ಹೊಸ ಆಲೋಚನೆಯೊಂದಿಗೆ ಕಳೆದ ಆ.14ರಂದು ಸ್ಥಾಪನೆ ಮಾಡಿರುವ ಪ್ರಜಾಕೀಯ ಪಕ್ಷಕ್ಕೆ ಎರಡು ತಿಂಗಳ ಅವಧಿ ಯಲ್ಲಿ ಹಲವು ರೂಪರೇಷೆಗಳನ್ನು ಸಿದ್ಧಪಡಿಸ ಲಾಗಿದೆ. ಈ ಅವಧಿಯಲ್ಲಿ ಉಪೇಂದ್ರ ಅವರು ವಿವಿಧ ಕ್ಷೇತ್ರದ ಗಣ್ಯರನ್ನು ಸಂಪರ್ಕಿಸಿ ಸಲಹೆಗಳನ್ನು ಪಡೆದುಕೊಂಡಿದ್ದಾರೆ.

ಬೆಂಗಳೂರು(ಅ.29): ಎರಡು ತಿಂಗಳ ಹಿಂದೆ ಹೊಸ ಕಲ್ಪನೆಯ ರಾಜಕೀಯ ಸಿದ್ಧಾಂತ ಪ್ರತಿಪಾದಿಸಿ ಸಂಚಲನ ಮೂಡಿಸಿದ್ದ ರಿಯಲ್ ಸ್ಟಾರ್ ಉಪೇಂದ್ರ ಮಂಗಳವಾರ ಅಧಿಕೃತವಾಗಿ ಪಕ್ಷದ ಹೆಸರು ಹಾಗೂ ಅದರ ರೂಪುರೇಷೆಯ ಘೋಷಣೆ ಮಾಡಲಿದ್ದಾರೆ.

ಎರಡು ತಿಂಗಳ ಹಿಂದೆ ಹೊಸ ಕಲ್ಪನೆಯ ರಾಜಕೀಯ ಸಿದ್ಧಾಂತ ಪ್ರತಿಪಾದಿಸಿ ಸಂಚಲನ ಮೂಡಿ ಸಿದ್ದ ರಿಯಲ್ ಸ್ಟಾರ್ ಉಪೇಂದ್ರ ಅವರು ಮಂಗಳವಾರ ಅಧಿಕೃತವಾಗಿ ಪಕ್ಷದ ಹೆಸರು ಘೋಷಣೆ ಮಾಡಲಿದ್ದಾರೆ. ಹೊಸ ಆಲೋಚನೆಯೊಂದಿಗೆ ಕಳೆದ ಆ.14ರಂದು ಸ್ಥಾಪನೆ ಮಾಡಿರುವ ಪ್ರಜಾಕೀಯ ಪಕ್ಷಕ್ಕೆ ಎರಡು ತಿಂಗಳ ಅವಧಿ ಯಲ್ಲಿ ಹಲವು ರೂಪರೇಷೆಗಳನ್ನು ಸಿದ್ಧಪಡಿಸ ಲಾಗಿದೆ. ಈ ಅವಧಿಯಲ್ಲಿ ಉಪೇಂದ್ರ ಅವರು ವಿವಿಧ ಕ್ಷೇತ್ರದ ಗಣ್ಯರನ್ನು ಸಂಪರ್ಕಿಸಿ ಸಲಹೆಗಳನ್ನು ಪಡೆದುಕೊಂಡಿದ್ದಾರೆ.

ಎಲ್ಲರ ಸಲಹೆಗಳನ್ನು ಸ್ವೀಕರಿಸಿ ತಮ್ಮದೇ ಆದ ಆಲೋಚನೆಯಲ್ಲಿ ತಂಡವೊಂದನ್ನು ಕಟ್ಟಲು ಸಿದ್ಧತೆ ನಡೆಸಿದ್ದಾರೆ. ಎರಡು ತಿಂಗಳು ಅವಿರತವಾಗಿ ದುಡಿದ ಫಲವಾಗಿ ಪಕ್ಷವು ಸಾಕಷ್ಟು ಬೆಳವಣಿಗೆ ಕಂಡಿದೆ. ಸ್ಪಷ್ಟ ರೂಪರೇಷೆ ಸಿದ್ಧ ವಾಗಿವೆ ಎನ್ನಲಾಗಿದ್ದು, ಅವುಗಳನ್ನು ಜನತೆಯೊಂದಿಗೆ ಹಂಚಿಕೊಳ್ಳಲು ಉಪೇಂದ್ರ ಮಂಗಳವಾರ (ಅ.31) ಶಿವಾನಂದ ಸರ್ಕಲ್ ಬಳಿ ಇರುವ ಗಾಂಧಿಭವನದಲ್ಲಿ ಪತ್ರಿಕಾಗೋಷ್ಠಿ ಕರೆದಿದ್ದಾರೆ. ಪಕ್ಷದ ಹೆಸರು, ಮುಂಬರುವ ಚುನಾವಣೆ ಯಲ್ಲಿ ಪಕ್ಷದ ಪಾತ್ರ, ಪಕ್ಷದ ಅಧಿಕೃತ ಘೋಷಣೆ, ಕಾರ್ಯಕಾರಿ ಸಮಿತಿ, ಪ್ರಣಾಳಿಕೆ ಕುರಿತು ಮಾಹಿತಿ ಹಂಚಿಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ. ಜನ ಸೇವಕರು ಅಥವಾ ನಾಯಕರಿಗಿಂತ ಹೆಚ್ಚಾಗಿ ನಮಗೆ ಕಾರ್ಮಿಕರು ಬೇಕು ಎಂದು ಖಾಕಿ ಬಟ್ಟೆಯನ್ನು ತಮ್ಮ ಪಕ್ಷದ ಗುರುತಾಗಿಸಿಕೊಂಡಿರುವ ಉಪೇಂದ್ರ ಅವರು ಜನರ ತೆರಿಗೆ ಹಣ ಪಾರದರ್ಶಕವಾಗಿ ಬಳಕೆಯಾಗಬೇಕು ಎಂದು ಉದ್ದೇಶದಿಂದ ಪಕ್ಷ ಕಟ್ಟಿದ್ದಾಗಿ ಹೇಳಿಕೊಂಡಿದ್ದಾರೆ.