'ನಿನ್ನ ನೀಲಿ ಕಣ್ಣಲಿರೋ ಆ ಕಾಂತಿಲಿ....ಮುಂಜಾನೆ ಮೂಡಿದಂತೆ ನಂಗೇ' ಎಂದು ಶುರುವಾಗುವ ಈ ಹಾಡು ಫುಲ್ ರಶ್ಮಿಕಾಳನ್ನು ಕೊಂಡಾಡಿದಂತಿದೆ. ಧನ್‌ರಾಜ್ ರಾಜನ್‌ ಸಾಹಿತ್ಯಕ್ಕೆ ಗೌತಮ್ ಭಾರದ್ವಾಜ್‌ ತಮ್ಮ ಧ್ವನಿಯ ಮೂಲಕ ಜೀವ ತುಂಬಿದ್ದಾರೆ. ಲಹರಿ ಮ್ಯೂಸಿಕ್ ಯೂಟ್ಯೂಬ್ ಚಾನೆಲ್‌ನಲ್ಲಿ ಆಡಿಯೋ ಸಾಂಗ್‌ ರಿಲೀಸ್ ಆಗಿದ್ದು ವಿಡಿಯೋ ಸಾಂಗ್‌ ರಿಲೀಸ್ ಆಗಿಲ್ಲ.

 

ಈ ಹಾಡನ್ನು ರಶ್ಮಿಕಾಳಿಗೆ ಬರ್ತಡೇ ಗಿಫ್ಟ್ ಆಗಿ ನೀಡುವುದಾಗಿ ವಿಜಯ್ ದೇವರಕೊಂಡ ಹಾಗೂ ಡಿಯರ್‌ ಕಾಮ್ರೇಡ್ ಚಿತ್ರತಂಡ ನಿರ್ಧಾರ ಮಾಡಿತ್ತು. ಇದಕ್ಕೆ 'ಬೆಸ್ಟ್ ಗಿಫ್ಟ್ ಇನ್ ಲವ್‌ ವಿತ್ ಸಾಂಗ್‌ ' ಎಂದು ರಶ್ಮಿಕಾ ಟ್ಟೀಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.