‘ತಿಥಿ’ ಚಿತ್ರ ತಂಡ, ಹತ್ತಿರದ ಸಂಬಂಧಿಕರು, ಬಂಧುಗಳು ಶುಭಕೋರಿದರು. ಮೂಲತಃ ಮಂಡ್ಯದ ಹುಲಿಕೆರೆ ಕೊಪ್ಪಲು ಗ್ರಾಮದವರಾದ ಅಭಿಷೇಕ್ ‘ತಿಥಿ’ ಚಿತ್ರದಲ್ಲಿ ನಟಿಸಿದ್ದರು.
ಮಂಡ್ಯ(ನ.16): ‘ತಿಥಿ’ ಚಿತ್ರದ ಮೂಲಕ ಖ್ಯಾತಿ ಗಳಿಸಿದ್ದ ಕನ್ನಡದ ಯುವ ನಟ ಅಭಿಷೇಕ್ ಬುಧವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ನಗರದ ಆಂಜನೇಯಸ್ವಾಮಿ ದೇವಸ್ಥಾನದ ಸಮುದಾಯ ಭವನದಲ್ಲಿ ತನ್ನ ಅಕ್ಕ ಗೌರಮ್ಮ ಹಾಗೂ ಜವರಯ್ಯರ ಪುತ್ರಿ ಕಾವ್ಯಾಳನ್ನು ಅಭಿಷೇಕ್ ವರಿಸಿದರು.
‘ತಿಥಿ’ ಚಿತ್ರ ತಂಡ, ಹತ್ತಿರದ ಸಂಬಂಧಿಕರು, ಬಂಧುಗಳು ಶುಭಕೋರಿದರು. ಮೂಲತಃ ಮಂಡ್ಯದ ಹುಲಿಕೆರೆ ಕೊಪ್ಪಲು ಗ್ರಾಮದವರಾದ ಅಭಿಷೇಕ್ ‘ತಿಥಿ’ ಚಿತ್ರದಲ್ಲಿ ನಟಿಸಿದ್ದರು. ಈ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಬಂದಿತ್ತು. ಬಳಿಕ ಅಭಿಷೇಕ್ ‘ತರ್ಲೆ ವಿಲೇಜ್’, ‘ಏನ್ ನಿನ್ ಪ್ಲಾಬ್ಲಂ’, ‘ಹಳ್ಳಿ ಪಂಚಾಯಿತಿ’ ಚಿತ್ರಗಳಲ್ಲಿ ಅಭಿನಯಿಸಿದ್ದರು.
