ಬೆಂಗಳೂರು :  ಮಿಲ್ಕಿ ಬ್ಯೂಟಿ ಬಹುಭಾಷಾ ನಟಿ ತಮನ್ನಾ ಭಾಟಿಯಾ ಕನ್ನಡಕ್ಕೆ ಮತ್ತೆ ಬಂದಿದ್ದಾರೆ. 

ಈ ಹಿಂದೆ ಸಿಎಂ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಅಭಿನಯದ ಜಾಗ್ವಾರ್ ಚಿತ್ರದಲ್ಲಿ ನಟಿಸಿದ್ದ ತಮನ್ನಾ ಇದೀಗ ಕೆಜಿಎಫ್ ಚಿತ್ರದಲ್ಲಿ ಸ್ಪೆಷಲ್ ಸಾಂಗ್ ಒಂದಕ್ಕೆ ರಾಕಿಂಗ್ ಸ್ಟಾರ್ ಯಶ್ ಜೊತೆ ಹೆಜ್ಜೆ ಹಾಕಿದ್ದಾರೆ. 

1970ರಲ್ಲಿ ತೆರೆ ಕಂಡ ‘ಪರೋಪಕಾರಿ’ ಚಿತ್ರದಲ್ಲಿನ ಜೋಕೆ ನಾನು ಬಳ್ಳಿಯ ಮಿಂಚು ಹಾಡನ್ನೇ ಇಲ್ಲಿ ರಿಕ್ರಿಯೇಟ್ ಮಾಡಲಾಗಿದ್ದು, ಈ ಹಾಡಿಗೆ ಯಶ್ ರೊಂದಿಗೆ ತಮ್ಮನ್ನಾ ನೃತ್ಯ ಮಾಡಿದ್ದಾರೆ. 

ಯಶ್ ಜೊತೆಗೆ ಚಿತ್ರದಲ್ಲಿ ಗೆಸ್ಟ್ ಅಪಿಯರೆನ್ಸ್ ಮಾಡಿದ್ದು ಇದು ತಮಗೆ ಅತ್ಯಂತ ಸಂತೋಷ ನೀಡಿದೆ ಎಂದು ಟ್ವೀಟ್ ಮೂಲಕ ಹರ್ಷ ವ್ಯಕ್ತಪಡಿಸಿದ್ದಾರೆ.