ನವದೆಹಲಿ (ಜ. 30): ಸರ್ಜಿಕಲ್ ಸ್ಟ್ರೈಕ್ ಆಧಾರಿತ ಉರಿ ಸಿನಿಮಾಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. 

’ಉರಿ’ ಚಿತ್ರವನ್ನು ನೋಡಿದ ನಿರ್ಮಲಾ ಸೀತಾರಾಮನ್ ಥಿಯೇಟರ್ ನಲ್ಲೇ ಸೈನಿಕರಿಗೆ ವಂದಿಸಿದ್ದು ಹೀಗೆ

ಪ್ರಧಾನಿ ಮೋದಿ, ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಚಿತ್ರವನ್ನು ನೋಡಿ ಮೆಚ್ಚಿಕೊಂಡಿದ್ದಾರೆ. ಇದೀಗ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಉರಿ ಸಿನಿಮಾ ನೋಡಿ ಇನ್ಸ್ ಪೈರಿಂಗ್ ಆಗಿದೆ ಎಂದಿದ್ದಾರೆ. 

 

ಸರ್ಜಿಕಲ್ ಸ್ಟ್ರೈಕ್ ನಡೆದಿದ್ದು ಹೇಗೆ ಗೊತ್ತಾ? ತಿಳಿದುಕೊಳ್ಳಲು ’ಉರಿ’ ಸಿನಿಮಾ ನೋಡಿ

2016 ರ ಸೆಪ್ಟೆಂಬರ್ 18 ರಂದು ಉರಿ ಸೇನಾ ನೆಲೆಮೇಲೆ ಪಾಕ್ ಭಯೋತ್ಪಾದಕರು ದಾಳಿ ಮಾಡ್ತಾರೆ. ಈ ದಾಳಿಯಲ್ಲಿ 19 ಸೈನಿಕರು ಹುತಾತ್ಮರಾಗುತ್ತಾರೆ. ಇದಕ್ಕೆ ಉತ್ತರವಾಗಿ ಭಾರತೀಯ ಸೈನಿಕರು ಸರ್ಜಿಕಲ್ ಸ್ಟ್ರೈಕ್ ನಡೆಸುತ್ತಾರೆ. ಸರ್ಜಿಕಲ್ ದಾಳಿಗೆ ಭಾರತೀಯ ಸೇನೆ ಹೇಗೆ ತಯಾರಿ ನಡೆಸಿತ್ತು? ಅವರಿಗೆ ಎದುರಾದ ಕಷ್ಟಗಳೇನು ಎಂಬುದನ್ನು ಈ ಸಿನಿಮಾ ಹೇಳುತ್ತದೆ.  ಆದಿತ್ಯ ಧಾರ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. 

‘ಉರಿ ಸಿನಿಮಾ ನೋಡಿ ಖುಷಿಯಾಯ್ತು. ಇಡೀ ಚಿತ್ರತಂಡಕ್ಕೆ ನನ್ನ ಅಭಿನಂದನೆಗಳು. ಭಾರತೀಯ ಸೇನೆಗೆ ಗೌರವ ಸಲ್ಲಿಸಿದ ಇಡೀ ಚಿತ್ರತಂಡಕ್ಕೆ ವಂದನೆಗಳು ಎಂದಿದ್ದಾರೆ.