ಸೆಪ್ಟೆಂಬರ್ ನಲ್ಲೇ ದಿ ವಿಲನ್, ಕೆಜಿಎಫ್

https://static.asianetnews.com/images/authors/b348a094-0bef-5801-a1f6-61e57071185f.jpg
First Published 18, Aug 2018, 10:05 AM IST
The villain and KGF to release in september
Highlights

ಸರಿ ಸುಮಾರು ಆರೇಳು ತಿಂಗ ನಂತರ ಸ್ಯಾಂಡಲ್‌ವುಡ್‌ನಲ್ಲಿ ಸ್ಟಾರ್ ಸಿನಿಮಾಗಳ ಅಬ್ಬರ ಶುರುವಾಗುತ್ತಿದೆ. ಒಂದರ ಹಿಂದೆ ಒಂದು ಸ್ಟಾರ್ ಸಿನಿಮಾ ತೆರೆಗೆ ಅಪ್ಪಳಿಸುವುದು ಗ್ಯಾರಂಟಿ ಆಗಿದೆ. 

ಆದರೆ ಮೊದಲು ಬರುವವರು ಯಾರು? ಕನ್ನಡದ ಚಿತ್ರ ಪ್ರೇಮಿಗಳನ್ನು ಬಹುದಿನದಿಂದ ಕಾಡುತ್ತಿರುವ ಪ್ರಶ್ನೆಯಿದು. ಇದಕ್ಕೀಗ ಉತ್ತರ ಸಿಕ್ಕಿದೆ. ಸೆಪ್ಟೆಂಬರ್ ತಿಂಗಳಲ್ಲೇ ಬಹು ನಿರೀಕ್ಷಿತ ದಿ ವಿಲನ್ ಹಾಗೂ ಕೆಜಿಎಫ್ ಚಿತ್ರಗಳು ತೆರೆಗೆ ಅಪ್ಪಳಿಸುವ ಸಾಧ್ಯತೆಗಳಿವೆ. ಎರಡು ಚಿತ್ರಗಳ ರಿಲೀಸ್‌ಗೆ ತೆರೆಮರೆಯಲ್ಲಿ ನಡೆಯುತ್ತಿರುವ ಸಿದ್ಧತೆಗಳೇ ಅದಕ್ಕೆ ಸಾಕ್ಷಿ ಎನ್ನುತ್ತಿವೆ 
ಚಿತ್ರೋದ್ಯಮದ ಮೂಲಗಳು.

 ‘ದಿ ವಿಲನ್’ ಚಿತ್ರ ಸೆನ್ಸಾರ್‌ಗೆ ಹೋಗಿದೆ. ಸೆನ್ಸಾರ್ ಆಗುತ್ತಿದ್ದಂತೆಯೇ ಸೆಪ್ಟೆಂಬರ್ ಮೊದಲ ವಾರವೇ ತೆರೆಗೆ ಬಂದರೆ ಅಚ್ಚರಿ ಇಲ್ಲ. ಅದರ ಭಾಗವಾಗಿಯೇ ಭಾನುವಾರ ಚಿತ್ರದ ಆಡಿಯೋ ರಿಲೀಸ್ ಕಾರ್ಯಕ್ರಮ ಏರ್ಪಾಡಾಗಿದೆ.

ಯಶ್ ನಟನೆಯ ‘ಕೆಜಿಎಫ್ ’ ಕೂಡ ರಿಲೀಸ್‌ಗೆ ರೆಡಿ ಆಗಿದೆ. ಮೊನ್ನೆಯಷ್ಟೇ ಯಶ್ ಹಾಗೂ ತಮನ್ನಾ ಜೋಡಿಯ ಸ್ಪೆಷಲ್ ಸಾಂಗ್ ಮೂಲಕ ಚಿತ್ರದ ಚಿತ್ರೀಕರಣಕ್ಕೆ ಕುಂಬಳಕಾಯಿ ಒಡೆಯಲಾಗಿದೆ. ಇನ್ನೇನು ಸೆನ್ಸಾರ್‌ಗೆ ಕಾಲಿಡಲಿದೆ. ಅದು ಮುಗಿದರೆ ಸೆಪ್ಟೆಂಬರ್ ಕೊನೆಯಲ್ಲಿ ಕೆಜಿಎಫ್ ಅಬ್ಬರ ಶುರುವಾಗುವ ಸಾಧ್ಯತೆಗಳಿವೆ.

‘ಯಜಮಾನ’, ‘ಮುನಿರತ್ನ ಕುರುಕ್ಷೇತ್ರ’, ‘ಅಂಬಿ ನಿಂಗ್ ವಯಸ್ಸಾಯ್ತೋ’, ‘ಶ್ರೀಮನ್ನಾರಾ ಯಾಣ ’, ನಟಸಾರ್ವಭೌಮ .. ಹೀಗೆ ಸಾಲು ಸಾಲು ಸ್ಟಾರ್ ಸಿನಿಮಾಗಳು ಈ ವರ್ಷದ ಅಂತ್ಯದೊಳಗೆ ಬರಲಿವೆ. ಅಷ್ಟು ಸ್ಟಾರ್ ಸಿನಿಮಾಗಳೇ. ಸ್ಟಾರ್ ಸಿನಿಮಾಗಳು ಎನ್ನುವುದರ ಜತೆಗೆ ಅದ್ಧೂರಿ ವೆಚ್ಚ, ಮಲ್ಟಿಸ್ಟಾರ್ ಎನ್ನುವುದರ ಜತೆಗೆ ವಿಭಿನ್ನ ಕಥಾ ಹಂದರದ ಸಿನಿಮಾಗಳು ಎನ್ನುವುದು ಆ ಸಿನಿಮಾಗಳ ಮೇಲಿನ ನಿರೀಕ್ಷೆಗೆ ಕಾರಣ.

‘ಅಂಬಿ ನಿಂಗ್ ವಯಸ್ಸಾಯ್ತೋ’ ಮುಂದಕ್ಕೆ: ರೌದ್ರವಾತರದ ಈ ಮಳೆಯ ನಡುವೆ ಚಿತ್ರಮಂದಿರಗಳಿಗೆ ಜನರು ಬರುವುದು ಕಷ್ಟ ಎನ್ನುವ ಲೆಕ್ಕಾಚಾರದಿಂದಾಗಿ ಈ ತಿಂಗಳ ಕೊನೆಯಲ್ಲಿ ಬರಬೇಕಿದ್ದ  ಕೆಲವು ಸಿನಿಮಾಗಳ ರಿಲೀಸ್ ದಿನಾಂಕದಲ್ಲಿ ಬದಲಾವಣೆ ಆಗಿದೆ. ‘ಅಂಬಿ ನಿಂಗ್ ವಯಸ್ಸಾಯ್ತೋ’ ಚಿತ್ರ ಆಗಸ್ಟ್ 24 ರಂದು ತೆರೆಗೆ ಬರಬೇಕಾಗಿತ್ತು. ‘ಮೊದಲೇ ಅಂದುಕೊಂಡಂತೆ ನಾವು ಆಗಸ್ಟ್  24ಕ್ಕೆ ತೆರೆಗೆ ಬರಲು ನಿರ್ಧರಿಸಿದ್ದು ನಿಜ, ಆದರೆ, ಕೇರಳ ಮತ್ತು ರಾಜ್ಯದ ಹಲವೆಡೆಗಳಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತಿಯಿಂದಾಗಿ ರಿಲೀಸ್ ಡೇಟ್ ಮುಂದಕ್ಕೆ ಹೋಗಿದೆ. ಸದ್ಯಕ್ಕೆ ಮುಂದಿನ ದಿನಾಂಕ ಫಿಕ್ಸ್ ಆಗಿಲ್ಲ. ಪರಿಸ್ಥಿತಿ ನೋಡಿಕೊಂಡು ರಿಲೀಸ್ ಡೇಟ್ ಫಿಕ್ಸ್ ಮಾಡಲಾಗುವುದು’ ಎನ್ನುತ್ತಾರೆ ನಿರ್ಮಾಪಕ ಜಾಕ್ ಮಂಜು.

’ದಿ ವಿಲನ್’ ಟೀಂನಿಂದ ಹೊರ ಬಿತ್ತು ಹೊಸ ವಿಚಾರ

ಯುಟ್ಯೂಬ್’ನಲ್ಲಿ ಧೂಳೆಬ್ಬಿಸುತ್ತಿದೆ ವಿಲನ್ ಸಾಂಗ್!

ಯಶ್ ಜೊತೆ ಹೆಜ್ಜೆ ಹಾಕಿದ ಮಿಲ್ಕಿ ಬ್ಯೂಟಿ ತಮನ್ನಾ

ಕೆಜಿಎಫ್ ಗೆ ತಮನ್ನಾ ಸ್ಪೆಷಲ್ ಗೆಸ್ಟ್

loader