗಿ ಅಭಿಮಾನಿಗಳು ತಮ್ಮ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಎಂದೆಲ್ಲಾ ಸಾಕಷ್ಟು ಟೀಕೆಗಳು ಕೇಳಿಬರುತ್ತಿವೆ. ಇದೇ ಬೆನ್ನಲ್ಲೇ ವಿರಾಟ್ ಕೊಹ್ಲಿ ಅವರ ಹಿಂದಿನ ಸಂಬಂಧಗಳ ಬಗ್ಗೆ ಜಾಲತಾಣದಲ್ಲಿ ಪುನಃ ಚರ್ಚೆ ಶುರುವಾಗಿವೆ.
ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಜೊತೆ ವಿರಾಟ್ ಕೊಹ್ಲಿ ಸುಖಿ ದಾಂಪತ್ಯ ನಡೆಸುತ್ತಿದ್ದಾರೆ. ಮದುವೆಯಾದ ಮೇಲೆ ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಅವರ ಜೊತೆಗೂಡಿ ವಿರುಷ್ಕಾ ಎಂದೇ ಫೇಮಸ್ ಆಗಿದೆ. ವಿರುಷ್ಕಾ ಎಂದೇ ಖ್ಯಾತಿ ಪಡೆದಿರುವ ಈ ಜೋಡಿ ಅವರ ಅಪರೂಪದ ಜೋಡಿ 2017 ರ ಡಿಸೆಂಬರ್ 11ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ. ಸಿನಿಮಾದ ಉತ್ತುಂಗದಲ್ಲಿರುವಾಗಲೇ ಮದುವೆಯಾಗುವ ಮನಸ್ಸು ಮಾಡಿದ್ದರು ಅನುಷ್ಕಾ. ಕೆಲ ವರ್ಷಗಳ ಕಾಲ ಡೇಟಿಂಗ್ ಮಾಡಿದ್ದ ವಿರಾಟ್ ಕೊಹ್ಲಿ ಅವರ ಜೊತೆ ಇವರ ಮದುವೆಯಾಗಿದ್ದು, ಈ ರೊಮಾಂಟಿಕ್ ಜೋಡಿಗೆ 2021ರಲ್ಲಿ ವಾಮಿಕಾ ಎಂಬ ಮಗಳು ಜನಿಸಿದಳು.
ಇದೀಗ ವಿರಾಟ್ ಕೊಹ್ಲಿ ಬಗ್ಗೆ ಹೊಸ ಸುದ್ದಿಯೊಂದು ಭಾರಿ ಚರ್ಚೆಯಾಗುತ್ತಿದೆ. ಅದೇನೆಂದರೆ, ಅನುಷ್ಕಾ ಶರ್ಮಾಗೂ ಮೊದಲು ವಿರಾಟ್ ಐವರು ನಾಯಕಿಯರೊಂದಿಗೆ ಡೇಟ್ ಮಾಡಿದ್ದರಂತೆ. ಅವರ್ಯಾರಪ್ಪ ಎಂದರೆ, ಮೊದಲಿಗೆ ನಿಲ್ಲುವುದು, 2007ರಲ್ಲಿ ಮಿಸ್ ಇಂಡಿಯಾ ಆಗಿದ್ದ ನಟಿ ಸಾರಾ ಜೇನ್ ಡಯಾಸ್. ಅವರು ಬಾಲಿವುಡ್ಗೆ ಎಂಟ್ರಿ ಕೊಟ್ಟ ಮೇಲೆ ವಿರಾಟ್ ಕೊಹ್ಲಿಯೊಂದಿಗೆ ಡೇಟಿಂಗ್ ಮಾಡಿದ್ದರು ಎಂಬ ಸುದ್ದಿ ಇದೆ. ಈ ಕುರಿತು ಹಲವು ಮನರಂಜನಾ ಪೋರ್ಟಲ್ಗಳು ಮತ್ತು ಮಾಧ್ಯಮ ಸಂಸ್ಥೆಗಳು ಸುದ್ದಿ ಹರಡಿತ್ತು. ಪವನ್ ಕಲ್ಯಾಣ್ ಅಭಿನಯದ ಪಂಜಾ ಚಿತ್ರದಲ್ಲೂ ಸಾರಾ ನಾಯಕಿಯಾಗಿ ನಟಿಸಿದ್ದರು. ಇದಾದ ಮೇಲೆ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಜೊತೆ ಕೊಹ್ಲಿ ಹೆಸರು ಥಳಕು ಹಾಕಿಕೊಂಡಿತ್ತು. ಮೊಬೈಲ್ ಫೋನ್ ಜಾಹೀರಾತಿನಲ್ಲಿ ನಟಿಸಿದ ನಂತರ ವಿರಾಟ್ ಕೊಹ್ಲಿಯೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಗಾಳಿ ಸುದ್ದಿ ಹರಡಿತ್ತು. ಜಾಹೀರಾತಿನಲ್ಲಿ ವಿರಾಟ್ ಮತ್ತು ತಮನ್ನಾ ಇಬ್ಬರನ್ನೂ ಒಟ್ಟಿಗೆ ನೋಡಿ ಅಭಿಮಾನಿಗಳು ಖುಷ್ ಆಗಿದ್ದರು.
ಇಷ್ಟಾಗುತ್ತಿದ್ದಂತೆಯೇ, ನಟಿ ಮತ್ತು ರೂಪದರ್ಶಿ ಸಂಜನಾ ಅವರ ಜೊತೆಯೂ ಕೊಹ್ಲಿ ಹೆಸರು ಕೇಳಿಬಂದಿತ್ತು. ಐಪಿಎಲ್ ತಂಡ ರಾಯಲ್ ಚಾಲೆಂಜರ್ಸ್ ತಂಡ ಸೇರಿದಾಗ ಕ್ರಿಕೆಟಿಗನನ್ನು ಪ್ರೀತಿ ಮಾಡುತ್ತಿದ್ದರು ಎನ್ನುವ ಗಾಳಿ ಸುದ್ದಿ ಹರಡಿತ್ತು. ಉದ್ಯಮಿ ವಿಜಯ್ ಮಲ್ಯ ಆಯೋಜಿಸಿದ್ದ ಪಾರ್ಟಿಯಲ್ಲಿ ಸಂಜನಾ ಕೊಹ್ಲಿಯನ್ನು ಭೇಟಿಯಾಗಿದ್ದಾರೆ ಎಂಬ ವರದಿಗಳು ಬಂದಿದ್ದವು. ಇಷ್ಟಕ್ಕೇ ಮುಗಿಯಲಿಲ್ಲ. ವಿರಾಟ್ ಮತ್ತು ಇಸಾಬೆಲ್ಲೆ ಲೈಟ್ ಹಲವು ವರ್ಷಗಳಿಂದ ಡೇಟಿಂಗ್ ಮಾಡ್ತಿದ್ದಾರೆ ಎನ್ನುವುದೂ ಬಹಳ ವೈರಲ್ ಆಗಿತ್ತು. ಈ ಜೋಡಿ 2012 ರಿಂದ 2014ರ ವರೆಗೆ ಡೇಟಿಂಗ್ ನಡೆಸಿದ್ದರು ಎನ್ನಲಾಗಿತ್ತು. ಇಸಾಬೆಲ್ಲೆ ಸಂದರ್ಶನವೊಂದರಲ್ಲಿ ಕೊಹ್ಲಿಯೊಂದಿಗಿನ ಸಂಬಂಧದ ಬಗ್ಗೆ ಮಾತಾಡಿದ್ದರು. ನಾವು ಎರಡು ವರ್ಷ ಡೇಟಿಂಗ್ ಮಾಡಿ ಬ್ರೇಕಪ್ ಮಾಡಿಕೊಳ್ಳೋದಾಗಿ ಹೇಳಿದ್ದರು. ಇದಾದ ಬಳಿಕ ಐದನೆಯ ನಟಿ ಎಂದರೆ ಸಾಕ್ಷಿ ಅಗರ್ವಾಲ್. ತಮಿಳು ನಟಿಯಾಗಿರುವ ಸಾಕ್ಷಿ, ಕೊಹ್ಲಿ ಜೊತೆ ಡೇಟಿಂಗ್ ಮಾಡುತ್ತಿದ್ದರೂ ಬಳಿಕ ಬ್ರೇಕಪ್ ಮಾಡಿಕೊಂಡಿದ್ದರು ಎನ್ನಲಾಗಿದೆ.
