ನಿರ್ದೇಶಕ ನೂತನ್ ಉಮೇಶ್ ಮತ್ತೊಂದು ಚಿತ್ರದ ಮೂಲಕ ಸಿನಿಮಾ ಮೈದಾನಕ್ಕಿಳಿದಿದ್ದಾರೆ. ಈ ಬಾರಿ ಅವರು 'ಕೃಷ್ಣನ್ ಮ್ಯಾರೇಜ್ ಸ್ಟೋರಿ'ಯಂತಹ ಸಾಫ್ಟ್ ಲವ್ ಸ್ಟೋರಿ ಚಿತ್ರದೊಂದಿಗೆ ಬರುತ್ತಿಲ್ಲ. ಪಕ್ಕಾ ಆ್ಯಕ್ಷನ್ ಸಿನಿಮಾ ಜತೆಗೆ ಎಂಟ್ರಿಯಾಗುತ್ತಿದ್ದಾರೆ.
ಅಂದಹಾಗೆ ಇವರ ಮಾಸ್ ಆಂಡ್ ಆ್ಯಕ್ಷನ್ ಚಿತ್ರಕ್ಕೆ ಜತೆಯಾಗುತ್ತಿರುವುದು ವಿನೋದ್ ಪ್ರಭಾಕರ್. ಹೌದು, ನೂತನ್ ಉಮೇಶ್ ನಿರ್ದೇಶನದ ಚಿತ್ರಕ್ಕೆ ವಿನೋದ್ ಪ್ರಭಾಕರ್ ನಾಯಕ. ಈಗಾಗಲೇ 'ರಗಡ್' ಎನ್ನುವ ಚಿತ್ರದಲ್ಲಿ ನಟಿಸುತ್ತಿದ್ದು, ಮತ್ತೊಮ್ಮೆ ತಮ್ಮ ಇಮೇಜ್‌ಗೆ ತಕ್ಕಂತಹ ಕತೆಯನ್ನು ವಿನೋದ್ ಪ್ರಭಾಕರ್ ಒಪ್ಪಿಕೊಂಡಿದ್ದಾರೆ.
'ರಗಡ್' ಸಿನಿಮಾ ಮುಗಿದ ಕೂಡಲೇ ನೂತನ್ ಉಮೇಶ್ ನಿರ್ದೇಶನದ ಚಿತ್ರಕ್ಕೆ ವಿನೋದ್ ಪ್ರಭಾಕರ್ ಜತೆಯಾಗಲಿದ್ದಾರೆ. 'ನಾನು ಫ್ಯಾಮಿಲಿ ಪ್ರೇಮ ಕತೆಗಳನ್ನೇ ತೆರೆಗೆ ತರುವವನು ಎನ್ನುವ ಮಾತಿದೆ. ಆದರೆ, ವಿನೋದ್ ಪ್ರಭಾಕರ್ ಮೂಲಕ ಹೊಸದೊಂದು ಸಿನಿಮಾ ಮಾಡುವುದಕ್ಕೆ ಹೊರಟಿದ್ದೇನೆ. ನನ್ನ ಇಮೇಜ್ ಜತೆಗೆ ವಿನೋದ್
ಅವರ ಇಮೇಜ್ ಅನ್ನು ಬದಲಾಯಿಸುವ ಸಿನಿಮಾ ಇದು. ಚಿತ್ರದ ಹೆಸರು ಮತ್ತು ಚಿತ್ರದ ಉಳಿದ ತಾರಾಗಣ ಇನ್ನಷ್ಟೆ ಆಯ್ಕೆ ಆಗಬೇಕಿದೆ. ಕೃಷ್ಣನ್ ಮ್ಯಾರೇಜ್ ಸ್ಟೋರಿ ಚಿತ್ರದಂತೆ ಈ ಚಿತ್ರವನ್ನು ದೊಡ್ಡ ಮಟ್ಟದಲ್ಲಿ ಮಾಡುತ್ತಿದ್ದೇನೆ. ಆ ಸಿನಿಮಾ ನನಗೆ ಹೇಗೆ ಬ್ರೇಕ್ ಕೊಟ್ಟಿತೋ, ಅದೇ ರೀತಿ ಈ ಸಿನಿಮಾ ನನಗೆ ಆಕ್ಷನ್ ಇಮೇಜ್ ನೀಡಲಿದೆ' ಎನ್ನುತ್ತಾರೆ ನೂತನ್ ಉಮೇಶ್.
ಅಕ್ಷಾ ಎಂಟರ್‌ಪ್ರೈಸಸ್ ಬ್ಯಾನರ್‌ನಲ್ಲಿ ಕತಿಗೇನಹಳ್ಳಿ ಸೋಮಶೇಖರ್ ಅವರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಬೆಂಗಳೂರು ಹಾಗೂ ಉತ್ತರ ಕರ್ನಾಟಕದಲ್ಲೇ ಚಿತ್ರದ ಚಿತ್ರೀಕರಣ ನಡೆಯಲಿದೆ. ಒಂದು ಅಥವಾ ಎರಡು ಹಂತದಲ್ಲಿ ಈ ಚಿತ್ರಕ್ಕೆ ಶೂಟಿಂಗ್ ಪ್ಲಾನ್ ಮಾಡಿಕೊಂಡಿದ್ದಾರೆ ನಿರ್ದೇಶಕರು. ಜುಲೈ ಮೊದಲ ವಾರದಲ್ಲಿ ಚಿತ್ರಕ್ಕ ಅದ್ದೂರಿಯಾಗಿ ಮುಹೂರ್ತ ನಡೆಯಲಿದೆ. 'ಟೈಸನ್', 'ಕ್ರ್ಯಾಕ್' ಚಿತ್ರಗಳ ನಂತರ ವಿನೋದ್ ಪ್ರಭಾಕರ್ ಒಂದರ ಹಿಂದೆ ಒಂದರಂತೆ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. 'ರಗಡ್' ಮುಗಿಯುವ ಮುನ್ನವೇ ಮತ್ತೊಂದು ಸಿನಿಮಾ ಒಪ್ಪಿಕೊಂಡಿದ್ದಾರೆ. ?
