Asianet Suvarna News Asianet Suvarna News

ವಾರಸ್ದಾರ ಪ್ರಕರಣ: ಕೋರ್ಟ್'ನಲ್ಲಿ ಬಗೆಹರಿಸಿಕೊಳ್ಳಲು ಎಸ್ಪಿ ಸೂಚನೆ

ತಾವು ಈಗಾಗಲೇ ನಿಗದಿತ ಮೊತ್ತವನ್ನು ನೀಡಿದ್ದೇವೆ. ಅಲ್ಲದೆ ಹಣ ನೀಡಿರುವುದಕ್ಕೆ ನಮ್ಮ ಬಳಿ ಎಲ್ಲ ದಾಖಲೆಗಳಿವೆ ಎಂದು  ಕಾರ್ಯಾಕಾರಿ ನಿರ್ಮಾಪಕ ಮಹೇಶ್ ಆರೋಪಿಸಿದರು.

Varasdara serial shooting controversy

ಚಿಕ್ಕಮಗಳೂರು(ಜು.17): ಚಿತ್ರನಟ ಕಿಚ್ಚ ಸುದೀಪ್ ನಿರ್ಮಾಣದ ವಾರಾಸ್ದಾರ ಧಾರವಾಹಿ ನ್ಯಾಯಾಲಯದ ಮೆಟ್ಟಿಲೇರಿದೆ.

ಮನೆ ಬಾಡಿಗೆ ಹಾಗೂ ಜಮೀನನಲ್ಲಾದ ನಷ್ಟವನ್ನು ತುಂಬಿಕೊಡುವಂತೆ ಮಾಲೀಕ ದೀಪಕ್ ಮಯೂರ್ ಚಿತ್ರತಂಡಕ್ಕೆ ನೋಟಿಸ್ ಕಳುಹಿಸಿದ ಹಿನ್ನಲೆಯಲ್ಲಿ ಎಸ್ಪಿ ಅಣ್ಣಮಲೈ ಅವರು ಚಿತ್ರದ ಕಾರ್ಯಾಕಾರಿ ಮಹೇಶ್ ಹಾಗೂ ಮನೆ ಮಾಲೀಕ ದೀಪಕ್ ಮಯೂರ್ ಅವರೊಂದಿಗೆ ತಮ್ಮ ಕಚೇರಿಯಲ್ಲಿಯೇ ಸಂಧಾನಸಭೆ ಏರ್ಪಡಿಸಿದ್ದರು. ಸುಮಾರು ಒಂದು ಗಂಟೆ ಕಾಲ ಮಾತುಕತೆ ನಡೆಸಿದರೂ ಎರಡೂ ಕಡೆಯವರು ರಾಜಿಗೆ ಒಪ್ಪಲಿಲ್ಲ.

ತಾವು ಈಗಾಗಲೇ ನಿಗದಿತ ಮೊತ್ತವನ್ನು ನೀಡಿದ್ದೇವೆ. ಅಲ್ಲದೆ ಹಣ ನೀಡಿರುವುದಕ್ಕೆ ನಮ್ಮ ಬಳಿ ಎಲ್ಲ ದಾಖಲೆಗಳಿವೆ ಎಂದು  ಕಾರ್ಯಾಕಾರಿ ನಿರ್ಮಾಪಕ ಮಹೇಶ್ ಆರೋಪಿಸಿದರು. ಆದರೆ ಚಿತ್ರತಂಡದ ವಾದವನ್ನು ಮನೆ ಮಾಲೀಕ ದೀಪಕ್ ಮಯೂರ್ ಒಪ್ಪಿಕೊಳ್ಳದೆ ಹಣ ನೀಡಲೇಬೇಕೆಂದು ಪಟ್ಟು ಹಿಡಿದರು. ಇಬ್ಬರು ಹಠ ಹಿಡಿದ ಕಾರಣ  ಪ್ರಕರಣವನ್ನು ಕೋರ್ಟ್'ನಲ್ಲಿ ಬಗೆಹರಿಸಿಕೊಳ್ಳವಂತೆ ಎಸ್ಪಿ ಸೂಚನೆ ನೀಡಿದರು.ಒಟ್ಟಾರೆ, ಕೂತು ಬಗೆಹರಿಸಿಕೊಳ್ಳಬೇಕಾದ ಸಣ್ಣ ಸಮಸ್ಯೆಯನ್ನ ದೊಡ್ಡದಾಗಿ ಮಾಡಿಕೊಂಡಿಕೊಂಡಿರುವುದು ವಿಪರ್ಯಾಸವೇ ಸರಿ.

--

 

Follow Us:
Download App:
  • android
  • ios