ಈಗಾಗಲೇ ವಿಕ್ರಮ್ ಹೀರೊ ಆಗಿ ಬೆಳ್ಳಿತೆರೆಗೆ ಎಂಟ್ರಿ ಆಗುತ್ತಿದ್ದಾರೆನ್ನುವ ಸುದ್ದಿ ಕಳೆದೆರಡು ವರ್ಷಗಳಿಂದ ಹರಿದಾಡುತ್ತಿದ್ದರೂ ಅದಕ್ಯಾಕೋ ಕಾಲ ಕೂಡಿ ಬಂದಂತೆ ಕಾಣುತ್ತಿಲ್ಲ. ಆದರೆ 2019ರಲ್ಲಿ ವಿಕ್ರಮ್ ರವಿಚಂದ್ರನ್ ಹೀರೊ ಆಗಿ ಬೆಳ್ಳಿತೆರೆಗೆ ಎಂಟ್ರಿ ಆಗುವುದು ಬಹುತೇಕ ಖಚಿತ ಎನ್ನುತ್ತಿವೆ ಮೂಲಗಳು.

2017ರಲ್ಲಿ ‘ಸಾಹೇಬ’ಚಿತ್ರದೊಂದಿಗೆ ಮನೋರಂಜನ್ ರವಿಚಂದ್ರನ್ ಹೀರೊ ಆಗಿ ಬೆಳ್ಳಿತೆರೆಗೆ ಕಾಲಿಟ್ಟ ದಿನಗಳಿಂದಲೂ ವಿಕ್ರಮ್ ಕೂಡ ಹೀರೋ ಆಗಿ ಬೆಳ್ಳಿತೆರೆಗೆ ಎಂಟ್ರಿ ಆಗುತ್ತಿದ್ದಾರೆಂಬ ಸುದ್ದಿ ಹರಿದಾಡುತ್ತಲೇ ಬಂದಿದೆ. ಆರಂಭದಲ್ಲಿ ನಾಗಶೇಖರ್ ನಿರ್ದೇಶನದ ‘ನವೆಂಬರ್‌ನಲ್ಲಿ ಅವನು ಮತ್ತು ಅವಳು’ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎನ್ನುವ ಸುದ್ದಿ ಬಂತು. ಅದು ಮುಂದೇ ನಾಯಿತೋ ಗೊತ್ತಿಲ್ಲ. ನಾಗಶೇಖರ್ ಸೈಲೆಂಟಾಗಿ ‘ಅಮರ್’ ಚಿತ್ರ ನಿರ್ದೇಶನ ಮಾಡಲು ಹೋದರು.

ಸದ್ಯಕ್ಕೆ ಸಿಕ್ಕಿರೋ ಮಾಹಿತಿ ಪ್ರಕಾರ ‘ಮಾಸ್ ಲೀಡರ್’ ಚಿತ್ರದ ನಿರ್ದೇಶಕ ಸಹನಾಮೂರ್ತಿ ನಿರ್ದೇಶನದ ಚಿತ್ರದೊಂದಿಗೆ ವಿಕ್ರಮ್ ಬೆಳ್ಳಿತೆರೆಗೆ ಎಂಟ್ರಿ ಆಗುತ್ತಿದ್ದಾರೆ. ಆ ಸಿನಿಮಾಕ್ಕೆ ಸಿದ್ಧತೆ ನಡೆದಿದೆ. ಈ ಕುರಿತು ವಿಕ್ರಮ್‌ರನ್ನು ಮಾತನಾಡಿಸಿದರೆ ಅವರು ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದರು. ‘ಸಿನಿಮಾ ಮಾಡೋದು ನಿಜ. ಸಾಕಷ್ಟು ಆಫರ್ ಬರುತ್ತಿವೆ. ಯಾರ ಜತೆಗೆ ಸಿನಿಮಾ ಮಾಡ್ಬೇಕು, ಮೊದಲ ಸಿನಿಮಾದ ಕತೆ ಹೇಗಿರಬೇಕು ಅನ್ನೋದನ್ನು ನಾವಿನ್ನು ಡಿಸೈಡ್ ಮಾಡಿಲ್ಲ. ಒಂದಷ್ಟು ಸಿದ್ಧತೆಯ ನಂತರ ಸಿನಿಮಾಕ್ಕೆ ಕಾಲಿಡೋಣ ಅಂತಿದ್ದೇನೆ. ಹೊಸ ವರ್ಷಕ್ಕೆ ಹೊಸ ಸುದ್ದಿ ನೀಡುತ್ತೇನೆ’ಎಂದು ಹೇಳುತ್ತಾರೆ.

ಸಿನಿಮಾ ಮಾಡೋದು ನಿಜ. ಸಾಕಷ್ಟು ಆಫರ್ ಬರುತ್ತಿವೆ. ಯಾರ ಜತೆಗೆ ಸಿನಿಮಾ ಮಾಡ್ಬೇಕು, ಮೊದಲ ಸಿನಿಮಾದ ಕತೆ ಹೇಗಿರಬೇಕು ಅನ್ನೋದನ್ನು ನಾವಿನ್ನು ಡಿಸೈಡ್ ಮಾಡಿಲ್ಲ.-- ವಿಕ್ರಮ್ ರವಿಚಂದ್ರನ್