ಅಭಿಮಾನಿಗಳ ಹೃದಯ ಗೆದ್ದ ವರುಣ್ ಧವನ್ | ವರುಣ್ ಧವನ್ ಪ್ರೀತಿಯಿಂದ ಚೇತರಿಸಿಕೊಳ್ಳುತ್ತಿರುವ ಅಭಿಮಾನಿ | ವರುಣ್ ಧವನ್ ಪ್ರತಿಕ್ರಿಯೆಗೆ ನೆಟ್ಟಿಗರ ಪ್ರಶಂಸೆ 

ಸಿನಿಮಾ ನಟರು ತೆರೆ ಮೇಲೆ ಮಾತ್ರ ಹೀರೋ ಅಲ್ಲ ತೆರೆ ಹಿಂದೆಯೂ ಕೆಲವರ ಜೀವನದಲ್ಲಿ ಹೀರೋ ಆಗಿರುತ್ತಾರೆ. ಅವರಲ್ಲಿ ನಟ ವರುಣ್ ಧವನ್ ಕೂಡಾ ಒಬ್ಬರು. ಸೋಹಮ್ ಎನ್ನುವ ವರಣ್ ಧವನ್ ಫ್ಯಾನ್ ಪ್ಲೆಟೆಲೈಟ್ ಕಣಗಳು ಕಡಿಮೆಯಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

Scroll to load tweet…

ಸೋಹಮ್ ಫೋಟೋವನ್ನು ಶೇರ್ ಮಾಡಿದ ಪತ್ರಕರ್ತರೊಬ್ಬರು, ವರುಣ್ ನೀವು ಯಾವ ದೇವರಿಗೂ ಕಮ್ಮಿಯಿಲ್ಲ. ಈ ಚಿತ್ರದಲ್ಲಿ ಕಾಣುವ ಬಾಲಕ ಸೋಹಮ್ ಪ್ಲೆಟೆಲೈಟ್ ಕಣಗಳು ಕಡಿಮೆಯಾಗಿ ಆಸ್ಪತ್ರೆಗೆ ದಾಖಲಾಗಿದ್ದಾನೆ. ಅವನು ನಿಮ್ಮ ಫ್ಯಾನ್ ಎಂದು ಗಿತ್ತಾದಾಗ ಆಸ್ಪತ್ರೆಗೆ ಭೇಟಿ ಕೊಟ್ಟೆ. ನಾನು ನಿಮ್ಮೊಂದಿಗುರುವ ಫೋಟೋವನ್ನು ತೋರಿಸಿದಾಗ ಚೇತರಿಸಿಕೊಳ್ಳತೊಡಗಿದ’ ಎಂದು ಟ್ವೀಟ್ ಮಾಡಿದ್ದಾರೆ. 

ಬ್ಯುಸಿ ಶೆಡ್ಯೂಲ್ ನಲ್ಲಿದ್ದ ವರುಣ್ ಧವನ್, ಈ ಟ್ವೀಟ್ ಗೆ ರಿಪ್ಲೆ ಮಾಡಿದ್ದಾರೆ. 

Scroll to load tweet…

ವರುಣ್ ಧವನ್ ಈ ರಿಪ್ಲೆ ನೋಡಿ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನೀವು ತೆರೆ ಮೇಲೆ ಮಾತ್ರವಲ್ಲ. ನಿಜಜೀವನದಲ್ಲೂ ಹೀರೋನೇ ಎಂದು ಶ್ಲಾಘಿಸಿದ್ದಾರೆ.