ಟಾಲಿವುಡ್‌ನ ಟಾಪ್‌ ಹೀರೋ ಆಗಿದ್ದವರು. ಕನ್ನಡದವರೇ ಆದ ಸುಮನ್‌, ವಿನೋದ್‌ ಆಳ್ವಾ ಅವರ ಸಮಕಾಲೀನರು. ಕನ್ನಡದಲ್ಲಿ ಶಶಿಕುಮಾರ್‌ ಇದ್ದಂತೆ ತೆಲುಗಿನಲ್ಲಿ ಜಗಪತಿ ಬಾಬು ಫ್ಯಾಮಿಲಿ ಹೀರೋ. ಆದರೆ, ಯಾವಾಗ ‘ಲೆಜೆಂಡ್‌’ ಚಿತ್ರದಲ್ಲಿ ನಂದಮೂರಿ ಬಾಲಕೃಷ್ಣ ಮುಂದೆ ಗರ್ಜಿಸಿದರೋ ಆಗಲೇ ಅವರು ದಕ್ಷಿಣ ಭಾರತದ ಖಡಕ್‌ ವಿಲನ್‌ ಆದರು. ಸಾಲ್ಟ್‌ ಆ್ಯಂಡ್‌ ಪೆಪ್ಪರ್‌ ಲುಕ್‌ ಅನ್ನೇ ತಮ್ಮ ಸ್ಟಾರ್‌ ಇಮೇಜ್‌ನ ಸಿಗ್ನೇಚರ್‌ನಂತೆ ರೂಪಿಸಿಕೊಂಡಿರುವ ಜಗಪತಿ ಬಾಬು ಈಗ ಮೊದಲ ಬಾರಿಗೆ ದರ್ಶನ್‌ಗೆ ವಿಲನ್‌ ಆಗಿ ನಟಿಸುತ್ತಿದ್ದಾರೆ.

ಈ ಹಿಂದೆ ಸುದೀಪ್‌ ನಟಿಸಿದ್ದ ‘ಬಚ್ಚನ್‌’ ಹಾಗೂ ನಿಖಿಲ್‌ಕುಮಾರ್‌ ಅಭಿನಯದ ‘ಜಾಗ್ವಾರ್‌’ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದವರು. ಅಲ್ಲದೆ ಉಪೇಂದ್ರ ಅವರ ‘ಉಪ್ಪಿ ರುಪ್ಪಿ’ ಚಿತ್ರದಲ್ಲೂ ಇವರ ಪಾತ್ರವಿದೆ.

ಏನೋ ಜಾಸ್ತಿ ಮಾಡ್ತಿದೀವಿ ಅಂತಲ್ಲ. ಒಂದೊಳ್ಳೆ ಸಿನಿಮಾ ಮಾಡ್ತಿದೀವಿ. ನಾನು ಈಗ ಅನ್ನ ತಿನ್ನುವುದು ಬಿಟ್ಟಿದ್ದೇನೆ. ಪಾತ್ರಕ್ಕೆ ರೆಡಿಯಾಗುತ್ತಿದ್ದೇನೆ. ಡಿಫರೆಂಟಾಗಿ ಫಸ್ಟ್‌ ಲುಕ್‌ ರಿಲೀಸ್‌ ಮಾಡುವ ಯೋಚನೆ ಇದೆ.- ದರ್ಶನ್‌

ರಾಬರ್ಟ್‌ ವಿಶೇಷತೆಗಳು

1. ಶೂಟಿಂಗ್‌ ಈಗಾಗಲೇ ಶುರುವಾಗಿದೆ. ನಿರ್ದೇಶಕ ತರುಣ್‌ ಸುಧೀರ್‌ ಅವರು ಭಾರಿ ಸಿದ್ಧತೆ ಮಾಡಿಕೊಂಡು ಶೂಟಿಂಗಿಗೆ ಹೊರಟಿದ್ದಾರೆ. ತೆಲುಗು ನಿರ್ದೇಶಕ ರಾಜಮೌಳಿ, ತಮಿಳು ನಿರ್ದೇಶಕ ಶಂಕರ್‌ ರೀತಿಯಲ್ಲಿ ಶೂಟಿಂಗ್‌ ಸೆಟ್‌ನಲ್ಲಿ ಮೊಬೈಲ್‌ ನಿಷೇಧ ಮಾಡಿದ್ದಾರೆ. ಕಲಾವಿದರಿಗೂ ಚಿತ್ರೀಕರಣ ಸ್ಥಳದಲ್ಲಿ ಮೊಬೈಲ್‌ ಬಳಸದೇ ಇರಲು ಸೂಚಿಸಿದ್ದಾರೆ.

2. ದರ್ಶನ್‌ ಅನ್ನ ಬಿಟ್ಟು ಪಾತ್ರಕ್ಕಾಗಿ ರೆಡಿಯಾಗುತ್ತಿದ್ದಾರೆ. ವಿಭಿನ್ನ ರೀತಿಯ ಲುಕ್‌ ಇರುವುದರಿಂದ ವಿಶೇಷವಾಗಿ ಫಸ್ಟ್‌ ಲುಕ್‌ ರಿಲೀಸ್‌ ಮಾಡುವ ಆಲೋಚನೆ ಇಟ್ಟುಕೊಂಡಿದ್ದಾರೆ.

ರಾಬರ್ಟ್ ಚಿತ್ರದಲ್ಲಿ ದರ್ಶನ್ ಹಿಂದೂನಾ? ಕ್ರಿಶ್ಚಿಯನ್ನಾ?

3. ನಿರ್ದೇಶಕರು ಎಲ್ಲವನ್ನೂ ಭಾರಿ ರಹಸ್ಯವಾಗಿ ಇಡಲು ಪಣತೊಟ್ಟಿದ್ದಾರೆ. ಪ್ರೇಕ್ಷಕರಿಗೆ ಸರ್ಪೆ್ರೖಸ್‌ ಇರಬೇಕು ಅನ್ನುವುದು ಅವರ ನಿಲುವು. ಹಾಗಾಗಿ ಅವರು ಏನು ಕೇಳಿದರೂ ಮಾತಾಡುವುದಿಲ್ಲ ಮತ್ತು ಹೇಳುವುದಿಲ್ಲ.