ಸಿನಿಮಾ ರಂಗದಲ್ಲಿ ಪಾತ್ರಕ್ಕಾಗಿ ನಿರ್ದೇಶಕರು ಮಂಚ ಏರುವಂತೆ ಕರೆಯುತ್ತಾರೆ ಎಂಬ ಅಳಲನ್ನು ನಟಿಯರು ಹೊರಹಾಕುತ್ತಿದ್ದರು. ನಟಿ ತನುಶ್ರೀ ದತ್ತಾ ತಮ್ಮ ಮೇಲಿನ ಲೈಂಗಿಕ ಕಿರುಕುಳದ ಬಗ್ಗೆ ಮಾತನಾಡಿದ್ದು ದೊಡ್ಡ ಸುದ್ದಿಯಾಗಿತ್ತು. ಯಾವ ಕಾರಣಕ್ಕೆ ನಾನಾ ಪಾಟೇಕರ್ ಜತೆ ಸಾಂಗ್ ನಿಂದ ಹೊರಬಂದಿದ್ದೆ ಎಂದು ಹೇಳಿದ್ದರು.

ಮುಂಬೈ (ಅ.1): 10 ವರ್ಷಗಳ ಹಿಂದೆ ನಡೆದ ಲೈಂಗಿಕ ಕಿರುಕುಳ ಪ್ರಕರಣದ ಬಗ್ಗೆ ನಟಿ ತನುಶ್ರೀ ದತ್ತಾ ತುಟಿ ಬಿಚ್ಚಿದ್ದರು. ನಟ ನಾನಾ ಪಾಟೇಕರ್ ನನ್ನ ಜತೆಗೆ ಅನುಚಿತಚಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿದ್ದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈಗ ಅದಕ್ಕೆ ಸಾಕ್ಷಿ ಸಹ ದೊರೆತಿದೆ. ತನುಶ್ರೀ ದತ್ತಾ ಶೂಟಿಂಗ್ ನಿಂದ ಹೊರಬಂದಾಗ ಅವರ ಕಾರ್ ಮೇಲೆ ಕಿಡಿಗೇಡಿಗಳು ಮುಗಿಬಿದ್ದಿದ್ದರು.ಮನಸೋ ಇಚ್ಛೆ ದಾಳಿ ಮಾಡಿದ್ದರು. ಈ ವಿಡಿಯೋ ಮತ್ತೆ ವೈರಲ್ ಆಗುತ್ತಿದೆ.