ಪ್ರತಿಷ್ಟಿತ 2017ನೇ ಸಾಲಿನ ದಕ್ಷಿಣ ಭಾರತದ 64ನೇ ಜಿಯೋ ಫಿಲ್ಮ್ ಫೇರ್ ಪ್ರಶಸ್ತಿ ಪ್ರಕಟಗೊಂಡಿದೆ. ಹೈದರಾಬಾದ್ ನಲ್ಲಿ  ನಡೆದ ಅದ್ದೂರಿ ಸಮಾರಂಭದಲ್ಲಿ ದಕ್ಷಿಣ ಭಾರತದ ದಿಗ್ಗಜರ ಸಮಾಗಮವೇ ಆಗಿತ್ತು. ಹಿರಿಯ ನಟ ಅನಂತ್ ನಾಗ್ ಸೇರಿದಂತೆ ಹಲವಾರು ಸ್ಯಾಂಡಲ್ ವುಡ್ ನಟರು ಫಿಲ್ಮ್ ಫೇರ್ ಪ್ರಶಸ್ತಿಗೆ ಪಾತ್ರರಾದ್ರು.

ದಕ್ಷಿಣ ಭಾರತದ 64ನೇ ಫಿಲ್ಮ್ ಫೇರ್ ಅವಾರ್ಡ್ ಸಮಾರಂಭ ಹೈದರಾಬಾದ್ ನ ಖಾಸಗಿ ಹೋಟೇಲ್ ನಲ್ಲಿ ನಡೀತು. ಕನ್ನಡ, ತೆಲುಗು, ತಮಿಳು, ಮಲಯಾಳಂ ಸಿನಿಮಾ ರಂಗದ ದಿಗ್ಗಜರು ಸಮಾರಂಭದಲ್ಲಿ ಪಾಲ್ಗೊಂಡು ಮತ್ತಷ್ಟು ಮೆರಗು ತಂದರು.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದ್ದ ತಿಥಿ ಸಿನಿಮಾ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದುಕೊಂಡ್ರೆ ಕಿರಿಕ್ ಪಾರ್ಟಿ ಸಿನಿಮಾ 5 ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿತು. ರಿಷಬ್ ಶೆಟ್ಟಿ ಅತ್ಯುತ್ತಮ ನಿರ್ದೇಶಕ, ರಕ್ಷಿತ್ ಶೆಟ್ಟಿ ವಿಮರ್ಶಕರ ಅತ್ಯುತ್ತಮ ನಟ, ಮತ್ತು ಸಂಯುಕ್ತ ಹೆಗ್ಡೆ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಯನ್ನ ಬಾಚಿಕೊಂಡಿದ್ದಾರೆ.

ಗೋದಿ ಬಣ್ಣ ಸಾಧಾರಣಾ ಮೈ ಕಟ್ಟು ಸಿನಿಮಾಕ್ಕಾಗಿ ಅನಂತ್ ನಾಗ್ ಅತ್ಯುತ್ತಮ ನಟ ಪ್ರಶಸ್ತಿ ಪಡೆದುಕೊಂಡ್ರೆ, ಶೃತಿ ಹರಿಹರನ್ ಗೆ ವಿಮರ್ಶಕರ ಅತ್ಯುತ್ತಮ ನಟಿ ಪ್ರಶಸ್ತಿ ಒಲಿದು ಬಂದಿದೆ. ಇನ್ನೂ ಯೂ ಟರ್ನ್ ಸಿನಿಮಾಕ್ಕಾಗಿ ಶ್ರದ್ಧಾ ಶ್ರೀನಾಥ್ ಅತ್ತುತ್ತಮ ನಟಿ ಪ್ರಶಸ್ತಿ ಬಾಚಿಕೊಂಡಿದ್ದಾರೆ.

ಮುಂಗಾರು ಮಳೆ -2 ಸಿನಿಮಾದಲ್ಲಿನ ಹಾಡಿನ ಸಾಹಿತ್ಯಕ್ಕಾಗಿ ಜಯಂತ್ ಕಾಯ್ಕಿಣಿಗೆ ಅತ್ಯುತ್ತಮ ಸಾಹಿತಿ ಪ್ರಶಸ್ತಿ ಬಂದಿದ್ರೆ. ರಾಮಾ ರಾಮಾ ರೇ ಸಿನಿಮಾದಲ್ಲಿ ಹಾಡಿಗಾಗಿ ಅನನ್ಯ ಭಟ್ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿ ಪಡೆದುಕೊಂಡ್ರು.

ಸಮಾರಂಭದಲ್ಲಿ ದಕ್ಷಿಣ ಭಾರತದ ದಿಗ್ಗಜರೆಲ್ಲಾ ಭಾಗಿಯಾಗಿ ವರ್ಣರಂಜಿತ ಕಾರ್ಯಕ್ರಮಕ್ಕೆ ಮೆರಗು ನೀಡಿದ್ರು.