. ಈ ಸಂಬಂಧ ಸರ್ಕಾರದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದರು.ಈ ರಿಟ್‌ ಅರ್ಜಿ ವಿಲೇವಾರಿ ಮಾಡಿದ್ದ ನ್ಯಾಯಮೂರ್ತಿ ಆನಂದ ಬೈರಾರೆಡ್ಡಿ ಅವರಿದ್ದ ಏಕಸದಸ್ಯ ಪೀಠವು, ‘ಭೂ ಕಂದಾಯ ಕಾಯ್ದೆಗೆ 2015ರಲ್ಲಿ ತರಲಾದ ತಿದ್ದುಪಡಿಯು ಪೂರ್ವಾನ್ವಯಕ್ಕೆ ಒಳಪಡುತ್ತದೆ

ಬೆಂಗಳೂರು(ಜು.31): ನಟ ಉಪೇಂದ್ರಗೆ ಬಿಗ್ ರಿಲೀಫ್ ಸಿಕ್ಕಿದೆ. ರಾಜ್ಯ ಸರ್ಕಾರ ಸಲ್ಲಿಸಿದ ಮೇಲ್ಮನವಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ನಟ ಉಪೇಂದ್ರ ಕೃಷಿ ಭೂಮಿಯನ್ನು 2005ರಲ್ಲಿ ತಾವರೆಕರೆ ಹೋಬಳಿಯ ಸರ್ವೇ ನಂ. 13/1 ಹಾಗೂ 14ರಲ್ಲಿ ಖರೀದಿಸಿದ್ದರು. ಆದರೆ ಸ್ಥಳೀಯ ಸಹಾಯಕ ಆಯುಕ್ತರು, ಉಪೇಂದ್ರ ಅವರಿಗೆ ಕೃಷಿಯೇತರ ಮೂಲದ ಆದಾಯ ಮಿತಿ ವಾರ್ಷಿಕ 2 ಲಕ್ಷಕ್ಕಿಂತಲೂ ಜಾಸ್ತಿ ಇರುವುದರಿಂದ ಈ ಖರೀದಿ ಕ್ರಮ ಕಾನೂನು ಬಾಹಿರ ಎಂದು ಸ್ಥಿರಾಸ್ತಿ ಮುಟ್ಟುಗೋಲಿಗೆ ಆದೇಶಿಸಿದ್ದರು. ಇದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದ ಉಪೇಂದ್ರ ಕರ್ನಾಟಕ ಭೂ ಕಂದಾಯ ಕಾಯ್ದೆಯ 79 ಎ ಮತ್ತು 79 ಬಿ ಅಸಾಂವಿಧಾನಿಕವಾಗಿವೆ ಎಂದು ಆಕ್ಷೇಪಿಸಿದ್ದರು. ಈ ಸಂಬಂಧ ಸರ್ಕಾರದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದರು.ಈ ರಿಟ್‌ ಅರ್ಜಿ ವಿಲೇವಾರಿ ಮಾಡಿದ್ದ ನ್ಯಾಯಮೂರ್ತಿ ಆನಂದ ಬೈರಾರೆಡ್ಡಿ ಅವರಿದ್ದ ಏಕಸದಸ್ಯ ಪೀಠವು, ‘ಭೂ ಕಂದಾಯ ಕಾಯ್ದೆಗೆ 2015ರಲ್ಲಿ ತರಲಾದ ತಿದ್ದುಪಡಿಯು ಪೂರ್ವಾನ್ವಯಕ್ಕೆ ಒಳಪಡುತ್ತದೆ. ಆದ್ದರಿಂದ ಉಪೇಂದ್ರ ಖರೀದಿಸಿರುವ ಕೃಷಿ ಜಮೀನು ಕಾನೂನು ಬಾಹಿರ ಅಲ್ಲ ಎಂದು ತೀರ್ಪು ನೀಡಿತ್ತು. ಈ ತೀರ್ಪು ಪ್ರಶ್ನಿಸಿ ಸರ್ಕಾರ ಮೇಲ್ಮನವಿ ಸಲ್ಲಿಸಿ ಹಿನ್ನಡೆ ಅನುಭವಿಸಿದೆ.