ಉರಿ ಸಿನಿಮಾ ಹೀರೋ ವಿಕ್ಕಿ ಕೌಶಲ್ ಅಭಿಮಾನಿಗಳಿಗೆ ಶಾಕಿಂಗ್ ಸುದ್ದಿ| ಶೂಟಿಂಗ್ ವೇಳೆ ಅಪಘಾತ ಸಂಭವಿಸಿ ಕೌಶಲ್ ಗೆ ಗಂಭೀರ ಗಾಯ| ಮುಖಕ್ಕೆ 13 ಹೊಲಿಗೆಗಳು, ಮೂಳೆ ಫ್ರ್ಯಾಕ್ಚರ್

ಮುಂಬೈ[ಏ.20]: ಸರ್ಜಿಕಲ್ ಸ್ಟ್ರೈಕ್ ಆಧಾರಿತ ಸಿನಿಮಾ 'ಉರಿ'ಯಲ್ಲಿ ತಮ್ಮ ಅದ್ಭುತ ನಟನೆಯ ಮೂಲಕ ಪ್ರೇಕ್ಷಕರ ಹೃನ್ಮನ ಗೆದ್ದಿದ್ದ ನಟ ವಿಕ್ಕಿ ಕೌಶಲ್ ಅಭಿಮಾನಿಗಳಿನ್ನು ಬೆಚ್ಚಿ ಬೀಳಿಸುವ ಘಟನೆಯೊಂದು ನಡೆದಿದೆ. ಹಾರರ್ ಸಿನಿಮಾವೊಂದರಲ್ಲಿ ನಟಿಸುತ್ತಿದ್ದ ವಿಕ್ಕಿ ಕೌಶಲ್, ಸಿನಿಮಾ ಸೆಟ್ ನಲ್ಲಿ ನಡೆದ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದಾರೆ. ವಿಕ್ಕಿ ಮುಖಕ್ಕೆ ಗಂಭೀರ ಗಾಯಗಳಾಗಿವೆ ಎಂಬ ಮಾಹಿತಿ ಲಭ್ಯವಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
Scroll to load tweet…

ಲಭ್ಯವಾದ ಮಾಹಿತಿ ಅನ್ವಯ ವಿಕ್ಕಿ ಕೌಶಲ್, ಭಾನುಪ್ರತಾಪ್ ಸಿಂಗ್ ನಿರ್ದೇಶನದ ಹಾರರ್ ಸಿನಿಮಾದ ದೃಶ್ಯವೊಂದರ ಶೂಟಿಂಗ್ ನಲ್ಲಿ ವ್ಯಸ್ತರಾಗಿದ್ದರು. ಈ ವೇಳೆ ನಡೆದ ಅಪಘಾತದಲ್ಲಿ ಗಾಯಗೊಂಡಿದ್ದಾರೆ. ಈ ದುರಂತದಲ್ಲಿ ಕೌಶಲ್ ಮುಖಕ್ಕೆ ಗಾಯಗಳಾಗಿದ್ದು, ಅವರ Cheekbone[ಕೆನ್ನೆಯ ಮೂಳೆ] ಫ್ರ್ಯಾಕ್ಚರ್ ಆಗಿದೆ. ಅಲ್ಲದೇ ಕೆನ್ನೆಗೆ 13 ಹೊಲಿಗೆಗಳನ್ನೂ ಹಾಕಲಾಗಿದ್ದು, ಚಿಕಿತ್ಸೆ ಮುಂದುವರೆದಿದೆ.