ಕೆಲದಿನಗಳ ಹಿಂದೆ ಕಾಲಿವುಟ್ ನಟ ವಿಶಾಲ್ ಹಾಗೂ ಅನಿಶಾ ರೆಡ್ಡಿ ಅಧಿಕೃತವಾಗಿ ಎಂಗೇಜ್ ಮೆಂಟ್ ಮಾಡಿಕೊಂಡಿದ್ದು ಮರುದಿನ ಶೂಟಿಂಗ್ ಗೆ ತೆರಳಿದಾಗ ಸಾಹಸ ದೃಶ್ಯ ಮಾಡುವಾಗ ಕೈ-ಕಾಲುಗಳಿಗೆ ಪೆಟ್ಟು ಮಾಡಿಕೊಂಡಿದ್ದಾರೆ. ವೈದ್ಯರ ಸಲಹೆ ಮೇರೆಗೆ ತಿಂಗಳುಗಳ ಕಾಲ ವಿಶ್ರಾಂತಿ ತೆಗೆದುಕೊಳ್ಳಬೇಕಿದ್ದು ಶೂಟಿಂಗ್ ಮುಂದೂಡಲಾಗಿದೆ.

 

ಇನ್ನು ಸಾಮಾಜಿಕ ಜಾಲತಾಣದಲ್ಲಿ ವಿಶಾಲ್ ಫೋಟೋ ವೈರಲ್ ಆಗಿದ್ದು ಅಭಿಮಾನಿಗಳು ಆತಂಕಕ್ಕೆ ಒಳಗಾಗಿದ್ದಾರೆ. ವಿಶಾಲ್ ಆರೋಗ್ಯವಾಗಿದ್ದು ಯಾವುದೇ ಗಂಭೀರ ಗಾಯ ಅಥವಾ ಪ್ರಾಣಕ್ಕೆ ತೊಂದರೆ ಆಗಿಲ್ಲ ಎಂದು ಚಿತ್ರತಂಡ ಸ್ಪಷ್ಟನೆ ನೀಡಿದೆ.