ಕನ್ನಡ ಚಿತ್ರರಂಗದಲ್ಲೇ ದಾಖಲೆ ಬರೆದಿದೆ ದಿ ವಿಲನ್!

First Published 23, Feb 2018, 6:43 PM IST
The Villan Movie Record
Highlights

ಕನ್ನಡದ ಬಿಗ್ ಬಜೆಟ್ ಸಿನಿಮಾ ದಿ ವಿಲನ್ ಈಗ  ಮತ್ತೊಂದು ದಾಖಲೆ ಮಾಡಿದೆ. 

ಬೆಂಗಳೂರು (ಫೆ.23): ಕನ್ನಡದ ಬಿಗ್ ಬಜೆಟ್ ಸಿನಿಮಾ ದಿ ವಿಲನ್ ಈಗ  ಮತ್ತೊಂದು ದಾಖಲೆ ಮಾಡಿದೆ. 

100 ಕ್ಕೂ ಹೆಚ್ಚು ದಿನ ಚಿತ್ರೀಕರಣವನ್ನ ಮಾಡಿದೆ. ದೇಶ-ವಿದೇಶದಲ್ಲೂ ಕನ್ನಡದ ಈ ವಿಲನ್ ಸಿನಿಮಾ ಚಿತ್ರೀಕರಣ ಆಗಿದೆ.  ಚಿತ್ರೀಕರಣ ಇನ್ನೂ ನಡೀತಾನೇ ಇದೆ. ಈ ನಡುವೆ ಸಿನಿಮಾದ ಹೊಸ ನ್ಯೂಸ್ ಹೊರ ಬಿದ್ದಿದೆ. ಅದು ಕನ್ನಡ ಚಿತ್ರರಂಗದಲ್ಲೇ  ಮೊಟ್ಟ ಮೊದಲು ದಾಖಲೆ ಮಾಡಿರೋ ಸಾಧನೆ.
ಇದೀಗ ಸಿನಿಮಾ ಹಾಡುಗಳ ವಿಚಾರದಲ್ಲಿ ಹೊಸದೊಂದು ದಾಖಲೆಯನ್ನೆ ಮಾಡಿದೆ. ಕನ್ನಡ  ಚಿತ್ರರಂಗದ ಹಳೆಯ ದಾಖಲೆಗಳನ್ನ ಮುರಿದು ಹೊಸ ದಾಖಲೆ ಮಾಡಿದೆ ದಿ ವಿಲನ್ ಹಾಡುಗಳು.  ಅರ್ಜುನ್ ಜನ್ಯ ಸಂಗೀತ ಸಖತ್ ಮೋಡಿ ಮಾಡಿದೆ.  ಈ ಆಡಿಯೋ ಹಕ್ಕುಗಳನ್ನು  ಕನ್ನಡದ ಪ್ರತಿಷ್ಠಿತ ಆಡಿಯೋ ಸಂಸ್ಥೆ ಆನಂದ್ ಆಡಿಯೋ  ಖರೀದಿಸಿದೆ. ಬರೋಬ್ಬರಿ 1 ಕೋಟಿ 8 ಲಕ್ಷಕ್ಕೆ ದಿ ವಿಲನ್ ಸಿನಿಮಾ ಹಾಡುಗಳು ಮಾರಾಟವಾಗುವ ಮೂಲಕ ಹೊಸ ಇತಿಹಾಸವನ್ನೆ ಬರೆದಿದೆ.  

loader