ಆಗಸ್ಟ್ 7 ಈ ಹಾಡಿಗೆ ಚಿತ್ರೀಕರಣ ಶುರುವಾಗುತ್ತಿದೆ. ಅದಕ್ಕಂತಲೇ ಚಿತ್ರತಂಡ ಅದ್ಧೂರಿ ಸೆಟ್ ಹಾಕಿದೆ. ಅಲ್ಲಿ ಯಶ್ ಹಾಗೂ ತಮನ್ನಾ ಭಾಟಿಯಾ ಕಾಂಬಿನೇಷನ್ ಸ್ಪೆಷಲ್ ಸಾಂಗ್‌ನಲ್ಲಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ.

1970ರಲ್ಲಿ ತೆರೆ ಕಂಡ ‘ಪರೋಪಕಾರಿ’ ಚಿತ್ರದಲ್ಲಿನ ಜೋಕೆ ನಾನು ಬಳ್ಳಿಯ ಮಿಂಚು ಹಾಡನ್ನೇ ಇಲ್ಲಿ ರಿಕ್ರಿಯೇಟ್ ಮಾಡಲಾಗಿದೆ. ಈ ಹಾಡಿಗೆ ಸ್ಟಾರ್ ನಟಿಯರನ್ನೇ ಕರೆ ತರಲು ಮುಂದಾಗಿದ್ದರು ನಿರ್ದೇಶಕ ಪ್ರಶಾಂತ್ ನೀಲ್. ಕಾಜಲ್ ಅಗರವಾಲ್, ಲಕ್ಷ್ಮಿ ರೈ, ತಮನ್ನಾ ಭಾಟಿಯಾ ಸೇರಿದಂತೆ ಮತ್ತಿರರ ಸ್ಟಾರ್ ನಟಿಯರ ಹೆಸರುಗಳು ಕೇಳಿಬಂದಿದ್ದವು. ಆದ್ರೆ ಈಗ ಫೈನಲ್ ಆಗಿದ್ದು ತಮನ್ನಾ . ಉಪೇಂದ್ರ ಕುಮಾರ್ ಸಂಗೀತದಲ್ಲಿ ಎಲ್.ಆರ್. ಈಶ್ವರಿ ಹಾಡಿದ್ದ ಈ ಹಾಡು ಮತ್ತೆ ಕೇಳಿಬರಲಿದ್ದು, ಹಾಡಿಗೆ ತಮನ್ನಾ ಹೆಜ್ಜೆ ಹಾಕುತ್ತಿದ್ದಾರೆ. ಅಂದು ಸಖತ್ ಸೌಂಡ್ ಮಾಡಿ, ಕನ್ನಡದ ಸಿನಿರಸಿಕರ ಮನೆ ಮಾತಾಗಿದ್ದ ಈ ಹಾಡಿನಲ್ಲಿ ತಮನ್ನಾ ಹೇಗೆ ಕಾಣಿಸಿಕೊಳ್ಳಲಿದ್ದಾರೆನ್ನುವುದು ಕುತೂಹಲ ಹುಟ್ಟಿಸಿದೆ. ‘ಇದೊಂದು ಕ್ಲಬ್ ಸಾಂಗ್. ನಾಯಕ ಅಲ್ಲಿ ವಿಶೇಷ ಸನ್ನಿವೇಶವೊಂದರಲ್ಲಿ ಕಾಣಿಸಿಕೊಳ್ಳುತ್ತಾನೆ. ಆತನ ಜತೆ ನಾಯಕಿಯೂ ಇರುತ್ತಾಳೆ. ಆ ಸನ್ನಿವೇಶದಲ್ಲಿ ತಮನ್ನಾ,‘ಜೋಕೆ ನಾನು ಬಳ್ಳಿಯ ಮಿಂಚು..’ ಅಂತ ಹೆಜ್ಜೆ ಹಾಕುತ್ತಾರೆ.

ಉಳಿದಂತೆ ಆ ಸನ್ನಿವೇಶ ಯಾವುದು, ಯಾಕಾಗಿ ಆ ಹಾಡು ಅನ್ನೋದು ಚಿತ್ರ ನೋಡಿದಾಗ ಗೊತ್ತಾಗುತ್ತದೆ’ ಎನ್ನುತ್ತಾರೆ ನಿರ್ದೇಶಕ ಪ್ರಶಾಂತ್. ಉಳಿದಂತೆ ಈ ಹಾಡಿಗೆ ಸ್ಟಾರ್ ನಟಿತಮನ್ನಾ ಒಪ್ಪಿಕೊಂಡು ಬಂದಿರುವುದು ಅವರಿಗೆ ಸಂತಸ ಮೂಡಿಸಿದೆ. ಈ ಹಾಡನ್ನು ರಿಕ್ರಿಯೇಟ್ ಮಾಡಬೇಕು ಅಂದುಕೊಂಡಾಗ ಅದಕ್ಕೆ ಸ್ಟಾರ್ ನಟಿಯರನ್ನೇ ಕರೆ ತರಬೇಕುಅಂದುಕೊಂಡಿದ್ದೆ. ಆದ್ರೆ ಯಾರನ್ನು ಕರೆ ತರಬೇಕು ಅನ್ನೋದರ ಹುಡುಕಾಟದಲ್ಲಿ ತಮನ್ನಾ ಒಪ್ಪಿಕೊಂಡು ಬಂದರು. ಖುಷಿ ಆಗುತ್ತಿದೆ’ ಎಂದರು.