ಬೆಂಗಳೂರು (ಜು. 30): ನಟಿ ಪ್ರಿಯಾಮಣಿ ಟ್ವೀಟ್ ಸೋಷಿಯಲ್ ಮೀಡಿಯಾದಲ್ಲಿ ಸಂಚಲನವನ್ನೇ ಹುಟ್ಟು ಹಾಕಿದೆ. 

ನಾವೀಗ ಮೂವರು : ಗುಡ್ ನ್ಯೂಸ್ ಕೊಟ್ಟ ಯಶ್ ದಂಪತಿ

ಯಶ್-ರಾಧಿಕಾ ಗುಡ್ ನ್ಯೂಸ್ ಹಿನ್ನಲೆಯಲ್ಲಿ ಪ್ರಿಯಾಮಣಿ ಟ್ವೀಟ್ ಕುತೂಹಲ ಮೂಡಿಸಿದೆ. ಪ್ರಿಯಾಮಣಿ ತಾಯಿಯಾಗುತ್ತಿದ್ದರಾ ಎಂಬ ಸುದ್ದಿ ಹರಿದಾಡುತ್ತಿದೆ. ಪ್ರಿಯಾಮಣಿ ಟ್ವೀಟ್’ನಲ್ಲಿ ಏನನ್ನೂ ನೇರವಾಗಿ ಹೇಳದೇ ನಾನು ಮತ್ತು ನನ್ನ ಪತಿ ಮುಸ್ತಫಾ ರಾಜ್ ಕಡೆಯಿಂದ ಸಮ್ ಥಿಂಗ್ ಇಂಟರೆಸ್ಟಿಂಗ್ ಹಾಗೂ ಫನ್ ಸಂಗತಿಯೊಂದು ನಿಮ್ಮ ಮುಂದೆ ಬರಲಿದೆ. ಕಾದು ನೋಡಿ ಎಂದು ಟ್ವೀಟ್ ಮಾಡಿದ್ದಾರೆ. ಅವರ ಟ್ವೀಟ್ ನೋಡಿ ಅಭಿಮಾನಿಗಳು ಶುಭಾಶಯ ಕೋರಿದ್ದಾರೆ.