Lok Sabha Elections 2024: ಇಂದು ತಪ್ಪದೇ ಮತ ಹಾಕಿ: ನಿರ್ಭಿತಿ, ವಿವೇಚನೆಯಿಂದ ವೋಟು ಹಾಕುವುದು ಹೇಗೆ?

ಲೋಕಸಭೆ ಚುನಾವಣೆಯಲ್ಲಿ ರಾಜ್ಯದ ಮೊದಲ ಹಂತದ ಮತ ಹಬ್ಬಕ್ಕೆ ಕ್ಷಣಗಣನೆ ಶುರುವಾಗಿದ್ದು, ಶುಕ್ರವಾರ ಮುಕ್ತ ಮತ್ತು ನ್ಯಾಯಸಮ್ಮತ ಮತದಾನ ನಡೆಸಲು ಚುನಾವಣಾ ಆಯೋಗವು ಸಜ್ಜಾಗಿದೆ. ಒಟ್ಟು 14 ಲೋಕಸಭಾ ಕ್ಷೇತ್ರಗಳ 247 ಅಭ್ಯ ರ್ಥಿಗಳ ಭವಿಷ್ಯ ಶುಕ್ರವಾರ ತೀರ್ಮಾನವಾಗಲಿದೆ. 

Countdown to the karnataka first phase of voting in Lok Sabha Elections 2024 gvd

ಬೆಂಗಳೂರು (ಏ.26): ಲೋಕಸಭೆ ಚುನಾವಣೆಯಲ್ಲಿ ರಾಜ್ಯದ ಮೊದಲ ಹಂತದ ಮತ ಹಬ್ಬಕ್ಕೆ ಕ್ಷಣಗಣನೆ ಶುರುವಾಗಿದ್ದು, ಶುಕ್ರವಾರ ಮುಕ್ತ ಮತ್ತು ನ್ಯಾಯಸಮ್ಮತ ಮತದಾನ ನಡೆಸಲು ಚುನಾವಣಾ ಆಯೋಗವು ಸಜ್ಜಾಗಿದೆ. ಒಟ್ಟು 14 ಲೋಕಸಭಾ ಕ್ಷೇತ್ರಗಳ 247 ಅಭ್ಯ ರ್ಥಿಗಳ ಭವಿಷ್ಯ ಶುಕ್ರವಾರ ತೀರ್ಮಾನವಾಗಲಿದೆ. ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆ ವರೆಗೆ 30,602 ಮತಗಟ್ಟೆಗಳಲ್ಲಿ ನಡೆಯುವ ಮತದಾನದ ವೇಳೆ ಅಭ್ಯರ್ಥಿಗಳ ಭವಿಷ್ಯವನ್ನು ಮತದಾರರು ಬರೆಯಲಿದ್ದಾರೆ. ಒಟ್ಟು 226 ಪುರುಷ ಹಾಗೂ 21 ಮಹಿಳಾ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಉಡುಪಿ-ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ, ಮಂಡ್ಯ, ಚಿತ್ರದುರ್ಗ, ತುಮಕೂರು, ಮೈಸೂರು, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ, ಚಿಕ್ಕಬಳ್ಳಾಪುರ ಮತ್ತು ಕೋಲಾರ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. 

ಮರೆಯದಿರಿ...
• ಮತ ಕೇಂದ್ರಗಳಿಗೆ ಮತದಾರರ ಗುರುತಿನ ಚೀಟಿಯನ್ನು ಒಯ್ಯರಿ 
• ಗುರುತಿನ ಚೀಟಿ ಇಲ್ಲದಿದ್ದರೆ ಪಠ್ಯಾಯ ದಾಖಲೆಗಳನ್ನು ತೋರಿಸಬಹುದು
• ಆಧಾರ್, ಬ್ಯಾಂಕ್ ಪಾಸ್‌ ಬುಕ್, ಡಿಎಲ್‌ನಂತಹ ದಾಖಲೆಗಳು ಅರ್ಹ

ಕರ್ನಾಟಕ Election 2024 Live: ದಕ್ಷಿಣದ 14 ಜಿಲ್ಲೆಗಳಿಗೆ ಇಂದು ಮತದಾನ

ಮತ ಹಾಕುವುದು ಹೇಗೆ? 
• ಮತದಾರರ ಗುರುತಿನ ಚೀಟಿ ಅಥವಾ ವರಾಯ ಐಡಿಯೊಂದಿಗೆ ಮತಗಟ್ಟೆಗೆ ತೆರಳಿ ವೋಟರ್ ಸ್ಲಿಪ್ ಒಯ್ಯರಿ, ಸಿಕ್ಕಿಲ್ಲವಾದರೆ ಮತಗಟ್ಟೆ ಬಳಿ ಏಜೆಂಟರ ಬಳಿ ಪಡೆಯಿರಿ 
• ಮತಗಟ್ಟೆಯ ಒಳಗೆ ಮೊಬೈಲ್ ಫೋನ್, ಕ್ಯಾಮರಾಗಳನ್ನು ಒಯ್ಯಬೇಡಿ 
• ಮತಗಟ್ಟೆ ಅಧಿಕಾರಿ ನಿಮ್ಮ ಹೆಸರು ಪಟ್ಟಿ ಯಲ್ಲಿ ಇದೆಯೇ ಎಂದು ಪರಿಶೀಲಿಸುತ್ತಾರೆ. 
• ಬಳಿಕ 2ನೇ ಅಧಿಕಾರಿ ಬೆರಳಿಗೆ ಇಂಕ್‌ ಹಾಕಿ, ಸಹಿ ಹಾಕಿಸಿಕೊಂಡು ಚೀಟಿ ನೀಡುತ್ತಾರೆ. 
• 3ನೇ ಅಧಿಕಾರಿ ಗುರುತು ಖಚಿತಪಡಿಸಿಕೊ ಳ್ಳುತ್ತಾರೆ, ಇವಿಎಂ ಬಳಿಗೆ ಕಳುಹಿಸುತ್ತಾರೆ. 
• ನಿಮಗೆ ಸರಿ ಎನಿಸುವ ಅಭ್ಯರ್ಥಿ ಎದುರಿನ ಬಟನ್ ಒತ್ತಿ. ಶಬ್ಬ ಬರುತ್ತದೆ. ಅಭ್ಯರ್ಥಿಯ ಚಿಹ್ನೆ ವಿವಿಪ್ಯಾಟ್‌ನಲ್ಲಿ ಮೂಡುತ್ತದೆ. ಅಲ್ಲಿಗೆ ಮತದಾನ ಮುಗಿಯಿತು.

ಜೆಡಿಎಸ್‌ನ ಎಚ್.ಡಿ.ಕುಮಾರಸ್ವಾಮಿ, ಬಿಜೆಪಿಯ ಶೋಭಾಕ ರಂದ್ಲಾಜೆ, ಡಾ.ಸಿ.ಎನ್.ಮಂಜುನಾಥ್,ವಿ. ಸೋಮಣ್ಣ, ಗೋವಿಂದ ಕಾರಜೋಳ, ಕಾಂಗ್ರೆಸ್‌ನ ಡಿ. ಕೆ.ಸುರೇಶ್, ಜಯಪ್ರಕಾಶ್ ಶೆಟ್ಟಿ ಸೇರಿದಂತೆ ಹಲವು ಘಟಾನುಘಟಿಗಳು ಕಣದಲ್ಲಿದ್ದಾರೆ. 14 ಲೋಕಸಭಾಕ್ಷೇತ್ರಗಳವ್ಯಾಪ್ತಿಯಮತಗಟ್ಟೆಗಳಿಗೂ ಚುನಾವಣಾ ಹಾಗೂ ಭದ್ರತಾ ಸಿಬ್ಬಂದಿ ಗುರುವಾರ ತೆರಳಿ, ಮತದಾನಕ್ಕೆ ಅಗತ್ಯ ಸಕಲ ಸಿದ್ಧತೆ ಕೈಗೊಂಡಿದ್ದಾರೆ. 33 ಚುನಾವಣಾ ಕಾರ್ಯದಲ್ಲಿ 1.40 ಲಕ್ಷ ಸಿಬ್ಬಂದಿ ತೊಡಗಿದ್ದು, ಇದರ ಜತೆಗೆ ಐದು ಸಾವಿರ ಸೂಕ್ತ ವೀಕ್ಷಕರು, 50 ಸಾವಿರ ಪೊಲೀಸ್ ಸಿಬ್ಬಂದಿ, 65 ಸಾವಿರ ಕೇಂದ್ರ ಮತ್ತು ರಾಜ್ಯ ಸಶಸ್ತ್ರ ಮೀಸಲು ಪಡೆಯನ್ನು ನಿಯೋಜಿಸಲಾಗಿದೆ. 

ಇವಿಎಂ ಮತ್ತು ವಿವಿಪ್ಯಾಟ್ ಸೇರಿದಂತೆ ಅಗತ್ಯ ಸಾಮಗ್ರಿಗಳೊಂದಿಗೆ ಚುನಾವಣಾ ಸಿಬ್ಬಂದಿ ತಮ್ಮ ತಮ್ಮ ಮತಗಟ್ಟೆಗಳಿಗೆ ತೆರಳಿದರು. ಚುನಾವಣಾಧಿಕಾರಿಗಳ ಸಮ್ಮುಖದಲ್ಲಿ ಮಸ್ಟರಿಂಗ್ ಕೇಂದ್ರದಲ್ಲಿ ಮತಯಂತ್ರಗಳನ್ನು ವಿಂಗಡಿಸಿ ವಿತರಣೆ ಮಾಡಲಾಯಿತು. 14 ಕ್ಷೇತ್ರದಲ್ಲಿ 2.88 ಕೋಟಿ ಮತದಾರರು ಮತ ಚಲಾಯಿಸಲು ಅರ್ಹರಿದ್ದಾರೆ. ಇದರಲ್ಲಿ 1.44 ಕೋಟಿ ಪುರುಷರು, 1.43 ಕೋಟಿ ಮಹಿಳೆಯರು ಮತ್ತು 3,067 ಇತರೆ ಮತದಾರರಿದ್ದಾರೆ. ಒಟ್ಟು 30,602 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಈ ಪೈಕಿ 30,577 ಪ್ರಮುಖ ಮತಗಟ್ಟೆಗಳಾಗಿದ್ದು, 25 ಮತಗಟ್ಟೆಗಳಾಗಿವೆ. ಉಪ 30,602 ಮತಗಟ್ಟೆಗಳ ಪೈಕಿ19,701 ಮತಗಟ್ಟೆಗಳಲ್ಲಿ ವೆಬ್‌ಕಾಸ್ಟಿಂಗ್‌ ವ್ಯವಸ್ಥೆ ಮಾಡಲಾಗಿದೆ. 

ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಎಲ್ಲಾ ಮತಗಟ್ಟೆಗಳಲ್ಲಿಯೂ ವೆಬ್ ಕಾಸ್ಟಿಂಗ್ ನಡೆಯಲಿದೆ. 1370 ಮತಗಟ್ಟೆಗಳಲ್ಲಿ ಸಿಸಿ ಟಿವಿ ಅಳವಡಿಕೆ ಮಾಡಲಾಗಿದೆ. ಇನ್ನುಳಿದ ಮತಗಟ್ಟೆಗಳಲ್ಲಿ ಸಶಸ್ತ್ರ ಮೀಸಲು ಪಡೆಗಳನ್ನುನಿಯೋಜನೆ ಮಾಡಲಾಗಿದೆ. ಎಲ್ಲಾ ಮತಗಟ್ಟೆಗಳಲ್ಲಿಯೂ ಪಾರದರ್ಶಕತೆ ಕಾಯ್ದುಕೊಳ್ಳಲು ಎಲ್ಲ ರೀತಿಯ ವ್ಯವಸ್ಥೆ ಮಾಡಲಾಗಿದೆ. ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಅತಿಹೆಚ್ಚು 2911 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಕಡಿಮೆ ಮತಗಟ್ಟೆಗಳಿದ್ದು, 1842 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಅಲ್ಲದೇ, ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಅತ್ಯಧಿಕ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಕಡಿಮೆ ಒಂಭತ್ತು ಅಭ್ಯರ್ಥಿಗಳು ಅಖಾಡದಲ್ಲಿದ್ದಾರೆ.

ಮಹಿಳಾ ವೈದ್ಯರು ಚಿಕಿತ್ಸೆ ನೀಡಿದ ರೋಗಿ ಸಾಯುವ ಸಾಧ್ಯತೆ ಕಡಿಮೆ: ಸಂಶೋಧನಾ ವರದಿಯಿಂದ ಬಹಿರಂಗ

ಈ ದಾಖಲೆ ತೋರಿಸಿ ಮತ ಚಲಾಯಿಸಿ: ಮತದಾರರು ಮತ ಚಲಾಯಿಸಲು ಮತದಾನ ಕೇಂದ್ರಗಳಿಗೆ ಮತದಾರರ ಗುರುತಿನ ಚೀಟಿ ಕೊಂಡೊಯ್ಯಬೇಕು. ಒಂದುವೇಳೆಮತದಾರರ ಗುರುತಿನ ಚೀಟಿ ಇಲ್ಲದಿದ್ದರೆ, ಮತಪಟ್ಟಿಯಲ್ಲಿ ಹೆಸರಿದ್ದರೆಪರ್ಯಾಯದಾಖಲೆಗಳನ್ನು ಕೊಂಡೊಯ್ದು ಮತಚಲಾಯಿಸಲು ಅವಕಾಶ ಮಾಡಿಕೊಡಲಾಗಿದೆ. ಆಧಾರ್ ಕಾರ್ಡ್, ನರೇಗಾ ಕಾರ್ಡ್, ಬ್ಯಾಂಕ್/ಅಂಚೆ ಕಚೇರಿ ನೀಡಿದ ಭಾವಚಿತ್ರ ಇರುವ ಪಾಸ್‌ಬುಕ್, ಆರೋಗ್ಯ ವಿಮಾ ಸ್ಮಾರ್ಟ್ ಕಾರ್ಡ್, ಚಾಲನಾಪರವಾನಗಿ,ಪಾನ್‌ಕಾರ್ಡ್, ಪಾಸ್ ಪೋರ್ಟ್, ಭಾವಚಿತ್ರ ಇರುವ ಪಿಂಚಣಿಯ ದಾಖಲೆ, ಕೇಂದ್ರ/ರಾಜ್ಯ / ಸಾರ್ವಜನಿಕ ಸಂಸ್ಥೆಗಳು ನೀಡಿದ ಭಾವಚಿತ್ರ ಇರುವ ಸೇವಾ ಗುರುತಿನ ಚೀಟಿಗಳು, ಸಂಸದರು,ಶಾಸಕರಿಗೆ ನೀಡಲಾದ ಗುರುತಿನ ಚೀಟಿಗಳು, ವಿಶಿಷ್ಟಅಂಗವೈಕಲ್ಯ ಕಾರ್ಡ್‌ಗಳ ಪೈಕಿ ಒಂದನ್ನು ತೋರಿಸಿ ಮತ ಚಲಾಯಿಸಬಹುದಾಗಿದೆ.

Latest Videos
Follow Us:
Download App:
  • android
  • ios