ಮುಂಬೈ :  ಬಾಲಿವುಡ್ ನಲ್ಲಿ ಕೇವಲ 5 ಚಿತ್ರಗಳಲ್ಲಿ ನಟಿಸಿರುವ ಕಿಯಾರ ಅಡ್ವಾಣಿ ಇದೀಗ ಬಾಲಿವುಡ್ ಸಖತ್ ಸುದ್ದಿಯಲ್ಲಿರುವ ನಟಿ. ಇತ್ತೀಚೆಗಷ್ಟೇ ಕರಣ್ ಜೋಹಾರ್ ಅವರ ಲಸ್ಟ್ ಸ್ಟೋರೀಸ್ ಚಿತ್ರದಲ್ಲಿ ನಟಿಸಿದ್ದ ಕಿಯಾರ ದೃಶ್ಯವು ಎಲ್ಲೆಡೆ ವೈರಲ್ ಆಗಿತ್ತು. 

ಕೃತಕ ಲೈಂಗಿಕ ಸಾಧನಗಳ ಬಳಕೆಯ ದೃಶ್ಯದಲ್ಲಿ ಕಾಣಿಸಿಕೊಂಡಿದ್ದ ಕಿಯಾರ ಇದೀಗ ಈ ಸಂಬಂಧ ಮಾತನಾಡಿದ್ದಾರೆ. ಡಿಎನ್ ಎ ಯೊಂದಿಗೆ ತಮ್ಮ ಚಿತ್ರದ ಅನುಭವ ಹಂಚಿಕೊಂಡ ಕಿಯಾರ ಈ ದೃಶ್ಯವು ಇಷ್ಟು ಸುದ್ದಿಯಾಗಲು ಕಾರಣವೇನು ಎನ್ನುವುದನ್ನು ಹೇಳಿದ್ದಾರೆ. 

ಈ ಚಿತ್ರದ ದೃಶ್ಯವು ತಮ್ಮನ್ನು ಹೆಚ್ಚಿನ ಪ್ರಮಾಣದಲ್ಲಿ ಕಿಯಾರ ಅವರನ್ನು ಗುರುತಿಸುವಂತೆ ಮಾಡಿದ್ದು ಇದಕ್ಕೆ ಧನ್ಯವಾದ ಎಂದು ಹೇಳಿರುವ ಕಿಯಾರ ತಾವು ಮಾಡುವ ಕೆಲಸವನ್ನು ಶ್ರದ್ಧೆಯಿಂದಲೇ ನಿರ್ವಹಿಸುವುದಾಗಿ ಹೇಳಿದ್ದಾರೆ. ಅಲ್ಲದೇ ಈ ದೃಶ್ಯವನ್ನು ಮಾಡುವಾಗ ಜನ ಹೇಗೆ ಸ್ವೀಕರಿಸುವ ಬಗ್ಗೆ ಯೋಚಿಸಿರಲಿಲ್ಲ.  ಆದರೆ ಈಗ ಜನ ತಮ್ಮನ್ನು ಮೆಚ್ಚಿದ್ದಾರೆ. ಇದೊಂದು ನೈಜತೆಯನ್ನು ಹೊಂದಿರುವ ದೃಶ್ಯವಾಗಿದ್ದು ಈ ನಿಟ್ಟಿನಲ್ಲಿ ಸೂಕ್ತವಾಗಿ ನಿರ್ವಹಿಸಲು ಸಾಧ್ಯವಾಯಿತು ಎಂದಿದ್ದಾರೆ.