ಈ ಚಿತ್ರದಲ್ಲಿ ಉಪ್ಪಿ ಸಖತ್ ಸ್ಟೈಲಿಶ್ ಲುಕ್ ಹಾಗೂ ನೆಗೆಟಿವ್ ಶೇಡ್ ನಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.
ಬೆಂಗಳೂರು (ಮಾ.14): ರಿಯಲ್ ಸ್ಟಾರ್ ಉಪೇಂದ್ರ ಹಾಗು ರಚಿತಾ ರಾಮ್ ಅಭಿನಯದ ಉಪ್ಪಿ ರುಚಿ ಚಿತ್ರದ ಚಿತ್ರೀಕರಣ ಭರದಿಂದ ನಡೆಯುತ್ತಿದೆ.
ಸದ್ಯಕ್ಕೆ ಮೈಸೂರಿನಲ್ಲಿ ಉಪೇಂದ್ರ ಮತ್ತು ರಚಿತಾ ರಾಮ್ ನಡುವಿನ ಸನ್ನಿವೇಶಗಳನ್ನ ನಿರ್ದೇಶಕ ಕೆ ಮಾದೇಶ್ ಚಿತ್ರೀಸಿಕೊಳ್ಳುತ್ತಿದ್ದಾರೆ.
ಈ ಚಿತ್ರದಲ್ಲಿ ಉಪ್ಪಿ ಸಖತ್ ಸ್ಟೈಲಿಶ್ ಲುಕ್ ಹಾಗೂ ನೆಗೆಟಿವ್ ಶೇಡ್ ನಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.
ನೋಟು ನಿಷೇಧದ ಪರಿಣಾಮವನ್ನು ಈ ಚಿತ್ರದಲ್ಲಿ ಕಾಣಬಹುದು. ಇಲ್ಲಿ ಉಪೇಂದ್ರ ಸಾಮಾನ್ಯ ಪ್ರಜೆಯಾಗಿ ಹಾಗು ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಉಪೇಂದ್ರ ಚಿತ್ರದಲ್ಲಿ ಹೀರೋ ಆದರೂ ಪ್ರೇಕ್ಷಕರಿಗೆ ಮಾತ್ರ ಆತ ವಿಲನ್'ನಂತೆ ಕಾಣುತ್ತಾರಂತೆ.
