ಹುಡುಗಿಯರ ಹಾರ್ಟ್‌ ಕದ್ದ ಸ್ಯಾಂಡಲ್‌ವುಡ್ ದೂದ್ ಪೇಡ ದಿಗಂತ್ ಹಾಗೂ ಟಾಲಿವುಡ್ ರೌಡಿ ಬಾಯ್ ವಿಜಯ್ ದೇವರಕೊಂಡ ಒಟ್ಟಾಗಿ ನಾಲ್ಕು ಭಾಷೆಯಲ್ಲಿ ಮೂಡಿ ಬರುತ್ತಿರುವ 'ಹೀರೋ' ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.

 

'ಹೀರೋ' ಚಿತ್ರಕ್ಕೆ ಆನಂದ್ ಅಣ್ಣಾಮಲೈ ಆ್ಯಕ್ಷನ್ ಕಟ್‌ ಹೇಳುತ್ತಿದ್ದು ರಾಷ್ಟ್ರ ಪ್ರಶಸ್ತಿ ವಿಜೇತ ಕಾಕ ಮುಟೈ ಸಂಭಾಷಣೆ ಬರೆದಿದ್ದಾರೆ. ಲವ್ಲಿ ಬಾಯ್ಸ್‌ಗೆ ಜೋಡಿಯಾಗಿ ಶಾಲಿನಿ ಪಾಂಡೆ ಹಾಗೂ ಮಾಳವಿಕಾ ಮೋಹನ್ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ.

ಲಿಲ್ಲಿಗೆ ಈ ಹಾಡು ಡೆಡಿಕೇಟ್ ಮಾಡಿದ ವಿಜಯ್ ದೇವರಕೊಂಡ!

ಕ್ರೀಡಾಧಾರಿತ ಸಿನಿಮಾ ಇದಾಗಿದ್ದು ವಿಜಯ್ ವೃತ್ತಿಪರ ಬೈಕ್ ರೇಸರ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಆದರೆ ಎಲ್ಲಿಯೂ ದಿಗಂತ್ ಪಾತ್ರ ಬಹಿರಂಗವಾಗಿಲ್ಲ. ಈ ಹಿಂದೆ ಮುಂಗಾರುಮಳೆ ಚಿತ್ರವನ್ನು ತೆಲಗುವಿನಲ್ಲಿ ’ವಾನ’ ಎನ್ನುವ ರಿಮೇಕ್ ಚಿತ್ರದಲ್ಲಿ ಅಭಿನಯಿಸಿದ ದಿಗಂತ್ ಹಲವು ವರ್ಷಗಳ ನಂತರ ಹೀರೋ ಚಿತ್ರದ ಮೂಲಕ ಕಮ್‌ಬ್ಯಾಕ್ ಮಾಡುತ್ತಿದ್ದಾರೆ.