ಶುಕ್ರವಾರ ರಾತ್ರಿ 10.30ರ ಸುಮಾರಿನಲ್ಲಿ ಕೇರಳದ ಎರ್ನಾಕುಲಂ'ನಲ್ಲಿ ಮಲಯಾಳಂ ಚಿತ್ರವೊಂದರ ಶೂಟಿಂಗ್ ಮುಗಿಸಿ ಕಾರಿನಲ್ಲಿ ಮನೆಗೆ ಹೋಗುತ್ತಿದ್ದಾಗ 5 ಮಂದಿ ದುಷ್ಕರ್ಮಿಗಳು ಮಾರ್ಗಮಧ್ಯೆ ಕಾರು ತಡೆದು ಅದೇ ಕಾರಿನಲ್ಲಿ ಅಪಹರಿಸಿದ್ದಾರೆ.
ತಿರುವನಂತಪುರಂ(ಫೆ.18): ದಕ್ಷಿಣ ಭಾರತದ ಹೆಸರಾಂತ ನಾಯಕಿ ಭಾವನ ಮೆನನ್ ಅವರನ್ನು ಅಪಹರಿಸಿದ ದುಷ್ಕರ್ಮಿಗಳು ಲೈಂಗಿಕ ಕಿರುಕುಳ ನೀಡಿ ವಿಡಿಯೋ ಕೂಡ ಮಾಡಿರುವ ಸಾಧ್ಯತೆಯಿದೆ.
ಶುಕ್ರವಾರ ರಾತ್ರಿ 10.30ರ ಸುಮಾರಿನಲ್ಲಿ ಕೇರಳದ ಎರ್ನಾಕುಲಂ'ನಲ್ಲಿ ಮಲಯಾಳಂ ಚಿತ್ರವೊಂದರ ಶೂಟಿಂಗ್ ಮುಗಿಸಿ ಕಾರಿನಲ್ಲಿ ಮನೆಗೆ ಹೋಗುತ್ತಿದ್ದಾಗ 5 ಮಂದಿ ದುಷ್ಕರ್ಮಿಗಳು ಮಾರ್ಗಮಧ್ಯೆ ಕಾರು ತಡೆದು ಅದೇ ಕಾರಿನಲ್ಲಿ ಅಪಹರಿಸಿದ್ದಾರೆ. ಕಾರಿನಲ್ಲಿಯೇ ಒಂದು ಗಂಟೆಗೂ ಹೆಚ್ಚು ಕಾಲ ಅಪಹರಿಸಿದ ನಂತರ ನಟಿಯ ಮನೆ ಮುಂದೆಯೇ ಬಿಟ್ಟು ಹೋಗಿದ್ದಾರೆ.
ಈ ಆಘಾತದಿಂದ ಜಾಕಿ ಚಿತ್ರದ ನಾಯಕಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಿಡ್ನಾಪ್ ಕಾರಣರಾದವರೆಲ್ಲ ಭಾವನ ಅವರ ಮಾಜಿ ಕಾರು ಚಾಲಕರಾಗಿದ್ದು, ಪ್ರಸ್ತುತ ಒಬ್ಬ ಕಾರು ಚಾಲಕ ಮಾರ್ಟಿನ್ ಎಂಬಾತನನ್ನು ಪೊಲೀಸರು ಬಂಧಿಸಿ ಮತ್ತೊಬ್ಬ ಆರೋಪಿ ಸುನೀಲ್ ಎಂಬುವವನಿಗೆ ಶೋಧ ನಡೆಸುತ್ತಿದ್ದಾರೆ.
ಅಪಹರಣದ ಪ್ರಮುಖ ಕಾರಣಕರ್ತ ಮಾಜಿ ಕಾರು ಚಾಲಕ ಸುನೀಲ್ ಆಗಿದ್ದು, ಇತ್ತೀಚಿಗಷ್ಟೆ ಭಾವನ ಅವರು ಈ ಚಾಲಕನನ್ನು ಅನುಚಿತ ವರ್ತನೆಯ ಕಾರಣದಿಂದ ಕೆಲಸದಿಂದ ತೆಗೆದು ಹಾಕಿದ್ದರು. ಭಾವನ ಮಲಯಾಳಂ,ತೆಲುಗು, ತಮಿಳು ಹಾಗೂ ಕನ್ನಡದ ಹಲವು ಚಿತ್ರಗಳಲ್ಲಿ ನಟಿಸಿದ್ದಾಳೆ.
