Asianet Suvarna News Asianet Suvarna News

9/11: ಜಗತ್ತೇ ಕಣ್ಣೀರಿಟ್ಟ ಆ ದಿನ..!

9/11 ಭಯೋತ್ಪಾದಕ ದಾಳಿಗೆ 17 ವರ್ಷ! 3 ಸಾವಿರ ಜನರನ್ನು ಬಲಿ ಪಡೆದಿದ್ದ ವೈಮಾನಿಕ ದಾಳಿ! ದಾಳಿಯ 17ನೇ ವರ್ಷಾಚರಣೆ ವೇಳೆ ಕಂಬನಿ ಮಿಡಿದ ಅಮೆರಿಕ! ಅಮೆರಿಕ ಎಂದೂ ವೀರರನ್ನು ಮರೆಯಲ್ಲ ಎಂದ ಅಧ್ಯಕ್ಷ ಟ್ರಂಪ್! ದಾಳಿ ಬಳಿಕದ ಅಮೆರಿಕ ಹೇಗಿದೆ? ಎಲ್ಲವೂ ಸರಿಯಾಗಿದೆಯಾ?

 

United States marks 17th anniversary of 9/11 attacks
Author
Bengaluru, First Published Sep 12, 2018, 3:30 PM IST

ವಾಷಿಂಗ್ಟನ್(ಸೆ.12): ಅಮೆರಿಕದ ಪಾಲಿಗೆ ಗುಣವಾಗದ ಗಾಯದಂತಿರುವ 2001 ಸೆಪ್ಟೆಂಬರ್​ 09ರ, ವಿಶ್ವ ವಾಣಿಜ್ಯ ಕೇಂದ್ರ(ಡಬ್ಲ್ಯೂಟಿಸಿ)ದ ಮೇಲೆ ಅಲ್​ಖೈದಾ ಉಗ್ರರು ನಡೆಸಿರೋ ದಾಳಿಗೆ 17 ವರ್ಷಗಳು ಸಂದಿವೆ. ಅಂದಿನ ಭಯಾನಕ, ಭಿಭತ್ಸ ಭಯೋತ್ಪಾದಕ ಘಟನೆಯನ್ನು ಅಮೆರಿಕ ಏನೂ ಇಡೀ ಜಗತ್ತೇ ಇಂದಿಗೂ ಮರೆತಿಲ್ಲ.

United States marks 17th anniversary of 9/11 attacks

ಅದರಂತೆ ಅಮೆರಿಕದಲ್ಲಿ ಈ ಭಯಾನಕ ಭಯೋತ್ಪಾದಕ ದಾಳಿಯ 17ನೇ ವರ್ಷಾಚರಣೆಯನ್ನು ಆಚರಿಸಲಾಯಿತು. ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅಧ್ಯಕ್ಷತೆಯಲ್ಲಿ ಶ್ರದ್ಧಾಂಜಲಿ ಸಭೆ ನಡೆಸಲಾಯಿತು. ಮತ್ತು ದಾಳಿಯಲ್ಲಿ ಬಲಿಯಾದ ವರ ಕುಟುಂಬಸ್ಥರು ಮೃತರ ಆತ್ಮಕ್ಕೆ ಶಾಂತಿ ಕೋರಿ ಒಂದು ನಿಮಿಷದ ಮೌನಾಚರಣೆ ಆಚರಿಸಿದರು.

ಈ ವೇಳೆ ಮಾತನಾಡಿದ ಅಧ್ಯಕ್ಷ ಟ್ರಂಪ್, ಅಮೆರಿಕದ ಮೇಲಿನ ಭಯೋತ್ಪಾದಕರ ದಾಳಿ ಹೇಡಿತನದ ಪರಮಾವಧಿ ಎಂದು ಜರೆದರು. ಅಲ್ಲದೇ ಈ ದಾಳಿಯಲ್ಲಿ ಮೃತಪಟ್ಟ ವೀರರನ್ನು ಅಮೆರಿಕ ಎಂದಿಗೂ ಮರೆಯುವದಿಲ್ಲ ಎಂದು ಟ್ರಂಪ್ ಹೇಳಿದರು. ಈ ಜಗತ್ತಿನಿಂದ ಭಯೋತ್ಪಾದನೆಯನ್ನು ತೊಲಗಿಸುವವರೆಗೂ ಅಮೆರಿಕಕ್ಕೆ ವಿಶ್ರಾಂತಿ ಇಲ್ಲ ಎಂದೂ ಟ್ರಂಪ್ ಈ ವೇಳೆ ಗುಡುಗಿದರು.

United States marks 17th anniversary of 9/11 attacks

ಅಂದು ಸೆ.11:

ನ್ಯೂಯಾರ್ಕ್​ನ ವಿಶ್ವ ವಾಣಿಜ್ಯ ಕೇಂದ್ರದ ಅವಳಿ ಕಟ್ಟಡಗಳನ್ನು ಒಸಾಮ ಬಿನ್​ ಲಾಡೆನ್​ ನೇತೃತ್ವದ ಆಲ್​ಖೈದಾ ಉಗ್ರರು ವೈಮಾನಿಕ ದಾಳಿ ಮೂಲಕ ಹೊಡೆದುರುಳಿಸಿದ್ದರು. ಏಕಾಏಕಿ ವಾಣಿಜ್ಯ ಕಟ್ಟಡಗಳತ್ತ ಹಾರಿ ಬಂದ ಮೂರು ಪ್ರಯಾಣಿಕ ವಿಮಾನಗಳು ನೋಡ ನೋಡುತ್ತಿದ್ದಂತೆ ಕಟ್ಟಡಕ್ಕೆ ಡಿಕ್ಕಿ ಹೊಡೆದಿದ್ದವು.

ಪರಿಣಾಮ ಸಾವಿರಾರು ಅಮಾಯಕರು ಈ ದಾಳಿಯಲ್ಲಿ ಬಲಿಯಾದರೆ, ಹಲವಾರು ಮಂದಿ ಗಾಯಗೊಂಡರು. ಈ ದಾಳಿಯಿಂದ ಗಾಯಗೊಂಡ ಹಲವು ಕುಟುಂಬಗಳು ಈಗಲೂ ಹಲವಾರು ದೈಹಿಕ ಖಾಯಿಲೆಗಳಿಂದ ಬಳಲುತ್ತಿವೆ.

United States marks 17th anniversary of 9/11 attacks

ಉಗ್ರ ದಾಳಿಯಿಂದ ಕೆಲ ನಿಮಿಷಗಳಲ್ಲೇ ನೆಲಸಮಗೊಂಡ ವಾಣಿಜ್ಯ ಕೇಂದ್ರದ ಎರಡು ಕಟ್ಟಡಗಳ ಸುಮಾರು 750 ಮಿಲಿಯನ್​ ಡಾಲರ್​ ವೆಚ್ಚದ, 1.8 ಮಿಲಿಯನ್​ ಟನ್​ನಷ್ಟು ಅವಶೇಷಗಳನ್ನು ಸ್ವಚ್ಛಗೊಳಿಸಲು ರಕ್ಷಣಾ ಸಿಬ್ಬಂದಿಗಳಿಗೆ ಸುಮಾರು 3.1 ಮಿಲಿಯನ್​ ಗಂಟೆಗಳು ಬೇಕಾದವು. 

United States marks 17th anniversary of 9/11 attacks

ಒಸಾಮ ಬಿನ್​ ಲ್ಯಾಡ್​ನ್​ನ ಉಗ್ರ ಗ್ಯಾಂಗ್​ ಈ ಭಯೋತ್ಪಾದನಾ ದಾಳಿ ನಡೆಸಲು ಸುಮಾರು 5,00,000 ಡಾಲರ್​ ವ್ಯಯಿಸಿದರೆ, ದಾಳಿ ನಡೆದ ಬಳಿಕ ತಿಂಗಳೊಳಗೆ ಅಮೆರಿಕ ವ್ಯಯಿಸಿದ ಹಣ ಬರೋಬ್ಬರಿ 123 ಬಿಲಿಯನ್​ ಡಾಲರ್​.

ಇನ್ನು ಕಟ್ಟಡಗಳು ನೆಲಸಮಗೊಂಡ ಸ್ಥಳವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಲು ಯುಎಸ್​ಎಗೆ ಸುಮಾರು ಒಂದೂವರೆ ವರ್ಷಗಳೇ ಬೇಕಾದವು. ಇನ್ನು ವೈಮಾನಿಕ ದಾಳಿಯಿಂದ ಕಟ್ಟಡದಲ್ಲಿ ಆವರಿಸಿದ ಬೆಂಕಿ ಹಾಗೂ ಹೊಗೆ ಹೋಗಲಾಡಿಸಲು ಅಗ್ನಿಶಾಮಕ ಅಧಿಕಾರಿಗಳು ಸುಮಾರು 99 ದಿನಗಳನ್ನು ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

United States marks 17th anniversary of 9/11 attacks

ಜಗತ್ತಿನ ದೊಡ್ಡ ಡೆಡ್ಲಿ ಅಟ್ಯಾಕ್:

ಈ ಭಯೋತ್ಪಾದನಾ ದಾಳಿಯನ್ನು ಜಗತ್ತಿನ ಡೆಡ್ಲಿಯೆಸ್ಟ್​ ಅಟ್ಯಾಕ್​ ಎಂದೇ ಕರೆಯಲಾಗಿದೆ. ಸುಮಾರು 3000ಕ್ಕೂ ಅಧಿಕ ಜನರು ಈ ದಾಳಿಯಲ್ಲಿ ತಮ್ಮ ಪ್ರಾಣ ಕಳೆದುಕೊಂಡರು. ಸುಮಾರು 10000ಕ್ಕೂ ಅಧಿಕ ಮಂದಿ ಗಂಭೀರ ಗಾಯಗೊಂಡರು. 11 ಗರ್ಭಿಣಿಯರು ಆಗಿನ್ನೂ ಜಗತ್ತನ್ನೇ ನೋಡದ ಮಕ್ಕಳೊಂದಿಗೆ ಬಲಿಯಾಗಿದ್ದರು. 

United States marks 17th anniversary of 9/11 attacks

ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶವೇನೆಂದರೆ ದಾಳಿ ನಡೆದ ದಿನದಂದು ಸಾವನ್ನಪ್ಪಿದವರ ಸಂಖ್ಯೆಗಿಂತ, ದಾಳಿ ನಡೆದ ನಂತರದ ರಕ್ಷಾಣಾ ಕಾರ್ಯಾಚರಣೆಯ ವೇಳೆ ಸತ್ತವರ ಸಂಖ್ಯೆಯೇ ಹೆಚ್ಚು. ಸಾವಿರಾರು ಪೊಲೀಸರು, ಅಗ್ನಿ ಶಾಮಕ ದಳದ ಸಿಬ್ಬಂದಿಗಳು, ರಕ್ಷಾಣಾ ತಂಡದವರು ಉಸಿರಾಟದ ಸಮಸ್ಯೆ, ಕ್ಯಾನ್ಸರ್, ಮಾನಸಿಕ ಆರೋಗ್ಯ ಮತ್ತು ಜಠರದ ತೊಂದರೆಯಿಂದ ಸತ್ತಿದ್ದಾರೆ.

United States marks 17th anniversary of 9/11 attacks

ಇನ್ನು ಕೆಲ ವರದಿಗಳ ಪ್ರಕಾರ ಸಾವನ್ನಪ್ಪಿದವರಲ್ಲಿ 1113 ಜನರ ಗುರುತು ಇನ್ನೂ ಪತ್ತೆಯಾಗಿಲ್ಲ. ಇನ್ನೊಂದು ಆಘಾತಕಾರಿ ವಿಷಯವೇನೆಂದರೆ 3050ಕ್ಕೂ ಹೆಚ್ಚು ಮಕ್ಕಳು ತಮ್ಮ ತಂದೆ -ತಾಯಿಯರನ್ನು ಕಳೆದುಕೊಂಡು ಅನಾಥರಾದರು.

Follow Us:
Download App:
  • android
  • ios