ನಾವೀಗ ಮೂವರು : ಗುಡ್ ನ್ಯೂಸ್ ಕೊಟ್ಟ ಯಶ್ ದಂಪತಿ

First Published 25, Jul 2018, 11:08 AM IST
Kannada Actor Yash is Going to be a Father
Highlights

  • ತಂದೆಯಾಗಲಿರುವ ನಟ ರಾಕಿಂಗ್ ಸ್ಟಾರ್ ಯಶ್
  • ಫೇಸ್ ಬುಕ್'ನಲ್ಲಿ ಶುಭಸುದ್ದಿ ಶೇರ್ ಮಾಡಿಕೊಂಡ ತಾರಾ ದಂಪತಿ

ಬೆಂಗಳೂರು[ಜು.25]: ಅಭಿಮಾನಿಗಳು ಹಾಗೂ ಸ್ಯಾಂಡಲ್ ವುಡ್'ಗೆ ಯಶ್ ದಂಪತಿ ಶುಭ ಸಮಾಚಾರ ನೀಡಿದ್ದಾರೆ.  ತಮ್ಮ ಕುಟುಂಬಕ್ಕೆ ಹೊಸಬರ ಪ್ರವೇಶವಾಗಲಿದೆ ಎಂದು ಫೇಸ್ ಬುಕ್ ಹಾಗೂ ಇನ್ಸ್ಟಾಗ್ರಾಮ್ ಪುಟದಲ್ಲಿ ತಾರಾ ದಂಪತಿ ಪೋಸ್ಟ್ ಮಾಡಿಕೊಂಡಿದ್ದಾರೆ.

ನಾವೀಗ ಮೂವರು ಎಂದು ನಟಿ ರಾಧಿಕಾ ಪಂಡಿತ್ ಪೋಸ್ಟ್ ಮಾಡಿದ್ದರೆ, ರಾಕಿಂಗ್ ಸ್ಟಾರ್' ಯಶ್ ತಂದೆಯಾಗುತ್ತಿದ್ದಾರೆ ಎಂದು ವಿಡಿಯೋ ಪೋಸ್ಟ್ ಮಾಡಿಕೊಂಡಿದ್ದಾರೆ. ಮದುವೆಯಾಗಿ 2 ವರ್ಷವಾದರೂ ಯಶ್ ತಂದೆ ಆಗೋದು ಯಾವಾಗ ಎನ್ನುವ ಕೊರಗು ಅವರ ಅಭಿಮಾನಿಗಳಲ್ಲಿತ್ತು. ಯಶ್ ಅವರ ತಾಯಿ ಕೂಡ ನಾನು ಅಜ್ಜಿ ಆಗೋದು ಯಾವಾಗ ಎಂದು ಕೆಲ ದಿನಗಳ ಹಿಂದೆಯಷ್ಟೇ ನೇರವಾಗಿ ತಮ್ಮ ಮಗನನ್ನು ಕೇಳಿಕೊಂಡಿದ್ದರು. ಇದೀಗ ತಮ್ಮ ಮನೆಯವರಿಗೆ ಹಾಗೂ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ ಯಶ್ ದಂಪತಿ.

ಯಶ್, ತಾವು ತಂದೆಯಾಗಿ ಪ್ರಮೋಷನ್ ಪಡೆಯುತ್ತಿರುವ ವಿಚಾರವನ್ನು ಇಂದು ತಮ್ಮ ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ. ರಾಧಿಕಾ ಕೂಡ ಇನ್ನು ಮುಂದೆ ನಾವು ಮೂವರು ಎನ್ನುವ ಮೂಲಕ ತಾವು ಗರ್ಭಿಣಿಯಾಗಿರುವ ಸಂತಸದ ಸಂಗತಿಯನ್ನು ಹಂಚಿಕೊಂಡಿದ್ದಾರೆ. 

KGF ಅಲ್ಲ YGF
ಯಶ್ ತಮ್ಮ ಟ್ವಿಟ್ಟರ್ ಮತ್ತು ಫೇಸ್‍ಬುಕ್‍ನಲ್ಲಿ ವೈಜಿಎಫ್ ಎಂದು ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದು  ವೈಜಿಎಫ್ ಎಂದರೆ ‘ಯಶ್ ಗೊಯಿಂಗ್ ಟು ಬಿ ಎ ಫಾದರ್’- ಅಂದರೆ 'ಯಶ್ ಗೂಯಿಂಗ್ ಟಿ ಬಿ ಎ ಫಾದರ್ '. ಡಿಸೆಂಬರ್ 9, 2016ರಂದು ಯಶ್ ಹಾಗೂ ರಾಧಿಕಾ ಪಂಡಿತ್ ಹಸೆಮಣೆ ಏರಿದ್ದರು. ಇಬ್ಬರ ಮದುವೆಯು ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೋಟೆಲ್'ನಲ್ಲಿ ಅದ್ದೂರಿಯಾಗಿ ನೆರವೇರಿತ್ತು.

ತಾಯಿಯ ಆಸೆ ಈಡೇರಿಸಿದ ಯಶ್
ಇತ್ತೀಚೆಗಷ್ಟೆ  `ಕನ್ನಡದ ಕೋಟ್ಯಧಿಪತಿ’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಯಶ್'ಗೆ ತಾಯಿ ಪುಷ್ಪಾ  ನಾನು ಅಜ್ಜಿ ಆಗೋದು ಯಾವಾಗ ಎಂದು ಕೇಳಿದ್ದಕ್ಕೆ ಯಶ್ ಶೀಘ್ರದಲ್ಲೇ ಎಂದು ನಕ್ಕು ಉತ್ತರ ಕೊಟ್ಟಿದ್ದರು. ತಾಯಿಯ ಆಸೆಯನ್ನು ಕೆಲ ದಿನಗಳಲ್ಲಿಯೇ ರಾಕಿಂಗ್ ಸ್ಟಾರ್ ಈಡೇರಿಸಿದ್ದಾರೆ. 

ಈ ಸುದ್ದಿಯನ್ನು ಓದಿ : ಸಿನಿಮಾ, ದಾಂಪತ್ಯದ ಗುಟ್ಟು ಬಿಚ್ಚಿಟ್ಟ ರಾಧಿಕಾ ಪಂಡಿತ್

 

 

 

Ohhh!!! We are three now 😇 #radhikapandit #nimmaRP

A post shared by Radhika Pandit (@iamradhikapandit) on Jul 24, 2018 at 9:17pm PDT

loader