Asianet Suvarna News Asianet Suvarna News

ವೀರಮದಕರಿ ಕದನ: ಸಿನಿಮಾ ಮಾಡದಂತೆ ದರ್ಶನ್‌ಗೆ ವಾರ್ನಿಂಗ್!

ವಾಲ್ಮೀಕಿ ಜನಾಂಗದ ಸುದೀಪ್‌ ಅವರೇ ನಟಿಸಬೇಕು; ಬೇರೆಯವರು ನಟಿಸಿದ್ರೆ ಕೋರ್ಟ್‌ಗೆ' | ವಾಲ್ಮೀಕಿ ಪೀಠದ ಪ್ರಸನ್ನಾನಂದ ಪುರಿ ಶ್ರೀಗಳ ಎಚ್ಚರಿಕೆ

Veera Madakari controversy: Valmeeki seer Prasannananda swamiji warns to Darshan
Author
Bengaluru, First Published Oct 9, 2018, 11:15 AM IST
  • Facebook
  • Twitter
  • Whatsapp

ವಿಜಯಪುರ (ಅ. 09):  ವೀರ ಮದಕರಿ ಚಿತ್ರ ಕುರಿತ ವಿವಾದ ಸದ್ಯಕ್ಕೆ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ತಮ್ಮ ನೆಚ್ಚಿನ ನಟರೇ ಮದಕರಿ ಪಾತ್ರ ಮಾಡಬೇಕೆಂದು ಅಭಿಮಾನಿಗಳ ನಡುವಿನ ವಾರ್‌ ಮುಂದುವರೆದಿರುವ ಸಮಯದಲ್ಲೇ ಇದೀಗ ಮಠಾಧೀಶರೊಬ್ಬರು ಮಧ್ಯಪ್ರವೇಶಿಸಿದ್ದು, ಮದಕರಿ ಚಿತ್ರದಲ್ಲಿ ನಟ ಕಿಚ್ಚ ಸುದೀಪ್‌ ಅವರೇ ನಟಿಸಬೇಕು. ಅದನ್ನು ಹೊರತು ಪಡಿಸಿ ಈ ಪಾತ್ರದಲ್ಲಿ ಬೇರೆ ನಟರು ಅಭಿನಯಿಸಿದರೆ ಕಾನೂನು ಹೋರಾಟ ನಡೆಸುವುದಾಗಿಯೂ ಎಚ್ಚರಿಕೆ ನೀಡಿದ್ದಾರೆ.

ಮುಂದುವರೆದ ’ವೀರಮದಕರಿ’ ವಾರ್ ; ದರ್ಶನ್‌ಗೆ ಸ್ವಾಮೀಜಿ ಬೆದರಿಕೆ

ಸೋಮವಾರ ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ದಾವಣಗೆರೆ ಜಿಲ್ಲೆಯ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಜಗದ್ಗುರು ಪ್ರಸನ್ನಾನಂದಪುರಿ ಸ್ವಾಮೀಜಿ, ಸುದೀಪ್‌ ಬುದ್ಧಿಜೀವಿ. ಮದಕರಿ ಚಿತ್ರದಲ್ಲಿ ಕಿಚ್ಚ ಸುದೀಪ್‌ ಅವರೇ ನಟಿಸಬೇಕು. ಬೇರೆ ನಟರು ನಟಿಸಿದರೆ ಅದಕ್ಕೆ ತಮ್ಮ ವಿರೋಧವಿದೆ ಎಂದು ಹೇಳಿದರು.

ಚಾಲೆಂಜಿಂಗ್ ಸ್ಟಾರ್‌ಗೆ ನಾಯಕಿಯಾಗಲಿದ್ದಾರೆ ಸ್ಯಾಂಡಲ್‌ವುಡ್ ಕ್ವೀನ್

ಸುದೀಪ್‌ ಅವರು ವಾಲ್ಮೀಕಿ ಸಮುದಾಯದವರಾಗಿದ್ದಾರೆ. ಮದಕರಿ ಚಿತ್ರ ಮಾಡುವಂತೆ ಸುದೀಪ್‌ ಅವರಿಗೆ ಹೇಳುತ್ತಾ ಬಂದಿದ್ದೆ. ಸದ್ಯಕ್ಕೆ ಕೈಯಲ್ಲಿ ಸಾಕಷ್ಟುಚಿತ್ರಗಳಿವೆ. ನಂತರ ಮಾಡುತ್ತೇನೆ ಎಂದು ನನಗೆ ಸುದೀಪ್‌ ಅವರೇ 2010ರಲ್ಲಿಯೇ ಭರವಸೆ ನೀಡಿದ್ದರು. ಅದಕ್ಕಾಗಿಯೇ ಈ ಪಾತ್ರವನ್ನು ಸುದೀಪ ಅವರೇ ನಿರ್ವಹಣೆ ಮಾಡಬೇಕು ಎಂದು ಆಗ್ರಹಿಸಿದರು.

ಒಂದೊಮ್ಮೆ ಮದಕರಿ ಚಿತ್ರವನ್ನು ಸುದೀಪ ಬದಲು ಬೇರೆಯವರು ಮಾಡಲು ಮುಂದಾದರೆ ತಾವು ಕಾನೂನು ಹೋರಾಟ ಮಾಡಬೇಕಾಗುತ್ತದೆ. ಪ್ರಸಂಗ ಬಂದರೆ ಸಮಾಜದವರು ಸಹಕಾರ ನೀಡಿದರೆ ತಾವು ಸಾಂಘಿಕ ಹೋರಾಟಕ್ಕೂ ಸಿದ್ಧರಾಗುತ್ತೇನೆ ಎಂದು ಶ್ರೀಗಳು ಎಚ್ಚರಿಸಿದ್ದಾರೆ. 

Follow Us:
Download App:
  • android
  • ios