ಕನ್ನಡ ಹಿರಿಯ ನಟ ಕೆ. ಎಸ್ . ಅಶ್ವಥ್ ಅವರ ಪುತ್ರ ಮತ್ತೊಮ್ಮೆ ತಮ್ಮ ಸಿನಿ ಜರ್ನಿ ಶುರು ಮಾಡಿದ್ದಾರೆ. ಅದುವೇ ಬಾಕ್ಸ್ ಆಫೀಸ್ ಸುಲ್ತಾನ್ ಚಿತ್ರ ‘ಯಜಮಾನ’ದ ಮೂಲಕ.

ಇನ್ನು ಈ ಚಿತ್ರದ ನಾಯಕಿ ರಶ್ಮಿಕಾ ಮಂದಣ್ಣ ನಟ ಶಂಕರ್ ಅಶ್ವಥ್ ರೊಂದಿಗಿರುವ ಒಡನಾಟವನ್ನು ಹಂಚಿಕೊಂಡಿದ್ದಾರೆ.

‘ನಾನು ಚಲನಚಿತ್ರರಂಗ ಪ್ರವೇಶಿಸಿ ಮೂರು ದಶಕಗಳಾದರೂ ಈ ಅನುಭವ ಎಂದು ಆಗಿರಲಿಲ್ಲ. ಒಬ್ಬ ಪ್ರಖ್ಯಾತ ನಾಯಕ ನಟಿ ನನ್ನನ್ನು ತಂದೆಯಂತೆ ಕಂಡಿದ್ದಲ್ಲದೆ, ಕತ್ತು ಭುಜ ನೋವೆಂದು ಕುಳಿತಿದ್ದಾಗ ಹಿಂದಿನಿಂದ ಬಂದು ಭುಜವನ್ನು ಒತ್ತಿದ್ದು ಒಬ್ಬ ಮಗಳೇ ಸರಿ, ಇಂತಹ ಮಗಳನ್ನು ನಾನು ನಿಜ ಜೀವನದಲ್ಲಿ ಪಡೆದಿದ್ದರೆ ನನ್ನಂತಹ ಅದೃಷ್ಟಶಾಲಿ ಬೇರೆ ಯಾರೂ ಇರುತ್ತಿರಲಿಲ್ಲ. ಧನ್ಯವಾದಗಳು ರಶ್ಮಿಕಾ ಮಂದಣ್ಣ’ ಎಂದು ಬರೆದು ಕೊಂಡಿದ್ದಾರೆ.

 

ಕಾರಣಾಂತರಗಳಿಂದ ಸಿನಿಮಾದಿಂದ ದೂರವಿದ್ದ ಶಂಕರ್ ಅವರನ್ನು ಸ್ವತಃ ದರ್ಶನ್ ಅವರೇ ತಮ್ಮ ಯಜಮಾನ ಚಿತ್ರದಲ್ಲಿ ನಟಿಸಲು ಅವಕಾಶ ನೀಡಿದ್ದರು.