ನಟಿ ಕಂಗನಾ ರಣಾವತ್ ಕ್ಲಿಪ್ ಬೋರ್ಡ್ ಒಂದು ಇದೀಗ ವೈರಲ್ ಆಗಿದೆ. ಮಣಿಕರ್ಣಿಕಾ ದಿ ಕ್ವೀನ್ ಆಫ್ ಝಾನ್ಸಿ ಚಿತ್ರ ಮಾಡುತ್ತಿದ್ದ ಈ ಚಿತ್ರದ ನಿರ್ದೇಶಕರ ಹೆಸರು ಇರಬೇಕಾದ ಜಾಗದಲ್ಲಿ ಕಂಗನಾ ಹೆಸರು ಕಂಡು ಬಂದಿದೆ. 

ಮುಂಬೈ : ಬಾಲಿವುಡ್ ಕ್ವೀನ್ ಕಂಗನಾ ರಣಾವತ್ ಸದ್ಯ ಮಣಿಕರ್ಣಿ ಕ್ವೀನ್ ಆಫ್ ಝಾನ್ಸಿ ಚಿತ್ರ ಮಾಡುತ್ತಿದ್ದಾರೆ. ಇದೀಗ ಈ ಚಿತ್ರದ ಬಗ್ಗೆ ಕ್ಲಿಪ್ ಬೋರ್ಡ್ ಒಂದು ಇದೀಗ ರಿವೀಲ್ ಆಗಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕ್ವೀನ್ ಆಫ್ ಝಾನ್ಸಿ ಚಿತ್ರದ ರಿವೀಲ್ ಆದ ಕ್ಲಿಪ್ ಬೋರ್ಡ್ ನಲ್ಲಿ ನಿರ್ದೇಶಕದ ಹೆಸರಿರಬೇಕಾದಲ್ಲಿ ಕಂಗನಾ ಹೆಸರು ಕಂಡು ಬಂದಿದೆ. ಇದರಿಂದ ಈ ಚಿತ್ರದ ಅಸಲೀ ನಿರ್ದೇಶಕರು ಯಾರು ಎನ್ನುವ ಪ್ರಶ್ನೆಯೊಂದು ಜನರಲ್ಲಿ ಮೂಡಿದೆ.

ಇದೀಗ ಈ ಸಂಬಂಧ ಪ್ರತಿಕ್ರಿಯೆ ನೀಡಿದ ಚಿತ್ರ ತಂಡ ಕಂಗನಾ ನಿರ್ದೇಶನದ ಜವಾಬ್ದಾರಿ ವಹಿಸಿಕೊಂಡಿಲ್ಲ. ಆದರೆ ಇದು ತಾತ್ಕಾಲಿಕವಾಗಿ ಮಾಡಿದ ಹೊಂದಾಣಿಕೆ ಎಂದು ಹೇಳಿದೆ. 

ಮಣಿಕರ್ಣಿಕಾ ಚಿತ್ರವನ್ನು ಕ್ರಿಶ್ ಜಗರ್ಲಮುಡಿ ನಿರ್ದೇಶನ ಮಾಡುತ್ತಿದ್ದು ಕಂಗನಾ ರಾಣಿಯಾಗಿ ನಟಿಸುತ್ತಿದ್ದಾರೆ. ಈ ಚಿತ್ರವೂ ಮುಂದಿನ 2019ರ ಜನವರಿ 25ರಂದು ತೆರೆಗೆ ಬರಲಿದೆ. ಆದರೆ ಸದ್ಯ ರಿವೀಲ್ ಆದ ಕ್ಲಿಪ್ ಬೋರ್ಡ್ ನಿಂದ ಎಲ್ಲರೂ ಗೊಂದಲಗೊಳ್ಳುವಂತಾಗಿದೆ. 

View post on Instagram