ಸ್ಯಾಂಡಲ್ ವುಡ್ ಜೂನಿಯರ್ ರೆಬೆಲ್ ಅಭಿಷೇಕ್ ಅಂಬರೀಶ್ ಅಭಿನಯದ ’ಅಮರ್’ ಸಿನಿಮಾಗೆ ಸೆನ್ಸಾರ್ ಮಂಡಳಿ U/A ನೀಡುವ ಮೂಲಕ ಗ್ರೀನ್ ಸಿಗ್ನಲ್ ಕೊಟ್ಟಿದೆ.

ತಂದೆಯಿಂದಲೇ ಅಭಿಷೇಕ್‌ ಸಿನಿಮಾಗೆ ಎದುರಾಯ್ತು ಸಂಕಷ್ಟ!

U/A ಪ್ರಮಾಣ ಪತ್ರ ಪಡೆದಿರುವ ಚಿತ್ರತಂಡ ಸಿನಿಮಾವನ್ನು ಮೇ ತಿಂಗಳಲ್ಲಿ ಅಂದ್ರೆ ಅಂಬರೀಶ್ ಹುಟ್ಟುಹಬ್ಬದಂದು ಬಿಡುಗಡೆ ಮಾಡುವುದಾಗಿ ತೀರ್ಮಾನ ಮಾಡಿದೆ.

ನಾಗಶೇಖರ್ ನಿರ್ದೇಶನ ಹಾಗೂ ನಾಗರಾಜ್ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಅಮರ್ ಚಿತ್ರ ಈಗಾಗಲೇ ಟೀಸರ್, ಟ್ರೈಲರ್ ಮೂಲಕ ಲಕ್ಷಗಟ್ಟಲೇ ವೀಕ್ಷಣೆ ಪಡೆದಿದೆ. ಚಿತ್ರದ ನಾಯಕಿ ತಾನ್ಯ ಹೋಪ್ ‘ಬಸಣ್ಣಿ’ ಎಂದು ಹೇಳುತ್ತಾ ಯಜಮಾನ ಚಿತ್ರದ ಮೂಲಕ ಕೊಟ್ಟಿರುವ ಎಂಟ್ರಿ ಯಶಸ್ಸು ತಂದು ಕೊಟ್ಟಿದೆ.