ಉಷಾ ಉತ್ತಪ್‌ ಜತೆ ಸ್ಟೇಜ್ ಹಂಚಿಕೊಂಡ ಚಂದನ್ ಶೆಟ್ಟಿ

Usha Uthap sets stage on fire with Chandhan Shetty
Highlights

ಭಾರತದ ರ‍್ಯಾಪ್ ಸಂಗೀತಕ್ಕೆ ಹೊಸ ರೂಪ ನೀಡಿದವರು ಉಷಾ ಉತ್ತಪ್. ಸ್ಟೇಜ್ ಮೇಲೆ ನಿಂತು, ಆ ಗಡಸು ಧ್ವನಿಯಲ್ಲಿ ಉಷಾ ಹಾಡಲು ನಿಂತರೆಂದರೆ ಅದೇನೋ ಆಕರ್ಷಣೆ. ಅವರ ವಾಯ್ಸ್‌ಗೆ ಮಾರು ಹೋಗದವರು ಯಾರು  ಹೇಳಿ? ಈ ಉಷಾ ಜತೆ ಈಗನ ಕನ್ನಡ ರ‍್ಯಾಪ್ ಗಾಯಕ ಚಂದನ್ ಶೆಟ್ಟಿ ಹಾಡಿದರೆ? 

ಹೌದು. ಇಂಥ ಅಪರೂಪದ ಸಂಗೀತ ಕಾರ್ಯಕ್ರಮವನ್ನು ಕಲರ್ಸ್ ಕನ್ನಡ ಪ್ರಸಾರ ಮಾಡಲಿದೆ. ಶನಿವಾರ ಮತ್ತು ಭಾನುವಾರ ರಾತ್ರಿ 7ರಿಂದ ಪ್ರಸಾರವಾಗುವ 'ಕನ್ನಡ ಕೋಗಿಲೆ' ಕಾರ್ಯಕ್ರಮ ಶನಿವಾರದಿಂದ ಆರಂಭವಾಗಲಿದೆ. ಕಾರ್ಯಕ್ರಮದ ಉದ್ಘಾಟನೆಯಲ್ಲಿ ಉಷಾ-ಚಂದನ್ ಜತೆಯಾಗಿ ಹಾಡಿ, ಕಾರ್ಯಕ್ರಮಕ್ಕೆ ಕಳೆ ತಂದು ಕೊಡಲಿದ್ದಾರೆ.

ಹಾಡೊಂದನ್ನು ಉಷಾಗೆ, ಚಂದನ್ ಹೇಳಿಕೊಟ್ಟಿದ್ದು 'ನನ್ನ 49 ವರ್ಷಗಳ ಸಂಗೀತ ಸೇವೆಯಲ್ಲಿ ಹಾಡು ಹೇಳಿಕೊಟ್ಟ ನೀನು ಬೆಸ್ಟ್ ಗುರು...' ಎಂದು ಹೇಳಿರುವುದು ವಿಶೇಷವಾಗಿದೆ.

'ಅಕ್ಕಾ' ಖ್ಯಾತಿಯ, ಬಿಗ್ ಬಾಸ್ ಸ್ಪರ್ಧಿ, ಚಿನಕುರಳಿ ಎಂದೇ ಖ್ಯಾತರಾದ ಅನುಪಮಾ ಗೌಡ ಈ  ಕಾರ್ಯಕ್ರಮಕ್ಕೆ ನಿರೂಪಣೆ ಮಾಡುತ್ತಿದ್ದು, ಖ್ಯಾತ ಗಾಯಕಿ ಅರ್ಚನಾ ಉಡುಪ ಸಹ ವೇದಿಕೆ ಹಂಚಿಕೊಳ್ಳಲ್ಲಿದ್ದಾರೆ. 

ಈ ಗಾಯನ ಸ್ಪರ್ಧೆಯಲ್ಲಿ ಅರ್ಚನಾ ಉಡುಪ, ಚಂದನ್ ಶೆಟ್ಟಿ ಹಾಗೂ ಸಾಧು ಕೋಕಿಲ ತೀರ್ಪುಗಾರರಾಗಿ ಕಾರ್ಯನಿರ್ವಹಿಸಲಿದ್ದಾರೆ. ಕರುನಾಡ ಮೂಲೆ ಮೂಲೆಯಲ್ಲಿರು ಪ್ರತಿಭಾನ್ವಿತ ಗಾಯಕರನ್ನು ತೆರೆ ಮೇಲೆ ತರಲು, ಖುದ್ದು ಚಂದನ್ ಶೆಟ್ಟಿ ಯತ್ನಿಸುತ್ತಿದ್ದು, ಕನ್ನಡ ಕೋಗಿಲೆ ಅವರ ಕನಸಿನ ಕೂಸು. 

 

 

 

 

loader