Asianet Suvarna News Asianet Suvarna News

ರೈಲಲ್ಲೂ ಡಾನ್ಸ್ ಬಾರ್ ಇದ್ಯಾ... ಚಲಿಸುವ ರೈಲಲ್ಲಿ ಯುವತಿಯ ಬಿಂದಾಸ್ ಬೆಲ್ಲಿ ಡಾನ್ಸ್‌ ವೈರಲ್

ಸದಾ ಜನರಿಂದ ತುಂಬಿ ತುಳುಕುವ ಮುಂಬೈ ಲೋಕಲ್ ಟ್ರೈನ್‌ನಲ್ಲಿ ಒಂದು ಕಾಲು ಊರಲು ಜಾಗ ಸಿಕ್ಕರೆ ಸಾಕಾಪ್ಪ ಎಂದು ಜನ ಚಡಪಡಿಸುತ್ತಾರೆ. ಅಂತಹ ಸ್ಥಿತಿಯಲ್ಲಿ ಈ ಸುಂದರಿಗೆ ಹೀಗೆ ಬಿಂದಾಸ್ ಡಾನ್ಸ್ ಮಾಡಲು ಜಾಗ ಹೇಗೆ ಸಿಕ್ಕಿತ್ತೊ ತಿಳಿಯದು. ಆದರೆ ಆಕೆ ಮಾಡಿದ ಬಿಂದಾಸ್ ಬೆಲ್ಲಿ ಡಾನ್ಸ್ ಈಗ ವೈರಲ್ ಆಗಿದೆ.

Viral video Girls bindas belly dance in Mumbai local train, Mumbai Railway reacts akb
Author
First Published Sep 20, 2023, 4:57 PM IST

ಇತ್ತೀಚೆಗೆ ರೈಲು ಬಸ್ ಮುಂತಾದ ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ನಾಚಿಕೆ ಮುಜುಗರ ಇಲ್ಲದೇ ಡಾನ್ಸ್ ಮಾಡುವುದು ಸಾಮಾನ್ಯ ಎನಿಸಿದೆ ಸೋಶಿಯಲ್ ಮೀಡಿಯಾ ಸ್ಟಾರ್‌ಗಳು ಸಾರ್ವಜನಿಕ ಸ್ಥಳಗಳಲ್ಲಿ ಬಿಂದಾಸ್ ಆಗಿ ಡಾನ್ಸ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಿದ್ದು, ಇವು ಕೆಲವೊಮ್ಮೆ ವೈರಲ್ ಆಗುತ್ತಿರುತ್ತವೆ. ಇಷ್ಟು ದಿನ ದೆಹಲಿ ಮೆಟ್ರೋ ಈ ಸೋಶಿಯಲ್ ಮೀಡಿಯಾ ಸ್ಟಾರ್‌ಗಳ ವಿಚಿತ್ರ ವೀಡಿಯೋಗಳಿಗಾಗಿ ಫೇಮಸ್ ಆಗಿತ್ತು. ಈಗ ಮುಂಬೈನ ಲೋಕಲ್ ರೈಲಿನ ಸರದಿ..

ಸದಾ ಜನರಿಂದ ತುಂಬಿ ತುಳುಕುವ ಮುಂಬೈ ಲೋಕಲ್ ಟ್ರೈನ್‌ನಲ್ಲಿ ಒಂದು ಕಾಲು ಊರಲು ಜಾಗ ಸಿಕ್ಕರೆ ಸಾಕಾಪ್ಪ ಎಂದು ಜನ ಚಡಪಡಿಸುತ್ತಾರೆ. ಅಂತಹ ಸ್ಥಿತಿಯಲ್ಲಿ ಈ ಸುಂದರಿಗೆ ಹೀಗೆ ಬಿಂದಾಸ್ ಡಾನ್ಸ್ ಮಾಡಲು ಜಾಗ ಹೇಗೆ ಸಿಕ್ಕಿತ್ತೊ ತಿಳಿಯದು. ಆದರೆ ಆಕೆ ಮಾಡಿದ ಬಿಂದಾಸ್ ಬೆಲ್ಲಿ ಡಾನ್ಸ್ ಈಗ ವೈರಲ್ ಆಗಿದ್ದು,  ಮುಂಬೈ ರೈಲ್ವೆ ಇಲಾಖೆಯೂ ಇದಕ್ಕೆ ಪ್ರತಿಕ್ರಿಯಿಸಿದೆ. 

@mumbaimatterz ಎಂಬ ಟ್ವಿಟ್ಟರ್ ಖಾತೆಯಿಂದ ಈ ವೀಡಿಯೋ ಪೋಸ್ಟ್ ಆಗಿದ್ದು, ಈಗ ಮುಂಬೈ ಲೋಕಲ್ ರೈಲಿನಲ್ಲೂ ಬೆಲ್ಲಿ ಡಾನ್ಸ್‌, ಮುಂಬೈ  ಲೋಕಲ್ ರೈಲು ಪ್ರತಿಭೆಗಳನ್ನು ಹೊರತರುವ ಸ್ಥಳದಂತೆ ಇದು ಕಾಣಿಸುತ್ತಿದೆ. ಮುಂಬೈನ ಸೆಂಟ್ರಲ್ ರೈಲ್ವೆಗೆ ಸೇರಿದ ಸ್ಯಾಂಡ್‌ಹರ್ಸ್ಟ್ ರಸ್ತೆಯಿಂದ ಮಸೀದಿ ನಿಲ್ದಾಣಕ್ಕೆ ಹೋಗುವ ಲೋಕಲ್ ಟ್ರೈನ್‌ನಲ್ಲಿ ಈ ಘಟನೆ ನಡೆದಿದೆ ಎಂದು ಬರೆದು ಸೆಂಟ್ರಲ್‌ ರೈಲ್ವೆಗೆ ಈ ವೀಡಿಯೋವನ್ನು ವರದಿ ಮಾಡಲಾಗಿದೆ. 

ವೀಡಿಯೋದಲ್ಲಿ ಗಾಢ ನೀಲಿ ಬಣ್ಣದ ಚೋಲಿ ಧಿರಿಸು ಧರಿಸಿದ ಸುಂದರ ಯುವತಿಯೊಬ್ಬಳು ಅರ್ಜಿತ್ ಸಿಂಗ್ ಹಾಡಿರುವ ಹಿಂದಿ ಹಾಡು 'ಇತನಾ ಬತಾದೇ ಮುಜ್‌ಕೋ ಬುಲಾಯೆ ಯ' ಎಂಬ ಹಾಡಿಗೆ ಬಿಂದಾಸ್ ಆಗಿ ಸೊಂಟ ಬಳುಕಿಸಿದ್ದಾಳೆ.  ವೀಡಿಯೋ ನೋಡಿದ ನೆಟ್ಟಿಗರು ಹೋ ಮುಂಬೈ ರೈಲಿನಲ್ಲಿ ಡಾನ್ಸ್ ಬಾರ್ ಬೇರೆ ಇದೆಯೇ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ  ಮುಂಬೈ ಮ್ಯಾಟರ್ಸ್ ಪ್ರತಿಕ್ರಿಯಿಸಿದ್ದು, ಅವರು ನಗರದ ಡಾನ್ಸ್ ಬಾರ್‌ನಿಂದ ಪ್ರೇರಿತರಾಗಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ.  ಈ ವೀಡಿಯೋ ನೋಡಿದ ಮುಂಬೈ ದಕ್ಷಿಣ ರೈಲ್ವೆ ಕೂಡ ಈ ವೀಡಿಯೋಗೆ ಪ್ರತಿಕ್ರಿಯಿಸಿದೆ.

ರಲು ಪ್ರಯಾಣದ ವೇಳೆ ಈ ರೀತಿಯ ಸಾಹಸ ಚಟುವಟಿಕೆಗಳನ್ನು ಮಾಡದಂತೆ ನಾವು ಪ್ರಯಾಣಿಕರಲ್ಲಿ ಮನವಿ ಮಾಡುತ್ತೇವೆ. ಪ್ರಯಾಣ ವೇಳೆ ಇಂತಹ ಚಟುವಟಿಕೆಗಳಿಂದ ದೂರವಿರಿ. ಇವು ಪ್ರಯಾಣದ ನಿಯಮಗಳಿಗೆ ಸರಿ ಹೊಂದುವುದಿಲ್ಲ, ರೈಲುಗಳಿರುವುದು ಸಾರ್ವಜನಿಕ ಸಾರಿಗೆಗಾಗಿಯೇ ಹೊರತು ಇಂತಹ ಚಟುವಟಿಕೆಗಳಿಗೆ ಅಲ್ಲ ಎಂದು ಮನವಿ ಮಾಡಿದೆ. ಅಲ್ಲದೇ ಈ ವಿಚಾರದ ಬಗ್ಗೆ ಗಮನ ನೀಡುವಂತೆ ರೈಲ್ವೆ ಪೊಲೀಸರಿಗೆ ಮನವಿ ಮಾಡಿದೆ. 

ಸ್ಪರ್ಧೆ ಇದ್ದಿದ್ದು ಅಂಬೆಗಾಲಿಡೋ ಮಕ್ಕಳಿಗೆ: ಸುಸ್ತಾಗಿದ್ದು ಮಾತ್ರ ಅಮ್ಮಂದಿರು: ವೈರಲ್ ವೀಡಿಯೋ

ಮುಂಬೈ ಲೋಕಲ್ ರೈಲಿನಲ್ಲಿ ನೊಣಗಳಂತೆ ಜನ ತುಂಬಿ ತುಳುಕಿರುತ್ತಾರೆ. ಹೀಗಿರುವಾಗ ಈಕೆಗೆ ಖಾಲಿ ಜಾಗ ಎಲ್ಲಿ ಸಿಕ್ಕಿತು ಎಂದು ಮತ್ತೊಬ್ಬರು ಪ್ರಶ್ನೆ ಮಾಡಿದ್ದಾರೆ. ರೈಲಿನಲ್ಲಿ ಫ್ರೀ ಫೋಲ್ ಡಾನ್ಸ್ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ಸಂಜೆ ವೇಳೆ ಬರುವ ವಿರಾರ್‌ ಲೋಕಲ್ ರೈಲಿನಲ್ಲೂ ಹೀಗೆ ಡಾನ್ಸ್ ಮಾಡುವಂತೆ ಒಬ್ಬರು ಮನವಿ ಮಾಡಿದ್ದಾರೆ. ಒಟ್ಟಿನಲ್ಲಿ ಯುವತಿಯ ಬೆಲ್ಲಿ ಡಾನ್ಸ್ ಈಗ ಸಖತ್ ವೈರಲ್ ಆಗಿದೆ. ಒಂದು ಲಕ್ಷಕ್ಕೂ ಹೆಚ್ಚು ಜನ ಈ ವೀಡಿಯೋ ವೀಕ್ಷಿಸಿದ್ದಾರೆ. 


ಶೂ ಹಾಕಿ ನಡೆದಾಡೋ ಹುಂಜ: ಊಟದ ಪಾತ್ರೆಗೆ ಮುಚ್ಚಿಡುವ ಶ್ವಾನ: ವೈರಲ್ ವೀಡಿಯೋ

 

Follow Us:
Download App:
  • android
  • ios