ನಮ್ಮ ಸೈನಿಕರು ಪಾಕ್ ಉಗ್ರರ ಮೇಲೆ ಸರ್ಜಿಕಲ್ ಸ್ಟ್ರೈಕ್ ನಡೆಸಿರುವುದು ನಿಮಗೆಲ್ಲಾ ಗೊತ್ತೇ ಇದೆ. ಹೇಗಿತ್ತು ಸರ್ಜಿಕಲ್ ಸ್ಟ್ರೈಕ್? ಹೇಗೆಲ್ಲಾ ತಯಾರಿ ನಡೆಸಿದ್ದರು? ಎಂಬುದೆಲ್ಲವನ್ನು ಹೇಳುತ್ತದೆ ’ಉರಿ’ ಸಿನಿಮಾ.
ಬೆಂಗಳೂರು (ಜ. 28): ’ಉರಿ’ ಸಿನಿಮಾ ಇಡೀ ದೇಶದ ಗಮನವನ್ನು ಸೆಳೆಯುತ್ತಿದ್ದು ಚಿತ್ರ ರಸಿಕರ ಮನಗೆದ್ದಿದೆ.
ಭಾರತೀಯ ಸೈನಿಕರು ಒಪಾಕ್ ಉಗ್ರರ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡಿದ್ದು ನಿಮಗೆಲ್ಲಾ ನೆನಪಿರಬಹುದು. ಈ ಸರ್ಜಿಕಲ್ ಕುರಿತು ಉರಿ ಸಿನಿಮಾವನ್ನು ಮಾಡಲಾಗಿದ್ದು ಪ್ರೇಕ್ಷಕರ ಮನ ಗೆದ್ದಿದೆ. ಈಗಾಗಲೇ ಬಾಕ್ಸಾಫೀಸ್ ನಲ್ಲಿ 100 ಕೋಟಿ ಕಲಕ್ಷನ್ ಮಾಡಿದೆ.
ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಪ್ರೇಕ್ಷಕರ ಜೊತೆ ಕುಳಿತು ’ಉರಿ’ ಸಿನಿಮಾವನ್ನು ವೀಕ್ಷಿಸಿದ್ದಾರೆ. ನಿರ್ಮಲಾರವರ ಜೊತೆ ಕುಳಿತು ಪ್ರೇಕ್ಷಕರು ಕೂಡಾ ಪುಳಕಿತರಾಗಿದ್ದರು. ಇಡೀ ಥಿಯೇಟರ್ ನಲ್ಲಿ ದೇಶಭಕ್ತಿ ಎದ್ದು ಕಾಣುತ್ತಿತ್ತು. ಪ್ರೇಕ್ಷಕರೂ ’ಜೈ ಹಿಂದ್’ ಎನ್ನುತ್ತಿದ್ದರು.
ಉರಿ ಚಿತ್ರವನ್ನು ವೀಕ್ಷಿಸಿದ ನಿರ್ಮಲಾ ಸೀತಾರಾಮನ್ ಕೊನೆಯಲ್ಲಿ ಎದ್ದುನಿಂತು ’ How is the Josh' ಎಂದು ಕೇಳಿದಾಗ ಪ್ರೇಕ್ಷಕರೆಲ್ಲಾ 'High josh' ಎಂದು ಸಾಥ್ ನೀಡುತ್ತಾರೆ.
ಮಿಕ್ಕಿ ಕೌಶಲ್, ಪರೇಶ್ ರಾವಲ್, ಯಾಮಿ ಗೌತಮ್ ಸೇರಿದಂತೆ ಹಲವು ಕಲಾವಿದರು ಈ ಸಿನಿಮಾದಲ್ಲಿ ಇದ್ದಾರೆ.
2016 ರ ಸೆಪ್ಟೆಂಬರ್ 18 ರಂದು ಉರಿ ಸೇನಾ ನೆಲೆಮೇಲೆ ಪಾಕ್ ಭಯೋತ್ಪಾದಕರು ದಾಳಿ ಮಾಡ್ತಾರೆ. ಈ ದಾಳಿಯಲ್ಲಿ 19 ಸೈನಿಕರು ಹುತಾತ್ಮರಾಗುತ್ತಾರೆ. ಇದಕ್ಕೆ ಉತ್ತರವಾಗಿ ಭಾರತೀಯ ಸೈನಿಕರು ಸರ್ಜಿಕಲ್ ಸ್ಟ್ರೈಕ್ ನಡೆಸುತ್ತಾರೆ. ಸರ್ಜಿಕಲ್ ದಾಳಿಗೆ ಭಾರತೀಯ ಸೇನೆ ಹೇಗೆ ತಯಾರಿ ನಡೆಸಿತ್ತು? ಅವರಿಗೆ ಎದುರಾದ ಕಷ್ಟಗಳೇನು ಎಂಬುದನ್ನು ಈ ಸಿನಿಮಾ ಹೇಳುತ್ತದೆ. ಆದಿತ್ಯ ಧಾರ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.
